ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೆ (Union Budget 2024) ಮುನ್ನಾ ದಿನವಾದ ಸೋಮವಾರ (ಜುಲೈ 22) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಸಂಸತ್ನಲ್ಲಿ ಆರ್ಥಿಕ ಸಮೀಕ್ಷಾ (Economic Survey 2023-24) ವರದಿಯನ್ನು ಮಂಡಿಸಿದ್ದು, ಭಾರತದ ಆರ್ಥಿಕತೆಯು ಸಕಾರಾತ್ಮಕ ಏಳಿಗೆ ಹೊಂದುತ್ತಿದೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ. ಭಾರತದ ಆರ್ಥಿಕತೆ, ವಿದೇಶಿ ನೇರ ಬಂಡವಾಳ ಹೂಡಿಕೆ, ಹಣದುಬ್ಬರ, ಉದ್ಯೋಗ ಸೇರಿ ಹಲವು ವಿಷಯಗಳನ್ನು ಆರ್ಥಿಕ ಸಮೀಕ್ಷೆಯು ಒಳಗೊಂಡಿದೆ. ಆರ್ಥಿಕ ಸಮೀಕ್ಷೆಯ ಪ್ರಮುಖ ಅಂಶಗಳು ಇಲ್ಲಿವೆ.
ಆರ್ಥಿಕ ಸಮೀಕ್ಷೆಯ ಹೈಲೈಟ್ಸ್….
- ಪ್ರಸಕ್ತ ಸಾಲಿನಲ್ಲಿ ಉತ್ತಮ ಮುಂಗಾರು, ನೀತಿ-ನಿರೂಪಣೆಗಳ ಬದಲಾವಣೆ ಇಲ್ಲದ ಕಾರಣ 2024-25ನೇ ಹಣಕಾಸು ವರ್ಷದಲ್ಲಿ ದೇಶದ ಹಣದುಬ್ಬರ ಪ್ರಮಾಣವು ಶೇ.4.5ರಿಂದ ಶೇ.4.1ಕ್ಕೆ ಇಳಿಕೆಯಾಗಲಿದೆ ಎಂಬುದಾಗಿ ಆರ್ಬಿಐ ಉಲ್ಲೇಖಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ವರದಿ ಕೂಡ ಹಣದುಬ್ಬರವು ಶೇ.4.2ಕ್ಕೆ ಇಳಿಯಲಿದೆ ಎಂಬುದಾಗಿ ತಿಳಿಸಿದೆ. ಇದರಿಂದಾಗಿ ದೇಶದ ಜನರ ಮೇಲಿನ ಹೊರೆ ಕಡಿಮೆಯಾಗಲಿದೆ.
- ಕೊರೊನಾ ಬಿಕ್ಕಟ್ಟಿನ ನಂತರ ಭಾರತದ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಇದರಿಂದಾಗಿ ದೇಶದ ವಿತ್ತೀಯ ವ್ಯವಸ್ಥೆಯಲ್ಲಿ ಗಣನೀಯವಾಗಿ ಚೇತರಿಕೆ ಕಂಡಿದೆ. ಹಾಗಾಗಿ, 2024-25ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿಯು ಶೇ.6.5ರಿಂದ ಶೇ.7ಕ್ಕೆ ಏರಿಕೆಯಾಗುವ ಅಂದಾಜಿದೆ.
The RBI and the IMF have projected that India's consumer price inflation will progressively align towards the inflation target in FY26. Assuming a normal monsoon and no further external or policy shocks, the RBI expects headline inflation to be 4.5 per cent in FY25 and 4.1 per… pic.twitter.com/aJqRH4pkmW
— ANI (@ANI) July 22, 2024
- ಸೇವಾ ವಲಯದಲ್ಲಿ ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತಿದೆ. ನಿರ್ಮಾಣ, ಉತ್ಪಾದನೆ ಸೇರಿ ಹಲವು ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಯಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
- 2023ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಹೊಸ ಬಂಡವಾಳ ಹೂಡಿಕೆ ಪ್ರಮಾಣವು 47.6 ಶತಕೋಟಿ ಡಾಲರ್ ಇತ್ತು. ಆದರೆ, ಇದು 2024ನೇ ಹಣಕಾಸು ವರ್ಷದಲ್ಲಿ 45.8 ಶತಕೋಟಿ ಡಾಲರ್ಗೆ ಇಳಿಕೆಯಾಗಿದೆ. ಜಾಗತಿಕ ಬೆಳವಣಿಗೆಗಳು ಇದಕ್ಕೆ ಕಾರಣವಾಗಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹೂಡಿಕೆ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ ಇದೆ.
Economic Survey 2023-24 conservatively projects a real GDP growth of 6.5–7 per cent in FY25, with risks evenly balanced, cognizant of the fact that the market expectations are on the higher side. pic.twitter.com/Kvdn4jBdDP
— ANI (@ANI) July 22, 2024
- ಜಾಗತಿಕ ರಾಜಕೀಯ ಬಿಕ್ಕಟ್ಟು, ಆಕ್ರಮಣಗಳ ಹಿನ್ನೆಲೆಯಲ್ಲಿ ವಿದೇಶಿ ವ್ಯಾಪಾರ ಪ್ರಮಾಣವೂ ಇಳಿಕೆ ಕಂಡಿದೆ. 2023ನೇ ಸಾಲಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2024ನೇ ಸಾಲಿನಲ್ಲಿ ವ್ಯಾಪಾರದ ಕೊರತೆಯು ಶೇ.0.07ರಷ್ಟಿದೆ.
ಇದನ್ನೂ ಓದಿ: Economic Survey 2023-24: ದೇಶದ ಆರ್ಥಿಕತೆ ಸುಭದ್ರ, ಜಿಡಿಪಿ 7% ಬೆಳವಣಿಗೆ; ಆರ್ಥಿಕ ಸಮೀಕ್ಷೆ ಪ್ರಕಟ