Site icon Vistara News

Driverless Car: ಭಾರತದಲ್ಲಿ ಡ್ರೈವರ್‌‌ಲೆಸ್ ಕಾರುಗಳಿಗೆ ಅನುಮತಿ ನೀಡಲ್ಲ ಎಂದ ನಿತಿನ್ ಗಡ್ಕರಿ

Nitin Gadkari

ನವದೆಹಲಿ: ರಸ್ತೆ ಸುರಕ್ಷತೆಯನ್ನು (Road Safety) ಖಾತ್ರಿಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು (Indian Government) ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು(Union Minister Nitin Gadkari). ಐಐಎಂ ನಾಗ್ಪುರ್ (IIM Nagpur) ಆಯೋಜಿಸಿದ್ದ ಝೀರೋ ಮೈಲ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗಡ್ಕರಿ ಅವರು, ಭಾರತದ ರಸ್ತೆಗಳಿಗೆ ಚಾಲಕರಹಿತ ಕಾರುಗಳು (Driverless Car) ಎಂದಿಗೂ ಇಳಿಯಲು ಸಾಧ್ಯವಿಲ್ಲ ಎದು ಹೇಳಿದರು.

ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಅಳವಡಿಸುವುದು, ರಸ್ತೆಗಳಲ್ಲಿನ ಬ್ಲಾಕ್ ಸ್ಪಾಟ್‌ಗಳನ್ನು ಕಡಿಮೆ ಮಾಡುವುದು ಮತ್ತು ಎಲೆಕ್ಟ್ರಿಕ್ ಮೋಟಾರ್ಸ್ ಆಕ್ಟ್ ಮೂಲಕ ದಂಡವನ್ನು ಹೆಚ್ಚಿಸುವಂತಹ ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಬದಲಾವಣೆಗಳ ಕುರಿತು ಗಡ್ಕರಿ ಅವರು ಇದೇ ವೇಳೆ ಒತ್ತಿ ಹೇಳಿದರು.

ನಾವು ಎಲೆಕ್ಟ್ರಿಕ್ ಮೋಟಾರ್ಸ್ ಆಕ್ಟ್ ಮೂಲಕ ದಂಡವನ್ನು ಹೆಚ್ಚಿಸಿದ್ದೇವೆ. ಆಂಬ್ಯುಲೆನ್ಸ್ ಮತ್ತು ಕ್ರೇನ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿರುತ್ತವೆ. ಇದರಿಂದ ಎಲ್ಲವೂ ಸುಗಮವಾಗಿ ಹೋಗುತ್ತದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದೆಂತೆ ನಾವು ಪ್ರತಿ ವರ್ಷವೂ ಜಾಗೃತಿಯನ್ನು ಮೂಡಿಸುತ್ತೇವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು.

ಭಾರತದಲ್ಲಿ ಡ್ರೈವರ್‌ಲೆಸ್ ಕಾರುಗಳ ಪರಿಚಯಕ್ಕೆ ತಮ್ಮ ವಿರೋಧವಿರುವುದಾಗಿ ಖಚಿತವಾಗಿ ಹೇಳಿದ ಗಡ್ಕರಿ ಅವರು, ಚಾಲಕರ ಉದ್ಯೋಗ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಚಾಲಕರಹಿತ ಕಾರುಗಳು ಭಾರತಕ್ಕೆ ಬರಲು ನಾನು ಎಂದಿಗೂ ಅನುಮತಿಸುವುದಿಲ್ಲ. ಏಕೆಂದರೆ ಇದು ಹಲವಾರು ಚಾಲಕರ ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ ಮತ್ತು ನಾನು ಹಾಗೆ ಮಾಡಲು ಬಿಡುವುದಿಲ್ಲ ಎಂದು ಅವರು ಹೇಳಿದರು.

ನಾವು ಟೆಸ್ಲಾ ಕಂಪನಿಯು ಭಾರತಕ್ಕೆ ಬರಲು ಅವಕಾಶ ನೀಡುತ್ತೇವೆ. ಆದರೆ ಅವರು ಚೀನಾದಲ್ಲಿ ಉತ್ಪಾದಿಸಲು ಮತ್ತು ಭಾರತದಲ್ಲಿ ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸುವುದಿಲ್ಲ. ಆ ರೀತಿ ಸಂಭವಿಸುವುದು ಅಸಾಧ್ಯವಾದ ಸಂಗತಿಯಾಗಿದೆ ಎಂದು ಗಡ್ಕರಿ ಅವರು ಹೇಳಿದರು.

ಇದೇ ವೇಳೆ ಹೈಡ್ರೋಜನ್ ಇಂಧನ ಮಹತ್ವದ ಬಗ್ಗೆ ಹೇಳಿದ ಗಡ್ಕರಿ ಅವರು, ಹೈಡ್ರೋಜನ್ ಭವಿಷ್ಯದ ಇಂಧನವಾಗಿದೆ ಮತ್ತು ಸಾರ್ವಜನಿಕ ಮೂಲಸೌಕರ್ಯವನ್ನು ಹೆಚ್ಚಿಸಲು ಸಹಾಯ ಮಾಡಲು ನಾವು ಅತ್ಯುತ್ತಮ ತಂತ್ರಜ್ಞಾನವನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Pot Holes: ವರ್ಷಾಂತ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಗುಂಡಿ ಮುಕ್ತಗೊಳಿಸಲು ಯತ್ನ: ನಿತಿನ್ ಗಡ್ಕರಿ

Exit mobile version