Site icon Vistara News

Amartya Sen: ನಮ್ಮ ತಂದೆ ಬದುಕಿದ್ದಾರೆ; ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ನಿಧನ ಸುದ್ದಿ ಅಲ್ಲಗಳೆದ ಪುತ್ರಿ

Economist Amartya Sen's daughter denied her father death news

ನವದೆಹಲಿ: ಭಾರತೀಯ ಅರ್ಥಶಾಸ್ತ್ರಜ್ಞ (Veteran economist) ಹಾಗೂ ನೊಬೆಲ್ ಪುಸ್ಕೃತ ಅಮರ್ತ್ಯ ಸೇನ್ (Nobel laureate Amartya Sen) ಅವರು ನಿಧನರಾಗಿದ್ದಾರೆಂಬ ವದಂತಿಯ ಬೆನ್ನಲ್ಲೇ ಮಾಹಿತಿ ನೀಡಿರುವ ಅವರು ಪುತ್ರಿ, ನಂದನಾ ದೇಬ್ ಸೇನ್ ಅವರು, ತಮ್ಮ ತಂದೆ ಆರೋಗ್ಯವಾಗಿದ್ದಾರೆಂದು ಹೇಳಿದ್ದಾರೆ. ನೊಬೆಲ್ ಪುರಸ್ಕೃತ ಕ್ಲೌಡಿಯಾ ಗೋಲ್ಡಿನ್ ಅವರು ಅಮರ್ತ್ಯ ಸೇನ್ ನಿಧನರಾಗಿದ್ದಾರೆಂದು ಟ್ವೀಟ್ ಮಾಡಿದ್ದಾರೆಂದು ಪಿಟಿಐ ಸುದ್ದಿ ಸಂಸ್ಥೆ ಹೇಳಿತ್ತು. ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಇದರ ಬೆನ್ನಲ್ಲೇ ಸೇನ್ ಅವರ ಪುತ್ರಿ ಮಾಹಿತಿ ನೀಡಿ, ತಮ್ಮ ತಂದೆ ಆರೋಗ್ಯವಾಗಿದ್ದಾರೆಂದು ತಿಳಿಸಿದ್ದಾರೆಂದು ಮತ್ತೆ ಸುದ್ದಿ ಸಂಸ್ಥೆ ಹೇಳಿದೆ. ಅಲ್ಲದೇ, ಕ್ಲೌಡಿಯಾ ಗೋಲ್ಡಿನ್ ಅವರ ಫೇಕ್ ಟ್ವಿಟರ್ ಅಕೌಂಟ್ ಮೂಲಕ, ಅಮರ್ತ್ಯ ಸೇನ್ ನಿಧನ ಸುದ್ದಿಯನ್ನು ಹರಿ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ಅಮರ್ತ್ಯ ಕುಮಾರ್ ಸೇನ್ ಅವರು, ಅರ್ಥಶಾಸ್ತ್ರಜ್ಞರು ಮಾತ್ರವಲ್ಲದೇ ಫಿಲಾಸಫರ್ ಕೂಡ. 1972ರಿಂದಲೂ ಅವರು ಇಂಗ್ಲೆಂಡ್‌ ಮತ್ತು ಅಮೆರಿಕದಲ್ಲಿದ್ದು, ಅರ್ಥಶಾಸ್ತ್ರವನ್ನು ಬೋಧಿಸುತ್ತಿದ್ದಾರೆ. ಕಲ್ಯಾಣ ಅರ್ಥಶಾಸ್ತ್ರ, ಸೋಷಿಯೋ ಚಾಯ್ಸ್ ಥಿಯರಿ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯ, ಕ್ಷಾಮಗಳ ಆರ್ಥಿಕ ಸಿದ್ಧಾಂತಗಳು, ಅಭಿವೃದ್ಧಿ ಅರ್ಥಶಾಸ್ತ್ರ, ಸಾರ್ವಜನಿಕ ಆರೋಗ್ಯ ಮತ್ತು ದೇಶಗಳ ಯೋಗಕ್ಷೇಮ ಕ್ರಮಗಳ ವಲಯದಲ್ಲಿ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Economics: ನಾಡಿನ ಸಾಮಾನ್ಯರಿಗೂ ಅರ್ಥವಾಗಬೇಕಾಗಿರುವ ಅರ್ಥಶಾಸ್ತ್ರ

ಅಮರ್ತ್ಯ ಸೇನ್ ಅವರು ಸದ್ಯ ಥಾಮಸ್ ಡಬ್ಲ್ಯೂ. ಲಾಮೊಂಟ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಅವರು ಹಿಂದೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಟ್ರಿನಿಟಿ ಕಾಲೇಜಿನ ಮಾಸ್ಟರ್ ಆಗಿ ಸೇವೆ ಸಲ್ಲಿಸಿದ್ದರು.

ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ 1998ರಲ್ಲಿ ಅವರಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು. ಮಾರನೇ ವರ್ಷವೇ, ಭಾರತ ಸರ್ಕಾರವು ಅವರಿಗೆ, ದೇಶದ ಅತ್ಯುನ್ನತ ನಾಗರಿಕ ಗೌರವಾದ ಭಾರತ ರತ್ನ ಪ್ರಶಸ್ತಿ ನೀಡಿತ್ತು. ಕಲ್ಯಾಣ ಅರ್ಥ ಶಾಸ್ತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪುರಸ್ಕಾರವನ್ನು ನೀಡಲಾಗಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version