ವಿದೇಶ
Ecuador Earthquake: ಪೆರು, ಈಕ್ವೇಡಾರ್ನಲ್ಲಿ ಪ್ರಬಲ ಭೂಕಂಪ; 14 ಮಂದಿ ಸಾವು, ಮನೆ-ಆಸ್ಪತ್ರೆಗಳೆಲ್ಲ ಧ್ವಂಸ
‘ಭೂಕಂಪನದಿಂದ ಆದ ಹಾನಿಯನ್ನು ಪರಿಶೀಲನೆ ಮಾಡುತ್ತಿದ್ದೇವೆ. ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಯಾರೂ ಹೆದರಬೇಕಿಲ್ಲ. ಅವರ ಜತೆ ನಾನಿದ್ದೇನೆ ಎಂದು ಈಕ್ವೆಡಾರ್ ಅಧ್ಯಕ್ಷರು ಹೇಳಿದ್ದಾರೆ.
ನವದೆಹಲಿ: ದಕ್ಷಿಣ ಆಫ್ರಿಕಾದ ಈಕ್ವೇಡಾರ್ ಮತ್ತು ಪೆರು ದೇಶಗಳಲ್ಲಿ ಪ್ರಬಲ ಭೂಕಂಪನವಾಗಿದ್ದು (Ecuador Earthquake), 14 ಮಂದಿ ಮೃತಪಟ್ಟಿದ್ದಾರೆ. ಈಕ್ವೇಡಾರ್ನ ಕರಾವಳಿ ತೀರದಲ್ಲಿ ಮತ್ತು ಪೆರು ದೇಶದ ಉತ್ತರ ಭಾಗದಲ್ಲಿ ಶನಿವಾರ ಮಧ್ಯಾಹ್ನದ ಹೊತ್ತಿಗೆ ಭೂಮಿ ನಡುಗಿದೆ. ಯುಎಸ್ನ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.8 ಮ್ಯಾಗ್ನಿಟ್ಯೂಡ್ಗಳಷ್ಟು ದಾಖಲಾಗಿದೆ. ಗುವಾಯಾಸ್ ಪ್ರಾಂತ್ಯದ ಬಾಲಾವೊ ನಗರದಿಂದ 10 ಕಿಮೀ ದೂರದಲ್ಲಿ ಭೂ ಮೇಲ್ಮೈಯಿಂದ 66.4 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ. ಹಲವು ಮನೆಗಳು, ಶಾಲೆಗಳು, ಆಸ್ಪತ್ರೆಗಳು ಸೇರಿ, ಚಿಕ್ಕಪುಟ್ಟ ಅಂಗಡಿಗಳೆಲ್ಲ ಭೂಕಂಪನದ ಹೊಡೆತಕ್ಕೆ ಕುಸಿದುಬಿದ್ದಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುವ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಈಕ್ವೆಡಾರ್ ಅಧ್ಯಕ್ಷರಾದ ಗಿಲ್ಲೆರ್ಮೊ ಲಾಸ್ಸೊ ಟ್ವೀಟ್ ಮಾಡಿ ‘ಭೂಕಂಪನದಿಂದ ಆದ ಹಾನಿಯನ್ನು ಪರಿಶೀಲನೆ ಮಾಡುತ್ತಿದ್ದೇವೆ. ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಯಾರೂ ಹೆದರಬೇಕಿಲ್ಲ. ಅವರ ಜತೆ ನಾನಿದ್ದೇನೆ’ ಎಂದಿದ್ದಾರೆ. ಇನ್ನು ಒಂದು ಅಂದಾಜಿನ ಪ್ರಕಾರ 380ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 44 ಮನೆಗಳು ಸಂಪೂರ್ಣವಾಗಿ ಕುಸಿದುಬಿದ್ದಿವೆ. 90ಕ್ಕೂ ಹೆಚ್ಚು ಮನೆಗಳು ಹಾನಿಗೆ ಒಳಗಾಗಿವೆ. 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು, 30ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳು ಕೂಡ ಭೂಕಂಪದಿಂದ ಕುಸಿದಿವೆ. ಭೂಕುಸಿತ ಉಂಟಾಗಿದ್ದು, ಹಲವು ರಸ್ತೆಗಳಲ್ಲಿ ಸಂಚಾರ ತೊಡಕಾಗಿದೆ. ಸಂತಾ ರೋಸಾ ಏರ್ಪೋರ್ಟ್ಗೆ ಕೂಡ ಹಾನಿಯಾಗಿದ್ದು, ಹಾಗಂತ ವಿಮಾನ ಸಂಚಾರಕ್ಕೆ ಏನೂ ಸಮಸ್ಯೆಯಾಗಿಲ್ಲ ಎಂದು ವರದಿಯಾಗಿದೆ.
ಶನಿವಾರ ಮಧ್ಯಾಹ್ನದ ಹೊತ್ತಲ್ಲಿ ಮೊದಲು ಕಡಿಮೆ ಮಟ್ಟದಲ್ಲಿ ಒಮ್ಮೆ ಭೂಮಿ ನಡುಗಿತು. ಆದರೆ ಒಂದು ತಾಸಿನ ಬಳಿಕ ಅತ್ಯಂತ ಪ್ರಬಲವಾದ ಕಂಪನ ಉಂಟಾಗಿದೆ. ಈಕ್ವೇಡಾರ್ಗೆ ಹೋಲಿಸಿದರೆ ಪೆರುವಿನಲ್ಲಿ ಹಾನಿ ಪ್ರಮಾಣ ಕಡಿಮೆ ಇದೆ ಎಂದು ಹೇಳಲಾಗಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ತಂಡಗಳು ಭರದಿಂದ ಕಾರ್ಯಾಚರಣೆ ನಡೆಸುತ್ತಿವೆ.
ಇದನ್ನೂ ಓದಿ: Turkey Earthquake: ಟರ್ಕಿ ಭೂಕಂಪ; 178 ತಾಸು ಕಟ್ಟಡದ ಅವಶೇಷಗಳಲ್ಲಿ ಸಿಲುಕಿಯೂ ಬದುಕಿ ಬಂದ 6 ವರ್ಷದ ಬಾಲಕಿ
ಪ್ರಮುಖ ಸುದ್ದಿ
President of World Bank: ಭಾರತೀಯ ಮೂಲದ ಅಜಯ್ ಬಂಗಾ ವರ್ಲ್ಡ್ ಬ್ಯಾಂಕ್ ಅಧ್ಯಕ್ಷರಾಗುವುದು ಪಕ್ಕಾ!
President of World Bank: ಭಾರತೀಯ ಮೂಲದ ಅಮೆರಿಕನ್ ಅಜಯ್ ಬಂಗಾ (Ajay Banga) ಅವರು ಅವಿರೋಧವಾಗಿ ವಿಶ್ವ ಬ್ಯಾಂಕಿನ ಅಧ್ಯಕ್ಷರಾಗುವುದು ಪಕ್ಕಾ ಆಗಿದೆ. ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಲು ಬುಧವಾರ ಕೊನೆಯ ದಿನವಾಗಿತ್ತು. ಅಮೆರಿಕ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರವು ತಮ್ಮ ಅಭ್ಯರ್ಥಿಯನ್ನು ಹೆಸರಿಸಿಲ್ಲ.
ವಾಷಿಂಗ್ಟನ್, ಅಮೆರಿಕ: ಜಗತ್ತಿನಲ್ಲಿ ಬಡತನವನ್ನು ನಿರ್ಮೂಲನೆ ಮಾಡುವ ಪಣತೊಟ್ಟಿರುವ ವಿಶ್ವಬ್ಯಾಂಕ್(President of World Bank)ನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಮೆರಿಕನ್ ಅಜಯ್ ಬಂಗಾ (Ajay Banga) ಅವರು ಅವಿರೋಧವಾಗಿ ಆಯ್ಕೆಯಾಗುವುದು ಪಕ್ಕಾ ಆಗಿದೆ. ವರ್ಲ್ಡ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಲು ಬುಧವಾರ ಕೊನೆಯ ದಿನವಾಗಿತ್ತು. ಈ ಹುದ್ದೆಗೆ ಬೇರೆ ಯಾವುದೇ ರಾಷ್ಟ್ರವು ಅರ್ಜಿ ಸಲ್ಲಿಸಿಲ್ಲ. ಹಾಗಾಗಿ, ಅಜಯ್ ಬಂಗಾ ವರ್ಲ್ಡ್ ಬ್ಯಾಂಕ್ ಪ್ರೆಸಿಡೆಂಟ್ ಆಗಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಬಂಗಾ ಅವರನ್ನು ಅಮೆರಿಕದ ಪರವಾಗಿ ನಾಮನಿರ್ದೇಶನ ಮಾಡಿದ್ದರು.
ಜಗತ್ತಿನ ಬಹುತೇಕ ಟೆಕ್ ಕಂಪನಿಗಳು, ಉತ್ಪಾದನಾ ಕಂಪನಿಗಳು ಹಾಗೂ ಹಣಕಾಸು ಸಂಸ್ಥೆಗಳು ಭಾರತೀಯರು ಅಥವಾ ಭಾರತೀಯ ಮೂಲದ ವ್ಯಕ್ತಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈಗ ಈ ಸಾಲಿಗೆ ವರ್ಲ್ಡ್ ಬ್ಯಾಂಕ್ ಕೂಡಾ ಸೇರ್ಪಡೆಯಾಗಲಿದೆ.
ಮಾಸ್ಟರ್‌ಕಾರ್ಡ್ ಇಂಕ್‌ನ ಮಾಜಿ ಸಿಇಒ ಅಜಯ್ ಬಂಗಾ ಅವರನ್ನು ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದರು. ವರ್ಲ್ಡ್ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಅವರ ಕಳೆದ ವರ್ಷ ವಿಶ್ವ ಬ್ಯಾಂಕಿನ ಅಧ್ಯಕ್ಷ ಸ್ಥಾನವನ್ನು ತೊರೆಯುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತಿದೆ. ಈ ಸ್ಥಾನಕ್ಕೆ ಸದಸ್ಯ ರಾಷ್ಟ್ರಗಳು ವ್ಯಕ್ತಿಗಳನ್ನು ಸೂಚಿಸಬಹುದಾಗಿದೆ. ಆದರೆ, ಈವರೆಗೆ ಅಮೆರಿಕ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರವು ತಮ್ಮ ವ್ಯಕ್ತಿಯನ್ನು ಹೆಸರಿಸಲಿಲ್ಲ. ಹಾಗಾಗಿ, ಅಜಯ್ ಬಂಗಾ ಅವರು ಅಧ್ಯಕ್ಷರಾಗುವುದು ಬಹುತೇಕ ಪಕ್ಕಾ ಆಗಿದೆ.
ಈಗ ವಿಶ್ವ ಬ್ಯಾಂಕಿನ ಅಧ್ಯಕ್ಷ ಹುದ್ದೆಯನ್ನು ತೊರೆಯುತ್ತಿರುವ ಡೇವಿಡ್ ಮಾಲ್ಪಾಸ್ ಅವರನ್ನು 2019ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ನಾಮನಿರ್ದೇಶನ ಮಾಡಿದ್ದರು. ಡೇವಿಡ್ ಮಾಲ್ಪಾಸ್ ಅವರೂ ಅವಿರೋಧವಾಗಿಯೇ ಆಯ್ಕೆಯಾಗಿದ್ದರು. ವರ್ಲ್ಡ್ ಬ್ಯಾಂಕಿನ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯವಾಗಿ ಅಮೆರಿಕ ಪ್ರಜೆಗಳೇ ನಿರ್ವಹಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿದಿದೆ.
ಅಮೆರಿಕದ ಹೊರತಾಗಿ ಯಾವುದೇ ದೇಶಗಳು ಅಭ್ಯರ್ಥಿಗಳನ್ನು ಘೋಷಿಸದಿದ್ದರೂ, ವಿಶ್ವ ಬ್ಯಾಂಕ್ ನಿಯಮಗಳು ಸದಸ್ಯ ರಾಷ್ಟ್ರಗಳಿಗೆ ಬುಧವಾರ ಕೊನೆಯಾಗುವ ಗುಡುವಿನೊಳಗೇ ನಾಮನಿರ್ದೇಶನಗಳನ್ನು ಮಾಡಲು ಅವಕಾಶ ಮಾಡಿಕೊಡುತ್ತವೆ. ಬಂಗಾ ಅವರು ಖಾಸಗಿ ವಲಯದಲ್ಲಿ, ವಿಶೇಷವಾಗಿ ಹಣಕಾಸು ಮತ್ತು ಬ್ಯಾಂಕಿಂಗ್‌ನಲ್ಲಿ ಸುದೀರ್ಘ ವೃತ್ತಿಜೀವನವನ್ನು ಸವೆಸಿದ್ದಾರೆ. ಕ್ಲೈಮೇಟ್ ಸೈನ್ಸ್ ಕಡೆಗೆ ತಮ್ಮ ಬದ್ಧತೆಯನ್ನುಪ್ರದರ್ಶಿಸಿರುವ ಬಂಗಾ ಅವರ ಪ್ರಕಾರ, ಬಡತನ ಮತ್ತು ಪರಿಸರ ಸಮಸ್ಯೆಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಈ ನಿಟ್ಟಿನಲ್ಲಿ ಕೆಲಸ ಮಾಡಲು ಅವರು ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ.
63 ವರ್ಷದ ಬಂಗಾ ಅವರು ತಮ್ಮ ಪರವಾಗಿ ಬೆಂಬಲವನ್ನು ಕ್ರೋಡೀಕರಿಸಲು ಹೆಚ್ಚಿನ ಸಮಯವನ್ನು ಜಾಗತಿಕ ಪ್ರವಾಸದಲ್ಲಿ ಕಳೆದಿದ್ದಾರೆ. ಅವರು ಸಾಲದಾತ ಹಾಗೂ ಸಾಲ ಪಡೆಯುವ ರಾಷ್ಟ್ರಗಳನ್ನು ಪ್ರವಾಸ ಕೈಗೊಂಡು ಬೆಂಬಲ ಕೋರಿದ್ದಾರೆ. ಈ ಪೈಕಿ ಚೀನಾ, ಕೆನ್ಯಾ ಮತ್ತು ಐವೋರಿ ಕೋಸ್ಟ್, ಇಂಗ್ಲೆಂಡ್, ಬೆಲ್ಜಿಯಂ, ಪನಾಮಾ ಹಾಗೂ ಭಾರತ ಪ್ರಮುಖ ರಾಷ್ಟ್ರಗಳಾಗಿವೆ.
ಇದನ್ನೂ ಓದಿ: Ajay Banga : ವಿಶ್ವಬ್ಯಾಂಕ್ ಅಧ್ಯಕ್ಷ ಹುದ್ದೆಗೆ ಅಜಯ್ ಬಾಂಗಾ ಅಮೆರಿಕ ಅಭ್ಯರ್ಥಿ, ಚೀನಾ ಆಕ್ಷೇಪ
ವಾಷಿಂಗ್ಟನ್ ಮೂಲದ ವರ್ಲ್ಡ್ ಬ್ಯಾಂಕ್, ಕಳೆದ ಫೆಬ್ರವರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಿತ್ತು. ನಾಮನಿರ್ದೇಶನಕ್ಕಿರುವ ಗಡುವ ಮುಕ್ತಾಯವಾದ ಬಳಿಕ, ಸ್ಪರ್ಧಾಳಗಳನ್ನು ಬ್ಯಾಂಕ್ ಮಂಡಳಿಯು ಸಂದರ್ಶನ ಮಾಡುತ್ತದೆ. ಈ ಪ್ರಕ್ರಿಯೆ ಮೇ ತಿಂಗಳ ಆರಂಭದ ಹೊತ್ತಿಗೆ ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ.
ಗ್ಯಾಜೆಟ್ಸ್
Twitter: ಟ್ವಿಟರ್ ಜಾಹೀರಾತು ಆದಾಯದಲ್ಲಿ ಶೇ.89 ಕುಸಿತ! ಎಲಾನ್ ಮಸ್ಕ್‌ಗೆ ಆತಂಕ
Twitter: ಜಗತ್ತಿನ ಪ್ರಖ್ಯಾತ ಮೈಕ್ರೋಬ್ಲಾಗಿಂಗ್ ಟ್ವಿಟರ್ ವೇದಿಕೆಯನ್ನು ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಕಳೆದ ವರ್ಷ ಖರೀದಿಸಿದ್ದರು. ಆ ಬಳಿಕ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದರು. ಆದರೆ, ಆದಾಯದಲ್ಲಿ ನಿರೀಕ್ಷಿತ ಬೆಳವಣಿಗೆಯನ್ನು ಕಂಡಿಲ್ಲ.
ನವದೆಹಲಿ: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರು ಕಳೆದ ವರ್ಷ 44 ಶತಕೋಟಿ ಡಾಲರ್ ತೆತ್ತು ಪ್ರಖ್ಯಾತ ಮೈಕ್ರೋಬ್ಲಾಗಿಂಗ್ ವೇದಿಕೆ ಟ್ವಿಟರ್ (Twitter) ಖರೀದಿಸಿ, ಸಂಪೂರ್ಣವಾಗಿ ಬದಲಾಯಿಸಿದ್ದರು. ಅರ್ಧಕರ್ಧ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದರು. ಚಂದಾದಾರಿಕೆ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಮಾಡಿದ್ದರು. ಈ ಎಲ್ಲ ಕ್ರಮಗಳಿಂದ ಟ್ವಿಟರ್‌ಗೆ ಏನಾದರೂ ಲಾಭವಾಯಿತೇ? ಗೊತ್ತಿಲ್ಲ, ಆದರೆ, ಟ್ವಿಟರ್ ಆದಾಯದಲ್ಲಿ ಮಾತ್ರ ಕುಂಠಿತವಾಗಿದೆ. ವರದಿಗಳ ಪ್ರಕಾರ, ಟ್ವಿಟರ್‌ಗೆ ಜಾಹೀರಾತು ಆದಾಯದಲ್ಲಿ ಶೇ.89ರಷ್ಟು ಕುಸಿತವಾಗಿದೆ(Ad Revenue). ಇದು ಎಲಾನ್ ಮಸ್ಕ್ ಅವರ ಚಿಂತೆಗೆ ಕಾರಣವಾಗಿದೆ.
ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಸಿದ ಮೇಲೆ, ಅದರ ದೈನಿಂದನ ಬಳಕೆದಾರರಲ್ಲಿ ಹೆಚ್ಚಳವಾಗಿದೆ. ಆದರೆ, ಕಳೆದ ಅಕ್ಟೋಬರ್‌ನಿಂದ ಕಂಪನಿಯ ಆದಾಯದಲ್ಲಿ ಮಾತ್ರ ಭಾರೀ ಕುಸಿತವಾಗಿದೆ. ಈ ಬಗ್ಗೆ ಸ್ವತಃ ಎಲಾನ್ ಮಸ್ಕ್ ಅವರು ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಜಾಹೀರಾತು ಆದಾಯದ ಮೇಲೆ ಭಾರೀ ಹೊಡೆತ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.
ಎಚ್‌ಬಿಒ, ಅಮೆಜಾನ್, ಐಬಿಎಂ ಮತ್ತು ಕೊಕೊಕೋಲಾ ಟ್ವಿಟರ್‌ನ ಪ್ರಮುಖ ಜಾಹೀರಾತು ಗ್ರಾಹಕರಾಗಿದ್ದರು. ಕಳೆದ ಫೆಬ್ರವರಿಯವರೆಗೆ, ಮಾಂಡೆಲೆಜ್ ಇಂಟರ್‌ನ್ಯಾಷನಲ್ ಇಂಕ್, ಕೊಕೊಕೋಲಾ ಕಂಪನಿ, ಮೆರ್ಕ್ ಆ್ಯಂಡ್ ಕಂಪನಿ ಮತ್ತು ಹಿಲ್ಟನ್ ವರ್ಲ್ಡ್‌ವೈಡ್ ಹೋಲ್ಡಿಂಗ್ಸ್ ಇಂಕ್, ಎಟಿ ಆ್ಯಟಿ ಇಂಕ್ ಸೇರಿದಂತೆ ಅನೇಕ ಕಂಪನಿಗಳು ಇನ್ನೂ ಟ್ವಿಟರ್‌ನಲ್ಲಿ ಜಾಹೀರಾತಿಗಾಗಿ ವೆಚ್ಚ ಮಾಡಲು ಮುಂದಾಗಿಲ್ಲ ಎನ್ನಲಾಗಿದೆ.
ಇದರ ಮಧ್ಯೆಯೇ ಎಲಾನ್ ಮಸ್ಕ್ ಅವರು ಜಾಹೀರಾತುದಾರರಿಗೆ ಧೈರ್ಯ ತುಂಬಲು ಕ್ರಮಗಳನ್ನು ಕೈಗೊಂಡಿದ್ದಾರೆ. ಹಲವು ನಿಯಂತ್ರಣಗಳನ್ನು ಪರಿಚಯಿಸುವ ಮೂಲಕ ಟ್ವಿಟರ್ ಜಾಹೀರಾತು ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಇದು ನಿರ್ದಿಷ್ಟ ಕೀವರ್ಡ್‌ಗಳು ಅಥವಾ ಚಿತ್ರಗಳನ್ನು ಹೊಂದಿರುವ ಟ್ವೀಟ್‌ಗಳ ಜೊತೆಗೆ ತಮ್ಮ ಜಾಹೀರಾತುಗಳು ಕಾಣಿಸಿಕೊಳ್ಳುವುದನ್ನು ತಡೆಯಲು ಮಾರಾಟಗಾರರಿಗೆ ಅವಕಾಶ ನೀಡುತ್ತದೆ. ಕಳೆದ ವರ್ಷ, ಟ್ವಿಟರ್ ಜಾಹೀರಾತುದಾರರಿಗೆ ಗಮನಾರ್ಹ ರಿಯಾಯಿತಿಗಳನ್ನು ನೀಡಲು ಪ್ರಾರಂಭಿಸಿತು. ಇಷ್ಟಾಗಿಯೂ ನಿರೀಕ್ಷಿತ ಫಲಿತಾಂಶವನ್ನು ಪಡೆದುಕೊಳ್ಳಲು ಟ್ವಿಟರ್ ವಿಫಲವಾಗಿದೆ.
ಭಾರತದಲ್ಲಿ Twitter Blue ಸಬ್‌ಸ್ಕ್ರಿಪ್ಷನ್ ಶುರು, ತಿಂಗಳಿಗೆ 900 ರೂ.!
ಎಲಾನ್ ಮಸ್ಕ್ ಒಡೆತನದ ಟ್ವಿಟರ್ ತನ್ನ ಬ್ಲೂ ಸಬ್‌ಸ್ಕ್ರಿಪ್ಷನ್ (Twitter Blue) ಸೇವೆಯನ್ನು ಭಾರತದಲ್ಲೂ ಆರಂಭಿಸಿದೆ. ಈ ಸೇವೆ, ವೆಬ್ (Web) ಸೇರಿದಂತೆ ಐಒಎಸ್ (iOS) ಮತ್ತು ಆಂಡ್ರಾಯ್ಡ್ (Android) ಎರಡೂ ಸಾಧನಗಳಲ್ಲಿ ದೊರೆಯಲಿದೆ. ಟ್ವಿಟರ್ ಬ್ಲೂ ಚಂದಾದಾರರಿಗೆ ಅವರ ಪ್ರೊಫೈಲ್‌ನಲ್ಲಿ ಕೆಲವು ಇತರ ವೈಶಿಷ್ಟ್ಯಗಳೊಂದಿಗೆ ಪರಿಶೀಲಿಸಿದ ನೀಲಿ ಟಿಕ್ ಮಾರ್ಕ್ ನೀಡಲಾಗುತ್ತದೆ. ಈ ಟಿಕ್ ಮಾರ್ಕ್ ಪಡೆದ ಪ್ರೊಫೈಲ್‌ಗಳಿಗೆ ಅಧಿಕೃತೆ ಲಭ್ಯವಾಗುತ್ತದೆ.
ಒಂದು ವೇಳೆ ನೀವು, ಮೊಬೈಲ್‌ನಲ್ಲಿ ಮಾಸಿಕ ಟ್ವಿಟರ್ ಸಬ್‌ಸ್ಕ್ರಿಪ್ಷನ್ ಸೇವೆ ಆಯ್ಕೆ ಮಾಡಿಕೊಂಡರೆ, 900 ರೂ. ನೀಡಬೇಕಾಗುತ್ತದೆ. ಇದೇ ವೇಳೆ, ವೆಬ್‌ನಲ್ಲಿ ಪ್ರತಿ ತಿಂಗಳಿಗೆ 650 ರೂ. ಆಗಲಿದೆ. ಮಾಸಿಕ ಮಾತ್ರವಲ್ಲದೇ ವಾರ್ಷಿಕ ಚಂದಾದಾರಿಕೆಯನ್ನು ಭಾರತದಲ್ಲಿ ಟ್ವಿಟರ್ ನೀಡುತ್ತಿದೆ. ಅದರನ್ವಯ, ವಾರ್ಷಿಕ 6800 ರೂ. ಪಾವತಿಸಬೇಕಾಗುತ್ತದೆ. ಆಗ, ಮಾಸಿಕ ಅಂದಾಜು 566 ರೂ. ಆಗುತ್ತದೆ.
ಬ್ಲೂ ಟಿಕ್‌ನಿಂದ ಏನೇನು ಲಾಭ?
ಎಡಿಟ್ ಟ್ವೀಟ್ ಬಟನ್ ಸೌಲಭ್ಯ ದೊರೆಯಲಿದೆ
ಟ್ವೀಟ್ ಅನ್ ಡು ಮಾಡಬಹುದು
ದೀರ್ಘ ಮತ್ತು ಗುಣಾತ್ಮಕ ವಿಡಿಯೋ ಪೋಸ್ಟ್ ಮಾಡಬಹುದು
ಸಂಭಾಷಣೆಯಲ್ಲಿ ಆದ್ಯತೆ ದೊರೆಯುತ್ತದೆ
ಸಾಮಾನ್ಯ ಬಳಕೆದಾರರಿಗೆ ಹೋಲಿಸಿದರೆ, ಚಂದಾದಾರರಿಗೆ ಕಡಿಮೆ ಜಾಹೀರಾತು ಪ್ರದರ್ಶನ
ಆ್ಯಪ್ ಐಕಾನ್ ಕಸ್ಟಮೈಸ್ ಮಾಡಿಕೊಳ್ಳಬಹುದು
ಎನ್ಎಫ್‌ಟಿ ಪ್ರೊಫೈಲ್ ಪಿಕ್ಚರ್, ಥೀಮ್ಸ್
ನ್ಯಾವಿಗೇಷನ್ ಆಯ್ಕೆ ಕಸ್ಟಮೈಸ್ ಮಾಡಬಹುದು
ಸ್ಪೇಸ್ ಟ್ಯಾಬ್ ಅಕ್ಸೆಸ್, ಇದರಿಂದ ಟ್ವೀಟ್ ಅನ್ ಡು ಮಾಡಬಹುದು
ಅನ್‌ಲಿಮಿಟಿಡ್ ಬುಕ್ ಮಾರ್ಕ್ಸ್, ಫೋಲ್ಡರ್ ಕೂಡ ಬುಕ್ ಮಾರ್ಕ್ ಮಾಡಬಹುದು
ವಿದೇಶ
Indian Cultural Centre: ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಆಯ್ಕೆ
Indian Cultural Centre: ಕತಾರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಕಾರ್ಯಕಾರಿ ಸಮಿತಿಗೆ ಸುಬ್ರಹ್ಮಣ್ಯ ಹೆಬ್ಬಾಗಿಲು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಎರಡನೇ ಅವಧಿಗೆ ಇವರು ಮುಂದುವರಿಯುತ್ತಿದ್ದಾರೆ. ಐಸಿಸಿ ಅಂಗಸಂಸ್ಥೆಗಳ ಅಡಿಯಲ್ಲಿ ನೋಂದಣಿಯಾಗಿರುವ ಕತಾರ್‌ನ ಕರ್ನಾಟಕ ಸಂಘದ ಪ್ರತಿನಿಧಿಯಾಗಿ ಇವರು ಚುನಾಯಿತರಾಗಿದ್ದಾರೆ.
ದೊಹಾ (ಕತಾರ್): ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ನೂತನ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಕರ್ನಾಟಕದ ಬೈಂದೂರು ಮೂಲದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಆಯ್ಕೆಯಾಗಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಅವರು ಕತಾರ್‌ನ ಐಸಿಸಿ (Indian Cultural Centre) ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ 2023-2025 ಅವಧಿಗೆ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಂಗಸಂಸ್ಥೆಗಳ ಅಡಿಯಲ್ಲಿ ನೋಂದಣಿಯಾಗಿರುವ ಕತಾರ್‌ನ ಕರ್ನಾಟಕ ಸಂಘದ ಪ್ರತಿನಿಧಿಯಾಗಿ ಇವರು ಚುನಾಯಿತರಾಗಿದ್ದಾರೆ.
ಐಸಿಸಿ ಆಡಳಿತ ಸಮಿತಿಯ ರಚನೆಗಾಗಿ ನಡೆದ ಚುನಾವಣೆಯಲ್ಲಿ ಸಾವಿರಾರು ಸದಸ್ಯರು ಆನ್‌ಲೈನ್ “ಡಿಜಿಪೋಲ್“ ತಂತ್ರಾಂಶದ ಮೂಲಕ ತಮ್ಮ ಮತವನ್ನು ಚಲಾಯಿಸಿದ್ದರು. ಎರಡನೇ ಬಾರಿಗೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸುಬ್ರಹ್ಮಣ್ಯ ಅವರು ಜನರ ಸೇವೆಗೆ ಹೆಸರುವಾಸಿಯಾಗಿ ಈ ಸಂಸ್ಥೆಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ | Viral News : 14 ವರ್ಷದ ಕೆಲಸದಲ್ಲಿ 4,500 ಬಾರಿ ಸಿಗರೇಟ್ ಸೇದಿದ ಉದ್ಯೋಗಿ; 9 ಲಕ್ಷ ರೂ. ದಂಡ ಹಾಕಿದ ಸಂಸ್ಥೆ!
ಒಂದೂವರೆ ದಶಕದಿಂದ ಕತಾರ್‌ನಲ್ಲಿ ಕಾರ್ಯನಿಮಿತ್ತ ನೆಲೆಸಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕಳೆದ ಒಂದು ದಶಕದಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಕೊರೊನಾ ಕಾಲದಲ್ಲಿ ಜನರಿಗೆ ಆಹಾರದ ಸಾಮಗ್ರಿ ಹಾಗೂ ಊಟದ ವ್ಯವಸ್ಥೆ, ಒಂದೇ ಭಾರತ್ ಅಡಿಯಲ್ಲಿ ನೂರಾರು ಭಾರತೀಯರನ್ನು ಮಾತೃಭೂಮಿಗೆ ಹಿಂದಿರುಗಲು ವಿಮಾನ ಸೇವೆ ಕಲ್ಪಿಸಿ ಕೊಡುವುದಕ್ಕೆ ಸಹಾಯ ಮಾಡಿದ್ದರು. ಹಾಗೆಯೇ ರಕ್ತದಾನ ಶಿಬಿರ, ಪರಿಸರ ದಿನಾಚರಣೆಗೆ ಸಸಿ ನೆಡುವ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇನ್ನು ವಿವಿಧ ಕಾರಣಗಳಿಂದ ನಿಧನರಾಗುವ ಭಾರತೀಯರ ಮೃತದೇಹವನ್ನು ಕತಾರ್‌ನಿಂದ ಮಾತೃಭೂಮಿಗೆ ತ್ವರಿತ ಗತಿಯಲ್ಲಿ ತಲುಪಿಸುವುದರಲ್ಲಿ ಇವರ ಕೊಡುಗೆ ಅಪಾರ. ಕಳೆದ ಆರು ವರ್ಷಗಳಲ್ಲಿ ಇಂತಹ ನೂರಾರು ಸೇವಾ ಕಾರ್ಯಗಳನ್ನು ನೆರವೇರಿಸಿದ್ದಾರೆ. ಕರ್ನಾಟಕ ಸಂಘ ಕತಾರ್, ಭಾರತೀಯ ಸಮುದಾಯ ಹಿತೈಷಿ ವೇದಿಕೆ (ಐ.ಸಿ.ಬಿ.ಎಫ್) ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ (ಐ.ಸಿ.ಸಿ) ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ | Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ
ಭಾರತೀಯ ದೂತವಾಸದ ಅಧಿಕಾರಿಗಳು ಹಾಗೂ ರಾಯಭಾರಿಗಳು ಇವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ರಾಯಭಾರಿಗಳಾದ ದೀಪಕ್ ಮಿತ್ತಲ್ ಹಾಗೂ ನಿಕಟ ಪೂರ್ವ ರಾಯಭಾರಿ ಕುಮರನ್ ಅವರು ಸುಬ್ರಹ್ಮಣ್ಯ ಅವರ ಸೇವೆಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿದ್ದಾರೆ. ಹಲವಾರು ಸ್ಥಳೀಯ ಸಂಘ ಸಂಸ್ಥೆಗಳಿಂದ ಇವರನ್ನು ಗೌರವಿಸಿ ಸನ್ಮಾನಿಸಿದೆ.
ವಿದೇಶ
Philippine Ferry Fire: ಸಾಗರದ ಮಧ್ಯೆ ಬೆಂಕಿಯಿಂದ ಹೊತ್ತಿ ಉರಿದ ದೋಣಿ; 31 ಪ್ರಯಾಣಿಕರ ದುರ್ಮರಣ
ಅನೇಕ ಪ್ರಯಾಣಿಕರು ಕತ್ತಲಲ್ಲೇ ನೀರಿಗೆ ಹಾರಿ, ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಇನ್ನೂ ಕೆಲವರಿಗೆ ಮೈಯಿಗೆಲ್ಲ ಬೆಂಕಿ ಹೊತ್ತಿಕೊಂಡು, ಉರಿ ತಾಳಲಾರದೆ ನೀರಿಗೆ ಧುಮುಕಿದ್ದಾರೆ. ಅವರನ್ನೆಲ್ಲ ರಕ್ಷಣೆ ಮಾಡಲಾಗಿದೆ.
ಫಿಲಿಪೈನ್ಸ್ ದೇಶದ ದಕ್ಷಿಣ ಭಾಗದ ಸಾಗರದಲ್ಲಿ ಸಂಚಾರ ಮಾಡುತ್ತಿದ್ದ, 250 ಕ್ಕೂ ಹೆಚ್ಚು ಪ್ರಯಾಣಿಕರನ್ನೊಳಗೊಂಡ ದೋಣಿ ಬೆಂಕಿ (Philippine Ferry Fire)ಯಿಂದ ಹೊತ್ತಿ ಉರಿದು, ಸುಮಾರು 31 ಮಂದಿ ಮೃತಪಟ್ಟಿದ್ದಾರೆ. ರಾತ್ರಿ ವೇಳೆ ದುರ್ಘಟನೆ ನಡೆದಿದ್ದು, ಅನೇಕ ಪ್ರಯಾಣಿಕರು ಕತ್ತಲಲ್ಲೇ ನೀರಿಗೆ ಹಾರಿ, ಪ್ರಾಣ ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಇನ್ನೂ ಕೆಲವರಿಗೆ ಮೈಯಿಗೆಲ್ಲ ಬೆಂಕಿ ಹೊತ್ತಿಕೊಂಡು, ಉರಿ ತಾಳಲಾರದೆ ನೀರಿಗೆ ಧುಮುಕಿದ್ದಾರೆ. ಹೀಗೆ ನೀರಿಗೆ ಜಂಪ್ ಮಾಡಿದವರನ್ನು, ಅಲ್ಲಿನ ನೌಕಾಪಡೆ ಸಿಬ್ಬಂದಿ, ಕರಾವಳಿ ರಕ್ಷಕ ಪಡೆ ಸಿಬ್ಬಂದಿ, ಸ್ಥಳೀಯ ಮೀನುಗಾರರು ಎಲ್ಲ ಸೇರಿ ರಕ್ಷಣೆ ಮಾಡಿದ್ದಾರೆ. ಸುಮಾರು 200 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ದೋಣಿ ಲೇಡಿ ಮೇರಿ ಜಾಯ್ -3 (Lady Mary Joy 3) ಜಾಂಬೊಂಗಾ ನಗರದ ಮಿಂಡಾನೋ ದ್ವೀಪದಿಂದ, ಸುಲು ಪ್ರಾಂತ್ಯದಲ್ಲಿರುವ ಜೋಲೋ ದ್ವೀಪಕ್ಕೆ ಸಂಚಾರ ಮಾಡುತ್ತಿತ್ತು. ಇದರಲ್ಲಿ 36 ಮಂದಿ ದೋಣಿ ನಿರ್ವಹಣಾ ಸಿಬ್ಬಂದಿಯೇ ಇದ್ದರು. ಮೊದಲ ದೊಡ್ಡದಾಗಿ ಸ್ಫೋಟವುಂಟಾಯಿತು. ಬಳಿಕ ಬೆಂಕಿ ಧಗಧಗನೆ ಹೊತ್ತಿ ಉರಿಯಿತು. 35ಕ್ಕೂ ಹೆಚ್ಚು ಮಂದಿ ತಕ್ಷಣವೇ ನೀರಿಗೆ ಧುಮುಕಿದರು. ರಾತ್ರಿ 11ಗಂಟೆ ಹೊತ್ತಿಗೆ ಈ ಘಟನೆ ನಡೆದಿದ್ದರಿಂದ, ಆ ಸಮಯದಲ್ಲಿ ಪ್ರಯಾಣಿಕರೆಲ್ಲ ನಿದ್ರಿಸುತ್ತಿದ್ದರು. ಕೆಲವರು ಆಗ ತಾನೇ ಮಲಗಿದ್ದರು. ಒಮ್ಮೆಲೇ ಏನಾಯಿತು ಎಂದು ಗೊತ್ತಾಗದೆ ದಿಗಿಲು ಬಿದ್ದರು ಎಂದು ಸ್ಥಳೀಯ ವಿಪತ್ತು ನಿರ್ವಹಣಾ ಅಧಿಕಾರಿ ನಿಕ್ಸನ್ ಅಲೋಂಜೊ ತಿಳಿಸಿದ್ದಾರೆ. ಹಾಗೇ, ರಕ್ಷಣಾ ಕಾರ್ಯಾಚರಣೆ ಶುರು ಮಾಡಿದಾಗ 18 ಶವಗಳು ಸಿಕ್ಕಿದ್ದವು, ಅದೀಗ ದ್ವಿಗುಣಗೊಂಡಿದೆ. ಬಹುತೇಕ ಮೃತದೇಹಗಳು ಸಂಪೂರ್ಣ ಸುಟ್ಟು ಹೋಗಿವೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Boat tragedy | ಗಂಗಾ ನದಿಯಲ್ಲಿ ದೋಣಿ ಮಗುಚಿ ದುರಂತ, 10 ಮಂದಿ ಕಾರ್ಮಿಕರು ನಾಪತ್ತೆ
ಹೀಗೆ ಪ್ರಯಾಣಿಕರ ದೋಣಿಯಲ್ಲಿ ಸ್ಫೋಟವಾಗಿ, ಬೆಂಕಿ ಹೊತ್ತಿದ್ದು ಬಸಿಲಾನ್ ಎಂಬ ಪ್ರಾಂತ್ಯದಲ್ಲಿ. ತಕ್ಷಣವೇ ನೌಕಾಪಡೆ, ಕರಾವಳಿ ರಕ್ಷಕ ಪಡೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಅಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದ ಹಲವು ಫೋಟೋ, ವಿಡಿಯೊಗಳನ್ನು ಬಸಿಲಾನ್ ಪ್ರಾಂತ್ಯದ ಸರ್ಕಾರವೇ ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆ ಮಾಡಿದೆ. ಹಾಗೇ, ಪ್ರಮುಖ ಮಾಧ್ಯಮಗಳಿಗೂ ನೀಡಿದೆ. ಇಲ್ಲಿ ದೋಣಿ ದುರಂತದಲ್ಲಿ ಸಿಲುಕಿದವರ ರಕ್ಷಣೆಗೆ ಬಸಿಲಾನ್ ಪ್ರಾಂತ್ಯದ ನಿವಾಸಿಗಳೂ ಕೈಜೋಡಿಸಿದ್ದಾರೆ ಎನ್ನಲಾಗಿದೆ. ದೋಣಿಯೂ ಸಂಪೂರ್ಣ ಸುಟ್ಟುಹೋಗಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಫಿಲಿಪೈನ್ಸ್ನ ರಾಜಧಾನಿ ಮನಿಲಾದ ಪೂರ್ವ ಭಾಗದಲ್ಲಿ 134 ಪ್ರಯಾಣಿಕರನ್ನು ಒಳಗೊಂಡ ದೋಣಿಯೊಂದು ಬೆಂಕಿಗೆ ಆಹುತಿಯಾಗಿತ್ತು. ಅದರಲ್ಲಿ 7 ಮಂದಿ ಮೃತಪಟ್ಟಿದ್ದರು.
-
ಸುವಚನ10 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ7 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಪ್ರಮುಖ ಸುದ್ದಿ16 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕರ್ನಾಟಕ8 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಕ್ರಿಕೆಟ್23 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್23 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ19 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್20 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ