Site icon Vistara News

Shiv Sena : ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಶಿವಸೇನಾ ನೂತನ ಮುಖ್ಯಸ್ಥ

Eknath Shinde named new Shiv Sena chief

ಮುಂಬಯಿ: ಶಿವ ಸೇನಾ (Shiv Sena) ಪಕ್ಷದ ನೂತನ ಮುಖ್ಯಸ್ಥರಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಆಯ್ಕೆಯಾಗಿದ್ದಾರೆ. ಮಂಗಳವಾರ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಈ ಆಯ್ಕೆಯನ್ನು ಘೋಷಿಸಲಾಗಿದೆ. ಶಿಂಧೆ ಬಣಕ್ಕೆ ಪಕ್ಷದ ಹೆಸರು ಹಾಗೂ ಚಿಹ್ನೆಯಾಗಿರುವ ಬಿಲ್ಲು- ಬಾಣವನ್ನು ಬಳಸಲು ಕೇಂದ್ರ ಚುನಾವಣಾ ಆಯೋಗ ಅನುಮತಿ ನೀಡಿದ ಬಳಿಕ ನಡೆದ ಮೊದಲ ಸಭೆ ಇದಾಗಿದೆ.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಇಂದು ಪಕ್ಷದ ಸಭೆಯ ನಡೆಯಿತು. ಅದರಲ್ಲಿ ಏಕನಾಥ್ ಶಿಂಧೆ ಅವರನ್ನೇ ಪಕ್ಷದ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಒಪ್ಪಿಗೆ ಸಿಕ್ಕಿತು ಎಂದು ಮಹಾರಾಷ್ಟ್ರ ಸರಕಾರದ ಕೈಗಾರಿಕಾ ಸಚಿವ ಉದಯ್​ ಸಾಮಂತ್​ ಅವರು ಹೇಳಿದ್ದಾರೆ.

ಇದನ್ನೂ ಓದಿ: Eknath Shinde: ಏಕನಾಥ್‌ ಶಿಂಧೆಗೆ ಜಯ, ಶಿವಸೇನೆಯ ಬಿಲ್ಲು-ಬಾಣ ಗುರುತು ಶಿಂಧೆ ಬಣಕ್ಕೆ, ಉದ್ಧವ್‌ ಠಾಕ್ರೆಗೆ ಮುಖಭಂಗ

ಸಭೆಯಲ್ಲಿ ಪಕ್ಷದ ಶಾಸಕರು, ಲೋಕಸಭಾ ಸದಸ್ಯರು ಹಾಗೂ ಇತರ ನಾಯಕರು ಭಾಗವಹಿಸಿದ್ದರು. ಇವರೆಲ್ಲರೂ ಉದ್ದವ್​ಠಾಕ್ರೆ ಅವರಿಂದ ಪ್ರತ್ಯೇಕಗೊಂಡವರಾಗಿದ್ದಾರೆ.

ಪಕ್ಷದ ಚಿಹ್ನೆ ಹಾಗೂ ಹಣಕಾಸಿನ ವ್ಯವಹಾರವನ್ನು ಏಕನಾಥ್ ಶಿಂಧೆ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವುದಕ್ಕೆ ತಡೆ ನೀಡುವಂತೆ ಮಾಜಿ ಸಿಎಂ ಉದ್ಧವ್​ ಠಾಕ್ರೆ ಸುಪ್ರೀಮ್​ ಕೋರ್ಟ್​ ಮೆಟ್ಟಿಲೇರಿದ್ದರು. ಆ ಪ್ರಕರಣ ಫೆ. 22ರಂದು ವಿಚಾರಣೆಗೆ ಬರಲಿದೆ. ಹೀಗಾಗಿ ಮಂಗಳವಾರವೇ ಶಿಂಧೆ ಮುಖ್ಯಸ್ಥ ಸ್ಥಾನ ವಹಿಸಿಕೊಂಡಿದ್ದಾರೆ.

ಉದ್ಧವ್​ ಠಾಕ್ರೆ ಹಾಗೂ ಏಕನಾಥ್​ ಶಿಂಧೆ ಬಣ ಪಕ್ಷದ ಮೇಲೆ ಪ್ರಭುತ್ವ ಸಾಧಿಸಲು ಹೆಣಗಾಡುತ್ತಿದೆ. ಆದರೆ, ಚಿಹ್ನೆ ಹಾಗೂ ಹೆಸರನ್ನು ಪಡೆಯುವ ಮೂಲಕ ಏಕನಾಥ್ ಶಿಂಧೆ ಗುಂಪು ಬಲ ಹೆಚ್ಚಿಸಿಕೊಂಡಿದೆ.

Exit mobile version