Site icon Vistara News

ಆ್ಯಮ್‌ವೇ ವಿರುದ್ಧ ಇ.ಡಿ ಚಾರ್ಜ್‌ಶೀಟ್, 4050 ಕೋಟಿ ಅಪರಾಧದ ಆದಾಯ!

ED chargesheet against Amway India, Rs 4050 crore crime proceeds

ನವದೆಹಲಿ: ಭಾರತದಲ್ಲಿ ಮಲ್ಟಿ ಲೇವಲ್ ಮಾರ್ಕೆಟಿಂಗ್ (Multi Level Marketing) ಕ್ರಾಂತಿ ಸೃಷ್ಟಿಸಿದ್ದ ಆ್ಯಮ್‌ವೇ ಇಂಡಿಯಾ (Amway India) ಕಂಪನಿ ಸಂಕಟಕ್ಕೆ ಸಿಲುಕಿದೆ. ಜಾರಿ ನಿರ್ದೇಶನಾಲಯವು ಕಂಪನಿಯ ವಿರುದ್ದ ಚಾರ್ಜ್‌ಶೀಟ್ (ED Charge sheet) ಸಲ್ಲಿಸಿದ್ದು, 4 ಸಾವಿರ ಕೋಟಿ ರೂ. ಅಧಿಕ ಅಪರಾಧ ಆದಾಯವನ್ನು ಗುರುತಿಸಿದೆ. ಕಮಿಷನ್‌ ಆಕರ್ಷಣೆಯ ಲಕ್ಷಾಂತರ ಜನರನ್ನು ಸದಸ್ಯರನ್ನಾಗಿಸಿಕೊಳ್ಳುವ ಮೂಲಕ ಭಾರೀ ಕ್ರೇಝ್ ‌ಸೃಷ್ಟಿಸಿತ್ತು. ಒಮ್ಮೆ ಸದಸ್ಯರಾದವರು ತಮ್ಮ ಕೆಳಗೆ ಸದಸ್ಯರನ್ನು ಸೇರಿಸುತ್ತಾ ಹೋದಂತೆ ಅವರಿಗೆ ಕಮಿಷನ್ (Commission) ಹೆಚ್ಚಾತ್ತಾ ಹೋಗುತ್ತದೆ ಎಂದು ತನಿಖಾ ಸಂಸ್ಥೆ ಸೋಮವಾರ ತಿಳಿಸಿದೆ. ಹೆಚ್ಚಿನ ಸಂಖ್ಯೆಯ ಚಂದಾದಾರರನ್ನು ವಂಚಿಸುವ ಮೂಲಕ ಆ್ಯಮ್‌ವೇ 4,050 ಕೋಟಿ ರೂ. ಮೌಲ್ಯದ ಅಪರಾಧದ ಆದಾಯ ಗಳಿಸಿದೆ ಇ ಡಿ ಹೇಳಿದೆ.

ದೇಶಾದ್ಯಂತ 5.5 ಲಕ್ಷ ನೇರ ಮಾರಾಟಗಾರರನ್ನು ಹೊಂದಿರುವ ಆ್ಯಮ್‌ವೇ ಇಂಡಿಯಾ ಎಂಟರ್‌ಪ್ರೈಸ್ ಪ್ರೈ ಲಿ. ವಿರುದ್ಧ 2011 ರಲ್ಲಿ ತೆಲಂಗಾಣ ಪೊಲೀಸರು ದಾಖಲಿಸಿದ ವಿವಿಧ ಪ್ರಥಮ ಮಾಹಿತಿ ವರದಿಗಳ (ಎಫ್‌ಐಆರ್) ಆಧಾರದ ಮೇಲೆ, ಇ.ಡಿ ಅಕ್ರಮ ಹಣ ವರ್ಗಾವಣೆಯ ತನಿಖೆಯನ್ನು ಆರಂಭಿಸಿತ್ತು.

ಆ್ಯಮ್‌ವೇ ಕಂಪನಿಯು ಸರಕುಗಳ ಮಾರಾಟದ ನೆಪದಲ್ಲಿ ಅಕ್ರಮ ‘ಹಣ ಚಲಾವಣೆ ಯೋಜನೆ’ಯನ್ನು ಉತ್ತೇಜಿಸುತ್ತಿತ್ತು. ಹೊಸ ಸದಸ್ಯರನ್ನು ಸರಳವಾಗಿ ನೋಂದಾಯಿಸುವ ಮೂಲಕ ಮತ್ತು ಈ ಕಮಿಷನ್‌ಗಳು/ಪ್ರೋತ್ಸಾಹಕಗಳ ಮೂಲಕ ಹೆಚ್ಚಿನ ಕಮಿಷನ್/ಪ್ರೋತ್ಸಾಹದ ಭರವಸೆ ನೀಡುವ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದೆ ಎಂದು ಕಂಪನಿಯ ವಿರುದ್ಧ ಆರೋಪಿಸಲಾಗಿತ್ತು.

ಆ್ಯಮ್‌ವೇ ನೇರ ಮಾರಾಟದ ನೆಪದಲ್ಲಿ ಪಿರಮಿಡ್ ಯೋಜನೆಯನ್ನು ಪ್ರಚಾರ ಮಾಡುತ್ತಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ. “ಸರಕುಗಳನ್ನು ನೇರವಾಗಿ ಅಂತಿಮ ಗ್ರಾಹಕರಿಗೆ ಮಾರಾಟ ಮಾಡುವ ಬದಲು, ಕಂಪನಿ ಸದಸ್ಯರ ಬಹು-ಹಂತದ ಮಾರ್ಕೆಟಿಂಗ್ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ವಿತರಕರ ಹೆಸರಿನಲ್ಲಿ ಅನೇಕ ಮಧ್ಯವರ್ತಿಗಳನ್ನು ಪರಿಚಯಿಸಿದೆ. ಯೋಜನೆಯು ಉತ್ಪನ್ನಗಳ ಮಾರಾಟದ ಮೇಲೆ ಕೇಂದ್ರೀಕರಿಸುವುದಿಲ್ಲ ಬದಲಿಗೆ ಪ್ರಾಥಮಿಕವಾಗಿ ಸದಸ್ಯರ ನೋಂದಣಿಯ ಮೇಲೆ ಉಳಿದುಕೊಂಡಿದೆ. ಒಂದೊಮ್ಮೆ ಹೊಸಬರು ಮತ್ತೊಬ್ಬರ ಮೂಲಕ ಹಣ ಪಾವತಿಸಿದರೆ ಅವನು/ಅವಳು ಪ್ರತಿನಿಧಿಯಾಗುತ್ತಾರೆ ಮತ್ತು ಕಮಿಷನ್ ಗಳಿಸಲು ಅವನು/ಅವಳು ಹೊಸ ಸದಸ್ಯರನ್ನು ನೋಂದಾಯಿಸಬೇಕು. ಹೀಗೆ ಸದಸ್ಯರ ಸಂಖ್ಯೆ ಹೆಚ್ಚಾದಂತೆ ಮೇಲಿನವರಿಗೆ ಐಷಾರಾಮಿ ಪ್ರವಾಸಗಳಂತ ಹೆಚ್ಚಿನ ಕಮಿಷನ್‌ಗಳನ್ನು ನೀಡಲಾಗುತ್ತಿತ್ತು ಎಂದು ಇ.ಡಿ ಸೋಮವಾರ ತಿಳಿಸಿದೆ.

ಆ್ಯಮ್‌ ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಯೋಜನೆ ಮತ್ತು ಹಣ ಚಲಾವಣೆ ಯೋಜನೆಯನ್ನು ನಿರ್ವಹಿಸುತ್ತಿದೆ ಮತ್ತು ಚಂದಾದಾರರಿಂದ ದೊಡ್ಡ ಮೊತ್ತವನ್ನು ಸಂಗ್ರಹಿಸಿದೆ. ಹೀಗೆ ಆ್ಯಮ್‌ವೇ ಸುಮಾರು 4050.21 ಕೋಟಿ ರೂ. ಅಪರಾಧದ ಆದಾಯವನ್ನು ಗಳಿಸಿದೆ ಎಂದು ಇ.ಡಿ ತನ್ನ ಚಾರ್ಜ್‌ಶೀಟ್ ‌ತಿಳಿಸಿದೆ.

ಆ್ಯಮ್‌ವೇ ಸದಸ್ಯರಿಂದ ಸಂಗ್ರಹಿಸಿದ ಹಣವನ್ನು ಬೇರೆಡೆಗೆ ವರ್ಗಾವಣೆ ಮಾಡಿದೆ ಎಂದು ಉಲ್ಲೇಖಿಸಿರುವ ಇ.ಡಿ, ಸದಸ್ಯರಿಂದ ಸಂಗ್ರಹಿಸಲಾದ 2,859 ಕೋಟಿ ರೂ. ಹಣವನ್ನು ಡಿವಿಡೆಂಡ್, ರಾಯಲ್ಟಿ ಮತ್ತು ಇತರ ವೆಚ್ಚಗಳ ಪಾವತಿಗಳ ಹೆಸರಿನಲ್ಲಿ ಸಾಗರೋತ್ತರ ಹೂಡಿಕೆದಾರರ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿತ್ತು ಎಂದು ಇ.ಡಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: ಬೆಟ್ಟಿಂಗ್‌ ಆ್ಯಪ್‌ನಿಂದ ಕಾಂಗ್ರೆಸ್‌ ಸಿಎಂಗೆ 508 ಕೋಟಿ ರೂ. ಲಂಚ; ಇ.ಡಿ ಸ್ಫೋಟಕ ಹೇಳಿಕೆ

Exit mobile version