ಅಸ್ಸಾಂನ ಗುವಾಹಟಿಯ ಪಂಚತಾರಾ ಹೋಟೆಲ್ ಒಂದರಲ್ಲಿ ತಮ್ಮ ಬೆಂಬಲಿಗ ಶಾಸಕರ ಜತೆಗೆ ಏಕನಾಥ್ ಶಿಂಧೆ ನಗುಮುಖದಿಂದ ಕುಶಲೋಪರಿ ನಡೆಸುತ್ತಿರುವ ಫೋಟೋ ಹಾಗೂ ವಿಡಿಯೋಗಳು ಬಹಿರಂಗಗೊಂಡಿವೆ.
ಸೋಮವಾರ ಪಕ್ಷದಿಂದ ಬಂಡಾಯ ಎಬ್ಬಿಸಿ ಸೂರತ್ಗೆ ನಡೆದ ಬಳಿಕ ಶಿಂಧೆ ತಮ್ಮವರೊಂದಿಗೆ ಕಾಣಿಸಿಕೊಂಡಿರುವ ಮೊದಲ ಫೂಟೇಜ್ ಇದಾಗಿದೆ. ವಿಡಿಯೋದಲ್ಲಿ ಅವರು ಕೆಲವು ಕಾಗದಪತ್ರಗಳನ್ನು ಪರಿಶೀಲಿಸುತ್ತಿರುವುದು ಹಾಗೂ ಸಹಿ ಹಾಕುವುದನ್ನು ಕಾಣಬಹುದು.
ಎಂವಿಪಿ ಮೈತ್ರಿಕೂಟ ಅಸಹಜವಾಗಿದ್ದು, ಅದರಿಂದ ಶಿವ ಸೇನೆ ಹೊರಬರಬೇಕು. ಮಹಾರಾಷ್ಟ್ರದ ಹಿತದೃಷ್ಟಿಯಿಂದ ಈ ಕೆಲಸ ಮಾಡಬೇಕಿರುವುದು ಅನಿವಾರ್ಯ ಎಂದು ಶಿಂಧೆ ಬುಧವಾರ ಟ್ವೀಟ್ ಮಾಡಿದ್ದರು.
ಬುಧವಾರ ಸಂಜೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ತಮ್ಮ ಅಧಿಕೃತ ಮುಖ್ಯಮಂತ್ರಿ ನಿವಾಸ ʼವರ್ಷಾʼ ತೊರೆದು, ಮಾತೋಶ್ರೀ ಮನೆಯತ್ತ ತೆರಳಿದ್ದಾರೆ. ಶಿವ ಸೇನೆಯ ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಠಾಕ್ರೆ ಪರ ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ: ಎಂವಿಎ ಮೈತ್ರಿ ಅಸಹಜ, ಶಿವ ಸೇನೆ ಹೊರಬರಲಿ: ಏಕನಾಥ್ ಶಿಂಧೆ