ನವದೆಹಲಿ: ಬುಧವಾರದಂದು ಜಾರಿ ನಿರ್ದೇಶನಾಲಯವು (Enforcement Directorate ED) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ವಿರುದ್ಧ ಪ್ರಾಥಮಿಕ ತನಿಖೆಯನ್ನು ಆರಂಭಿಸಿದೆ ಎಂದು ತಿಳಿದು ಬಂದಿದೆ .ಭಾರತೀಯ ರಿಸರ್ವ್ ಬ್ಯಾಂಕ್ (RBI) ಫೆಬ್ರವರಿ 29ರಿಂದ ಹೊಸ ಠೇವಣಿಗಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ ಬಳಿಕ, ಇಡಿ ಈಗ ತನಿಖೆಗೆ ಮುಂದಾಗಿದೆ.
ಕೇಂದ್ರ ತನಿಖಾ ಸಂಸ್ಥೆಯ ಈ ಕ್ರಮವು ಪೇಮೆಂಟ್ಸ್ ಬ್ಯಾಕ್‌ಗೆ ಹೊಸ ಹಿನ್ನಡೆಯನ್ನು ತಂದಿದೆ. ವಿಶೇಷವಾಗಿ ಆರ್‌ಬಿಐ ಘಟಕದ ವಿರುದ್ಧ ತನ್ನ ನಿರ್ಬಂಧದ ಯಾವುದೇ ಪರಿಶೀಲನೆಯನ್ನು ತಳ್ಳಿಹಾಕಿದ ನಂತರ. “ಸದ್ಯಕ್ಕೆ ಈ (ಪಿಪಿಬಿಎಲ್) ನಿರ್ಧಾರದ ಬಗ್ಗೆ ಯಾವುದೇ ವಿಮರ್ಶೆ ಇಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ನೀವು ನಿರ್ಧಾರದ ಮರುಪರಿಶೀಲನೆಯನ್ನು ನಿರೀಕ್ಷಿಸುತ್ತಿದ್ದರೆ, ನಿರ್ಧಾರದ ಬಗ್ಗೆ ಯಾವುದೇ ಪರಿಶೀಲನೆ ಇಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ” ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಹಿಂದೆ ಹೇಳಿದ್ದರು.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಏನಾದೂರ ಫೆಮಾ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡು ಬಂದರೆ ಜಾರಿ ನಿರ್ದೇಶನಾಲಯವು ಬ್ಯಾಂಕ್ ವಿರುದ್ದ ತನಿಖೆಯನ್ನು ಆರಂಭಿಸುವ ಸಾಧ್ಯತೆಗಳಿವೆ ಎಂದು ಕಳೆದ ವಾರವೇ ಸುದ್ದಿಯಾಗಿತ್ತು.
ಜಾರಿ ನಿರ್ದೇಶನಾಲಯವು ತನಿಖೆಯನ್ನು ಆರಂಭಿಸಿದೆ ಎಂಬ ಸುದ್ದಿಯನ್ನು ಸಂಸ್ಥೆಯು ನಿರಾಕರಿಸಿದೆ. ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರನ್ನು ಏಜೆನ್ಸಿ ತನಿಖೆ ನಡೆಸುತ್ತಿದೆ ಎಂಬ ವರದಿಗಳನ್ನು ತಳ್ಳಿ ಹಾಕಿದ್ದಾರೆ. ಯಾವುದೇ ನಿಯಂತ್ರಕ ಏಜೆನ್ಸಿಯಿಂದ ಪೇಟಿಎಂ ಅಥವಾ ಅದರ ಯಾವುದೇ ಸಹವರ್ತಿಗಳು ತನಿಖೆಗೆ ಒಳಪಡುವುದಿಲ್ಲ ಎಂದು ನಾವು ಸತತವಾಗಿ ಭರವಸೆ ನೀಡಿದ್ದೇವೆ. ಹಿರಿಯ ಸರ್ಕಾರಿ ಅಧಿಕಾರಿಗಳ ಇತ್ತೀಚಿನ ಹೇಳಿಕೆಗಳಿಂದ ಈ ನಿಲುವು ಮತ್ತಷ್ಟು ಮಾನ್ಯವಾಗಿದೆ. ನಿಯಂತ್ರಕ ಮಾರ್ಗದರ್ಶನದ ಅನುಸರಣೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಮತ್ತು ಭಾರತದಾದ್ಯಂತ ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ತಲುಪಲು ನಮ್ಮ ಪ್ರಕ್ರಿಯೆಗಳನ್ನು ನಿರಂತರವಾಗಿ ಹೆಚ್ಚಿಸಲು ನಮ್ಮ ಬದ್ಧತೆ ಅಚಲವಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: ಆರ್‌ಬಿಐ ಬಳಿಕ ಇಪಿಎಫ್‌ಒನಿಂದಲೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ!