Site icon Vistara News

Abdel Fattah el-Sisi | 2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ತ್‌ ಅಧ್ಯಕ್ಷರಿಗೆ ಆಹ್ವಾನ

Abdel Fattah el-Sisi Republic Day Of India

ನವದೆಹಲಿ: ದೇಶದಲ್ಲಿ ಪ್ರತಿವರ್ಷ ಅದ್ಧೂರಿಯಾಗಿ ನಡೆಯುವ ಗಣರಾಜ್ಯೋತ್ಸವಕ್ಕೆ ವಿದೇಶದ ಗಣ್ಯರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸುವುದು ಸಂಪ್ರದಾಯ. ಅದರಂತೆ, 2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಈಜಿಪ್ತ್‌‌ ಅಧ್ಯಕ್ಷ ಅಬ್ದೆಲ್ ಫತೇಹ್‌ ಅಲ್‌ ಸಿಸಿ (Abdel Fattah el-Sisi) ಅವರನ್ನು ಕೇಂದ್ರ ಸರ್ಕಾರ ಆಹ್ವಾನಿಸಿದೆ.

ಭಾರತದ ಜತೆ ಉತ್ತಮ ಬಾಂಧವ್ಯ ಹೊಂದಿರುವ ರಾಷ್ಟ್ರಗಳ ಗಣ್ಯರನ್ನು ಆಹ್ವಾನಿಸುವುದು ರೂಢಿಯಾಗಿದೆ. ಈಜಿಪ್ತ್‌ ಕೂಡ ಭಾರತದ ಜತೆ ಉತ್ತಮ ಸಂಬಂಧ ಹೊಂದಿದ್ದು, ಹಾಗಾಗಿ ಆಹ್ವಾನಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಅಕ್ಟೋಬರ್‌ 16ರಂದು ಈಜಿಪ್ತ್‌ ಪ್ರವಾಸ ಕೈಗೊಂಡಿದ್ದಾಗಲೇ ಸಿಸಿ ಅವರಿಗೆ ಔಪಚಾರಿಕವಾಗಿ ಆಹ್ವಾನ ನೀಡಿದ್ದರು. ಈಗ ಮತ್ತೊಮ್ಮೆ ಆಹ್ವಾನಿಸಲಾಗಿದೆ.

ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ವಿದೇಶಿ ಗಣ್ಯರಿಗೆ ವಿಶೇಷ ಗೌರವ ವಂದನೆ ಸಲ್ಲಿಸಲಾಗುತ್ತದೆ. ಕೊರೊನಾ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ 2021 ಹಾಗೂ 2022ರ ಗಣರಾಜ್ಯೋತ್ಸವದಲ್ಲಿ ವಿದೇಶಿ ಗಣ್ಯರು ಪಾಲ್ಗೊಂಡಿರಲಿಲ್ಲ. 2020ರಲ್ಲಿ ಬ್ರೆಜಿಲ್‌ ಅಂದಿನ ಅಧ್ಯಕ್ಷ ಜೈರ್‌ ಬೋಲ್ಸೊನಾರೊ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಇದನ್ನೂ ಓದಿ | Central Vista | ಸೆಂಟ್ರಲ್‌ ವಿಸ್ಟಾ ಕಾರ್ಮಿಕರ ಜತೆ ಮೋದಿ ಮಾತು, ಗಣರಾಜ್ಯೋತ್ಸವದ ಪರೇಡ್‌ಗೂ ಆಹ್ವಾನ!

Exit mobile version