ನವದೆಹಲಿ: ಟಿಬೆಟ್‌ನಲ್ಲಿ ಸೋಮವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಮೇಘಾಲಯದಲ್ಲೂ ಭೂಕಂಪನದ ಅನುಭವವಾಗಿದೆ.
ಭೂಕಂಪನದ ತೀವ್ರತೆ ಟಿಬೆಟ್‌ನಲ್ಲಿ 4.2 ಮತ್ತು ಮೇಘಾಲಯದಲ್ಲಿ 4.0 ಇತ್ತು ಎಂದು ನ್ಯಾಶನಲ್ ಸೆಂಟರ್ ಫಾರ್ ಸೆಸ್ಮಾಲಜಿ (NCS) ತಿಳಿಸಿದೆ. ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 4.01 ಗಂಟೆಗೆ ಭೂಕಂಪ ಸಂಭವಿಸಿದೆ.
ಮೇಘಾಲಯದ ತುರಾ ಎಂಬಲ್ಲಿ ಭೂಮಿಯಿಂದ 10 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು. ಭೂಕಂಪನದಿಂದ ಸಾವು-ನೋವು ಆಗಿರುವ ಬಗ್ಗೆ ಇದುವರೆಗೆ ವರದಿಯಾಗಿಲ್ಲ.