Site icon Vistara News

Drugs on cruise:‌ ಕ್ಲೀನ್‌ ಚೀಟ್‌ ಪಡೆದ ಆರ್ಯನ್‌ ಖಾನ್ ಅಮೆರಿಕಕ್ಕೆ ಹಾರಲು ರೆಡಿ

ಮುಂಬಯಿ: ಡ್ರಗ್ಸ್ ಆನ್ ಕ್ರೂಸ್ (Drugs on cruise) ಪ್ರಕರಣದಲ್ಲಿ ಕ್ಲೀನ್‌ ಚಿಟ್‌ ಸಿಕ್ಕ ಬೆನ್ನಿಗೇ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಕಾನ್‌ ಇದೀಗ ಅಮೆರಿಕಕ್ಕೆ ಹೊರಟು ನಿಂತಿದ್ದಾರೆ. ಆರ್ಯನ್ ವಿದೇಶಕ್ಕೆ ಪ್ರಯಾಣಿಸದಂತೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ನಂತರ ಅವರ ಪಾಸ್‌ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈ ಪಾಸ್‌ಪೋರ್ಟ್‌ ಅನ್ನು ಮರಳಿ ಪಡೆದರೆ, ಆರ್ಯನ್ ವಿದೇಶ ಪ್ರಯಾಣಕ್ಕೆ ಯಾವುದೇ ಅಡಚಣೆ ಇರುವುದಿಲ್ಲ. ಇ-ಟೈಮ್ಸ್ ವರದಿ ಪ್ರಕಾರ ಅಮೆರಿಕಾಗೆ ತೆರಳುವುದು ಆರ್ಯನ್‌ನ ಮೊದಲ ಅಜೆಂಡಾ ಆಟಗಿದೆ.

ಆರ್ಯನ್ ವೆಬ್ ಸರಣಿ ಅಥವಾ ಚಲನಚಿತ್ರವಾಗುವ ಸಾಮರ್ಥ್ಯವನ್ನು ಹೊಂದಿರುವ ಬಹು ಮಾಧ್ಯಮ ಐಡಿಯಾಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಈ ಹಿಂದೆ ಮಾಧ್ಯಮ ವರದಿಯೊಂದು ಬಹಿರಂಗಪಡಿಸಿತ್ತು.

ವಾಸ್ತವವಾಗಿ, ಬಾಲಿವುಡ್‌ ಎಂಟರ್‌ಟೇನ್‌ಮೆಂಟ್‌ ಸುದ್ದಿಗಳ ಜಾಲತಾಣ ಪಿಂಕ್‌ ವಿಲ್ಲಾದಲ್ಲಿನ ವರದಿಯೊಂದು ಇತ್ತೀಚೆಗೆ ಆರ್ಯನ್ ಅವರು ಮುಂಬೈನ ಸ್ಟುಡಿಯೊದಲ್ಲಿ ವೆಬ್ ಸರಣಿಯ ಪರೀಕ್ಷಾತ್ಮಕ ಶೂಟ್ ಮಾಡಿದ್ದಾರೆ ಮತ್ತು ಅವರು ಯೋಜನೆಯನ್ನು ನಿರ್ದೇಶಿಸಲಿದ್ದಾರೆ ಎಂದು ಹೇಳಿತ್ತು. ಶಾರುಖ್ ಖಾನ್ ತಮ್ಮ ಮಗ ಆರ್ಯನ್ ಖಾನ್ ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಆಸಕ್ತಿ ಹೊಂದಿಲ್ಲ; ಆತ ನಿರ್ದೇಶಕನಾಗಲು ಬಯಸುತ್ತಾನೆ ಎಂದು ಪದೇ ಪದೇ ಹೇಳಿಕೊಂಡಿದ್ದಾರೆ.

ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ಆರ್ಯನ್ ಅವರನ್ನು ಕಳೆದ ವರ್ಷ ಅಕ್ಟೋಬರ್ 3 ರಂದು ಬಂಧಿಸಲಾಗಿತ್ತು. ಅಕ್ಟೋಬರ್ 2 ರಂದು ಸಮುದ್ರ ಮಧ್ಯದಲ್ಲಿ ಗೋವಾಕ್ಕೆ ತೆರಳುತ್ತಿದ್ದ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಮಾದಕವಸ್ತು ಪಾರ್ಟಿಯನ್ನು ನಾರ್ಕೋಟಿಕ್ಸ್ ಸಂಸ್ಥೆವಶಪಡಿಸಿಕೊಂಡಿತ್ತು.

ಆ ಬಳಿಕ ಆರ್ಯನ್‌ ಖಾನ್‌ ನ್ಯಾಯಾಂಗ ಬಂಧನದಲ್ಲಿದ್ದು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದರು. ಕೋರ್ಟಿಗೆ ಸಲ್ಲಿಸಿದ ಮನವಿಯಲ್ಲಿ, ಆರ್ಯನ್ ತಾನು ನಿರಪರಾಧಿ ಮತ್ತು ಯಾವುದೇ ಅಪರಾಧ ಮಾಡಿಲ್ಲ ಮತ್ತು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ| ಕ್ರೂಸ್‌ನಲ್ಲಿ ಡ್ರಗ್ಸ್‌ ಕೇಸ್‌, ಶಾರುಖ್‌ ಪುತ್ರ ಆರ್ಯನ್‌ ಖಾನ್‌ಗೆ ಕ್ಲೀನ್‌ ಚಿಟ್‌

Exit mobile version