Site icon Vistara News

Ganga River: ದುರ್ಗಾದೇವಿ ಮೂರ್ತಿ ವಿಸರ್ಜನೆ ಪೂರ್ವ, ನಂತರ ಗಂಗಾ ನದಿ ಮಾಲಿನ್ಯ ಪರೀಕ್ಷೆ!

Durga Idol immersion during dasara and water quality will be checked

ನವದೆಹಲಿ: ದಸರಾ ವೇಳೆ (Dussehra) ದುರ್ಗ ದೇವಿಗೆ ಪೂಜೆ ಮಾಡಿ(Durga Devi idol), ಮೂರ್ತಿಗಳನ್ನು ಗಂಗಾ ನದಿಯಲ್ಲಿ (Ganga River) ವಿಸರ್ಜನೆ ಮಾಡಲಾಗುತ್ತದೆ. ಇದರಿಂದ ನದಿ ಕಲ್ಮಷವಾಗುತ್ತಿದೆ ಎಂಬ ಕೂಗು ಪರಿಸರವಾದಿಗಳದ್ದು. ಈ ಹಿನ್ನೆಲೆಯಲ್ಲೇ ಬಿಹಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು(Bihar State Pollution Control Board), ಮೂರ್ತಿಗಳ ವಿಸರ್ಜನೆಯ ಮೊದಲು ಮತ್ತು ನಂತರದ ಗಂಗಾ ನದಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಸರಾ ವೇಳೆ ಉತ್ತರ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ದುರ್ಗಾ ಮಾತೆ ಮೂರ್ತಿಗಳಿಗೆ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಬಳಿಕ ಈ ಮೂರ್ತಿಗಳನ್ನು ಗಂಗಾನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಚಂದ್ರಶೇಖರ್ ಮಾತನಾಡಿ, ಕೃತಕ ಕೊಳಗಳಲ್ಲಿ ವಿಸರ್ಜನ ಮಾಡಲು ಮಂಡಳಿಯು ಪೂಜಾ ಸಂಘಟಕರಿಗೆ ನಿರ್ದೇಶನ ನೀಡಿದೆ. ಮೂರ್ತಿಗಳನ್ನು ವಿಸರ್ಜನೆ ಮಾಡುವ ಮೊದಲು ಮೊದಲು ಅಲಂಕಾರ ವಸ್ತುಗಳು ಮತ್ತು ಕೃತಕ ವಸ್ತುಗಳನ್ನು ತೆಗೆದುಹಾಕಲು ಸೂಚಿಸಲಾಗಿದೆ. ಮೂರ್ತಿಗಳನ್ನು ಮುಳುಗಿಸುವ ಮುನ್ನ ಮತ್ತು ನಂತರದ ಕೈಗೊಳ್ಳಲಾಗುವ ಸಮೀಕ್ಷೆಗಳು, ಮಂಡಳಿಯ ಮಾರ್ಗಸೂಚಿಗಳ ಉಲ್ಲಂಘನೆಯನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಮೂರ್ತಿಗಳ ವಿಸರ್ಜನಾ ಪೂರ್ವ ಗಂಗಾ ನದಿ ನೀರು ಸಮೀಕ್ಷೆಯನ್ನು ಈಗಾಗಲೇ ಅಕ್ಟೋಬರ್ 16ರಂದು ಕೈಗೊಳ್ಳಲಾಗಿದೆ ಮತ್ತು ವಿವಿಧ ನಗರಗಳಿಂದ ವರದಿಗಳನ್ನು ಸಂಗ್ರಹಿಸಲಾಗುತ್ತಿದೆ. ವಿಸರ್ಜನಾ ನಂತರದ ಸಮೀಕ್ಷೆಯನ್ನು ಅಕ್ಟೋಬರ್ 25, 27, 29, 31 ಮತ್ತು ನವೆಂಬರ್ 2ರಂದು ಕೈಗೊಳ್ಳಲಾಗುವುದು. ಅಲ್ಲದೇ ಪೂಜೆ ನಡೆಯುವ ಅಕ್ಟೋಬರ್ 24ರಂದು ನದಿ ನೀರು ಮಾಲ್ಯವನ್ನು ಪರೀಕ್ಷಿಸಲಾಗುತ್ತದೆ ಎಂದು ಚಂದ್ರಶೇಖರ್ ಅವರು ತಿಳಿಸಿದ್ದಾರೆ.

ಬಿಹಾರದ ಪಾಟ್ನಾ, ಗಯಾ, ಮುಝಾಫ್ಫರ್‌ಪುರ್, ಭಾಗಲ್ಪುರ್, ದರ್ಭಾಂಗ ಮತ್ತು ಪೂರ್ಣಿಯಾಗಳಂಥ ನಗರಗಳಲ್ಲಿ ಈ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಪಾಟ್ನಾದಲ್ಲಿ, ದಾನಪುರದಲ್ಲಿ ಪಿಪಾ ಪುಲ್ ಮತ್ತು ಗಂಗಾ ನದಿಯ ದಡದಲ್ಲಿರುವ ದಿಘಾ ಘಾಟ್, ಕುರ್ಜಿ ಘಾಟ್, ಭದ್ರಾ ಘಾಟ್, ಗಾಯಿ ಘಾಟ್, ಕಾನೂನು ಕಾಲೇಜು ಮತ್ತು ಕಂಗನ್ ಘಾಟ್‌ನಲ್ಲಿ ನೀರು ಪರೀಕ್ಷೆ ನಡೆಸಲಾಗುತ್ತಿದೆ. ದಸರಾ ವೇಳೆ ಉಂಟಾಗುವ ಶಬ್ಧ ಮಾಲಿನ್ಯದ ಕುರಿತು ಮಂಡಳಿಯು ಸಮೀಕ್ಷೆಯನ್ನು ಕೈಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Wrestlers Protest: ಕುಸ್ತಿಪಟುಗಳು ಗಂಗಾ ನದಿಗೆ ಪದಕ ಎಸೆಯುವುದನ್ನು ತಡೆದಿದ್ದು ಯಾರು?

ದಸರಾ ವೇಳೆ ಸಾಕಷ್ಟು ಶಬ್ಧ ಮಾಲಿನ್ಯ ಉಂಟಾಗುತ್ತದೆ ಹಾಗೂ ನಿಯಂತ್ರಿಸಬೇಕು ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಪಾಟ್ನಾದ ದಾನಪುರ್-ಕುರ್ಜಿಯಿಂದ ಗಾಂಧಿ ಮೈದಾನ ಮತ್ತು ಗಾಂಧಿ ಮೈದಾನದಿಂದ ಗಾಯ್ ಘಾಟ್‌ವೆಗೆ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಾಂಪ್ರದಾಯಿಕವಾಗಿ ನವರಾತ್ರಿ ಆಚರಣೆಯ ಒಂಬತ್ತು ದಿನಗಳ ನಂತರ ವಿಜಯ ದಶಮಿಯಂದು ದುರ್ಗಾದೇವಿಯ ವಿಗ್ರಹಗಳನ್ನು ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಬಿಹಾರ ರಾಜ್ಯದ ರಾಜಧಾನಿಯಲ್ಲಿ ಮತ್ತು ರಾಜ್ಯದ ಇತರ ಅನೇಕ ನಗರಗಳಲ್ಲಿ ಗಂಗಾ ನದಿಯಲ್ಲೇ ಹೆಚ್ಚಾಗಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version