ಕರಾಚಿ: ಡ್ರೋನ್ ಮೂಲಕ ಭಾರತದೊಳಗೆ (pakistan drone) ಮಾದಕ ವಸ್ತುಗಳನ್ನು (drugs smuggling) ಕಳಿಸುತ್ತಿರುವುದು ನಿಜ ಎಂದು ಪಾಕಿಸ್ತಾನದ ಪ್ರಧಾನಿಯ (pakistan PM) ಸಹಾಯಕನೊಬ್ಬ ಟಿವಿ ಸಂದರ್ಶನದಲ್ಲಿಯೇ ಒಪ್ಪಿಕೊಂಡಿದ್ದಾನೆ. ಭಾರತ ಹಲವು ವರ್ಷಗಳಿಂದ ಸಾರುತ್ತಿದ್ದ ಸಂಗತಿ ಈ ಮೂಲಕ ಸಾಬೀತಾದಂತಾಗಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್‌ನ (Shehbaz Sharif) ರಕ್ಷಣಾ ವಿಶೇಷ ಸಹಾಯಕ ಮಲಿಕ್ ಮೊಹಮ್ಮದ್ ಅಹ್ಮದ್ ಖಾನ್ ಎಂಬಾತ, ಭಾರತ-ಪಾಕಿಸ್ತಾನ (India Pakistan border) ಗಡಿಯಾದ್ಯಂತ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಡ್ರೋನ್‌ಗಳ ಬಳಕೆಯನ್ನು ಒಪ್ಪಿಕೊಂಡಿದ್ದಾನೆ. ಭಾರತದ ಪಂಜಾಬ್‌ನ ಗಡಿಯ ಸಮೀಪದಲ್ಲಿರುವ ಕಸೂರ್ ನಗರದಲ್ಲಿ ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮಿರ್‌ಗೆ ನೀಡಿದ ಸಂದರ್ಶನದಲ್ಲಿ ಈ ಮಾತು ಹೇಳಲಾಗಿದೆ.
ಜುಲೈ 17ರಂದು ಮೀರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಕುರಿತ ಪ್ರಶ್ನೆಗೆ ಖಾನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾನೆ. ಪ್ರತಿ ಡ್ರೋನ್‌ಗೆ 10 ಕೆಜಿ ಹೆರಾಯಿನ್ ಅನ್ನು ಕಟ್ಟಿ ಕಳಿಸಲಾಗುತ್ತಿದೆ ಎಂದಿದ್ದಾನೆ. ಮಿರ್ ಅವರ ವೀಡಿಯೊದ ಪ್ರಕಾರ, ಮೂರು ಕಡೆ ಭಾರತದ ನೆಲದಿಂದ ಸುತ್ತುವರಿದ ಕಸೂರ್‌ನಲ್ಲಿ ನಿರಂತರ ಡ್ರೋನ್ ಚಲನವಲನದಿಂದಾಗಿ ಮೊಬೈಲ್ ಸಿಗ್ನಲ್‌ಗಳು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇಲ್ಲಿ ಗಡಿಯಾಚೆಗೆ ಡ್ರೋನ್ ಕಳಿಸುವ ಕಾರಣದಿಂದ ಪಾಕ್‌ನ ಭದ್ರತಾ ಏಜೆನ್ಸಿಗಳು ಈ ಪ್ರದೇಶದಲ್ಲಿ ಮೊಬೈಲ್ ಸಿಗ್ನಲ್‌ಗಳನ್ನು ಜಾಮ್ ಮಾಡುತ್ತಿವೆ ಎಂದು ಖಾನ್ ದೃಢಪಡಿಸಿದ್ದಾರೆ.
ಕಸೂರ್ ಭಾರತದ ಪಂಜಾಬ್‌ನ ಖೇಮ್‌ಕರನ್ ಮತ್ತು ಫಿರೋಜ್‌ಪುರ ಪ್ರದೇಶಗಳಿಗೆ ಸಮೀಪದಲ್ಲಿದೆ. ಪಂಜಾಬ್ ಪೊಲೀಸರು ಇತ್ತೀಚೆಗೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2022 ಮತ್ತು 2023 ಜುಲೈ ನಡುವೆ, ಫಿರೋಜ್‌ಪುರ ಜಿಲ್ಲೆಯೊಂದರಲ್ಲೇ NDPS (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್) ಕಾಯ್ದೆಯ ಅಡಿಯಲ್ಲಿ 795 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ವಶಪಡಿಸಿಕೊಂಡ ಹೆಚ್ಚಿನ ಮಾದಕ ದ್ರವ್ಯಗಳು ಪಾಕಿಸ್ತಾನದ ಗಡಿಯಲ್ಲಿವೆ.
2022ರಲ್ಲಿ ಗಡಿಯಾಚೆಯ ಸುಮಾರು 22 ಡ್ರೋನ್‌ಗಳನ್ನು ಸೆರೆಹಿಡಿಯಲಾಗಿದೆ ಎಂದು ಈ ವರ್ಷದ ಜನವರಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಹಿರಂಗಪಡಿಸಿತು. ಇವುಗಳಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, 316.988 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Narendra Modi: ಮೋದಿ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಡ್ರೋನ್ ಹಾರಾಟ; ಸಂಚಿನ ಶಂಕೆ, ತೀವ್ರ ತನಿಖೆ