Site icon Vistara News

Dog Attack: ವಕೀಲನ ಮೇಲೆ ಶ್ವಾನ ದಾಳಿ; ಖಾಸಗಿ ಅಂಗಕ್ಕೆ ಕಚ್ಚಿದ ಪಿಟ್‌ ಬುಲ್‌

Dog attack

ಲಖನೌ: ಉತ್ತರಪ್ರದೇಶ(Uttar Pradesh)ದಲ್ಲಿ ಶ್ವಾನ ದಾಳಿ ನಿಲ್ಲುತ್ತಲೇ ಇಲ್ಲ. ಬಾರಬಂಕಿಯಲ್ಲಿ ವಕೀಲ(Lawyer)ರೊಬ್ಬರ ಮೇಲೆ ಪಿಟ್‌ಬುಲ್‌ ಶ್ವಾನ ದಾಳಿ(Dog Attack) ನಡೆಸಿರುವ ಪ್ರಕರಣ ದಾಖಲಾಗಿದೆ. ನಡುರಸ್ತೆಯಲ್ಲೇ ವಕೀಲನ ಖಾಸಗಿ ಅಂಗಕ್ಕೆ ನಾಯಿ ಕಚ್ಚಿದೆ. ಗಂಭೀರವಾಗಿ ಗಾಯಗೊಂಡಿದ್ದ ವಕೀಲನನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಲಕ್ನೋಗೆ ಕಳುಹಿಸಲಾಯಿತು.

ನಗರದ ಆವಾಸ್ ವಿಕಾಸ್ ಕಾಲೋನಿಯಲ್ಲಿ ಜುಲೈ 16ರಂದು ಸಂಜೆ ಈ ಘಟನೆ ನಡೆದಿದ್ದು, ಸಂತ್ರಸ್ತ ವಕೀಲ ವಿಕಾಸ್ ಭವನದ ಬಳಿ ವಾಸವಿದ್ದು, ಅಲ್ಲಿನ ಬಿಜೆಪಿ ಮುಖಂಡ, ದಿವಂಗತ ವಕೀಲ ಸುಧೀರ್ ಕುಮಾರ್ ಸಿಂಗ್ ಸಿಧು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಅಲ್ಲಿಂದ ಅವನು ತನ್ನ ಮನೆಯ ಕಡೆಗೆ ಹಿಂತಿರುಗುತ್ತಿರುವಾಗ ದರಿಯಾಬಾದ್ ಬ್ಲಾಕ್ ಮುಖ್ಯಸ್ಥ ಆಕಾಶ್ ಪಾಂಡೆ ಅವರ ಮನೆ ಬಳಿ ತಲುಪಿದ ತಕ್ಷಣ, ಅವರ ತಂದೆ ವಿವೇಕಾನಂದ ಪಾಂಡೆ ಅವರನ್ನು ಸಂಭಾಷಣೆಗೆ ನಿಲ್ಲಿಸಿದರು. ಈ ವೇಳೆ ಶೌಚಾಲಯಕ್ಕೆ ತೆರಳಲು ಗಡಿ ಗೋಡೆ ಬಳಿ ಬಂದಿದ್ದ ವೇಳೆ ಸಾಕು ನಾಯಿ ದಾಳಿ ಮಾಡಿದೆ ಎಂದಿದ್ದಾರೆ.

ಲಕ್ನೋದಲ್ಲಿ ಚಿಕಿತ್ಸೆ

ಕುಟುಂಬ ಸದಸ್ಯರ ಪ್ರಕಾರ, ನಾಯಿ ನೇರವಾಗಿ ವಕೀಲರ ಖಾಸಗಿ ಅಂಗದ ಮೇಲೆ ದಾಳಿ ಮಾಡಿತು. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಕೀಲರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಸ್ಥಿತಿಯನ್ನು ನೋಡಿದ ವೈದ್ಯರು ಪ್ರಥಮ ಚಿಕಿತ್ಸೆಯ ನಂತರವೇ ಅವರನ್ನು ಲಖ್ನಾಫ್ ಟ್ರಾಮಾ ಸೆಂಟರ್‌ಗೆ ಕಳುಹಿಸಿದ್ದಾರೆ. ಇದಾದ ಬಳಿಕ ವಕೀಲರ ಕುಟುಂಬದವರು ಅವರನ್ನು ಲಕ್ನೋ ವೈದ್ಯಕೀಯ ಕಾಲೇಜಿನ ಟ್ರಾಮಾ ಸೆಂಟರ್‌ಗೆ ದಾಖಲಿಸಿದ್ದರು. ಅಲ್ಲಿ ಅವರ ಚಿಕಿತ್ಸೆ ಮುಂದುವರಿಯುತ್ತಿದೆ ಎಂದಿದ್ದಾರೆ.

ಮೂತ್ರ ವಿಸರ್ಜನೆ ವೇಳೆ ನಡೆದಿತ್ತಾ ದಾಳಿ?

ಇನ್ನು ಮತ್ತೊಂದು ವರದಿ ಪ್ರಕಾರ ಅಂತ್ಯಕ್ರಿಯೆ ಮುಗಿಸಿಕೊಂಡು ಸಂತ್ರಸ್ತ ವಕೀಲ ವಾಪಾಸಾಗುತ್ತಿದ್ದಾಗ, ದಾರಿ ಮಧ್ಯೆ ಮೂತ್ರ ವಿಸರ್ಜನೆಗೆ ಮುಂದಾಗಿದ್ದರು. ಈ ವೇಳೆ ಶ್ವಾನ ದಾಳಿ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಒಬ್ಬ ಜವಾಬ್ದಾರಿಯುತ ವಕೀಲನಾಗಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಎಷ್ಟು ಸರಿ ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ. ಮತ್ತೊಂದೆಡೆ ಇಂತಹ ಅಪಾಯಕಾರಿ ಶ್ವಾನಗಳನ್ನು ಸಾಕುವವರ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ.

ಈ ಹಿಂದೆಯೂ ಪ್ರಕರಣಗಳು ನಡೆದಿವೆ

ಉತ್ತರ ಪ್ರದೇಶದಲ್ಲಿ ಪಿಟ್‌ಬುಲ್ ನಾಯಿ ದಾಳಿ ನಡೆದಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ನೋಯ್ಡಾ, ಗಾಜಿಯಾಬಾದ್, ಮೀರತ್ ಮತ್ತು ಲಕ್ನೋದಲ್ಲಿ ಪಿಟ್‌ಬುಲ್ ನಾಯಿಗಳ ದಾಳಿಯಲ್ಲಿ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿ ಗಾಯಾಳುಗಳ ಹೇಳಿಕೆ ಆಧರಿಸಿ ಪೊಲೀಸ್ ಪ್ರಕರಣಗಳನ್ನೂ ದಾಖಲಿಸಲಾಗಿದೆ. ಅದೇ ಸಮಯದಲ್ಲಿ, ದೆಹಲಿ ಎನ್‌ಸಿಆರ್‌ನಲ್ಲಿ ಇಂತಹ ಹಲವಾರು ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯವು ಈ ಅಪಾಯಕಾರಿ ನಾಯಿಗಳನ್ನು ಸಾಕುವುದನ್ನು ನಿಷೇಧಿಸಿದೆ. ಇದರ ಹೊರತಾಗಿಯೂ, ಅನೇಕ ಜನರು ಈ ನಾಯಿಗಳನ್ನು ಸಾಕುತ್ತಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಶ್ವಾನಗಳ ದಾಳಿಗೆ ಕುರಿಗಳು ಬಲಿ; ಕೊಡಗಿನಲ್ಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ

Exit mobile version