ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ, ರಾಷ್ಟ್ರ ರಾಜಧಾನಿ ವ್ಯಾಪ್ತಿ (NCR), ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ ಸೇರಿ ಹಲವು ರಾಜ್ಯಗಳಲ್ಲಿ ಮಂಗಳವಾರ ರಾತ್ರಿ ಪ್ರಬಲ ಭೂಕಂಪ (Earthquake) ಸಂಭವಿಸಿದೆ. ಭೂಕಂಪನದ ಅನುಭವವಾಗುತ್ತಲೇ ಆತಂಕಗೊಂಡ ಜನರು ಮನೆಗಳಿಂದ ಓಡಿಬಂದಿದ್ದಾರೆ. ಈ ಕುರಿತ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಮನೆಯಿಂದ ಹೊರಗೆ ಬಂದ ಜನ
ಅಫಘಾನಿಸ್ತಾನದಲ್ಲಿ ರಿಕ್ಟರ್ ಮಾಪನದ ಪ್ರಕಾರ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರಿಂದಾಗಿಯೇ ಭಾರತದಲ್ಲೂ ಭೂಕಂಪನದ ಅನುಭವವಾಗಿದೆ. ಪಾಕಿಸ್ತಾನದಲ್ಲೂ ಭೂಕಂಪನದ ಅನುಭವ ಉಂಟಾಗಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಹಲವೆಡೆ ಭೂಕಂಪ ಸಂಭವಿಸಿದೆ. ಮನೆಗಳಲ್ಲಿ ಫ್ಯಾನ್ ಸೇರಿ ಹಲವು ವಸ್ತುಗಳು ಅಲುಗಾಡಿದ ಕಾರಣ ಜನರು ಮನೆಯಿಂದ ಹೊರಬಂದು, ಬಯಲು ಪ್ರದೇಶಗಳಲ್ಲಿ ಜಮೆಯಾಗಿದ್ದಾರೆ. ಈ ವಿಡಿಯೊಗಳು ಕೂಡ ಲಭ್ಯವಾಗಿವೆ.
ಅಲುಗಾಡಿದ ಫ್ಯಾನ್
ಜಮ್ಮು-ಕಾಶ್ಮೀರದಲ್ಲಿಯೇ 6.5 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಆದಾಗ್ಯೂ, ಯಾವುದೇ ಕಟ್ಟಡಗಳು ಕುಸಿದಿರುವ, ಸಾವು-ನೋವು ಸಂಭವಿಸಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಕಳೆದ ಕೆಲವು ತಿಂಗಳಲ್ಲಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಭೂಕಂಪ ಸಂಭವಿಸಿತ್ತು.
ಗುರುಗ್ರಾಮದಲ್ಲಿ ಭೂಕಂಪ
ಅಫಘಾನಿಸ್ತಾನದಲ್ಲಿ ಹೆಚ್ಚಿನ ಪ್ರಮಾಣದ ಭೂಕಂಪ ಸಂಭವಿಸಿದ ಕಾರಣ ಭಾರತದಲ್ಲಿ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ಟರ್ಕಿಯಲ್ಲಿ ಸಂಭವಿಸಿದ ಕಂಡು ಕೇಳರಿಯದ ಭೂಕಂಪದಿಂದ ಸಾವಿರಾರು ಜನ ಮೃತಪಟ್ಟಿದ್ದಾರೆ. ಇದುವರೆಗೂ ಟರ್ಕಿಯು ಭೂಕಂಪದಿಂದ ಸುಧಾರಿಸಿಕೊಂಡಿಲ್ಲ.
ಇದನ್ನೂ ಓದಿ: Ecuador Earthquake: ಪೆರು, ಈಕ್ವೇಡಾರ್ನಲ್ಲಿ ಪ್ರಬಲ ಭೂಕಂಪ; 14 ಮಂದಿ ಸಾವು, ಮನೆ-ಆಸ್ಪತ್ರೆಗಳೆಲ್ಲ ಧ್ವಂಸ