Site icon Vistara News

Political Party | 86 ಪಕ್ಷಗಳನ್ನು ಪಟ್ಟಿಯಿಂದ ಡಿಲಿಟ್ ಮಾಡಿದ ಚುನಾವಣಾ ಆಯೋಗ

Election Commission

ನವ ದೆಹಲಿ: ಭಾರತೀಯ ಚುನಾವಣಾ ಆಯೋಗವು ಅಸ್ವಿತ್ವದಲ್ಲಿ ಇಲ್ಲದ ಹಾಗೂ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷ(Political Party)ಗಳನ್ನು ಪಟ್ಟಿ ಮಾಡಿದ್ದು, ಈ ಪೈಕಿ 86 ಪಕ್ಷಗಳನ್ನು ಪಟ್ಟಿಯಿಂದ ಡಿಲಿಟ್ ಮಾಡಿದೆ. ಅಲ್ಲದೇ 253 ಪಕ್ಷಗಳನ್ನು ಆಯೋಗ ನಿಷ್ಕ್ರಿಯ ಎಂದು ಘೋಷಿಸಿದೆ.

ಆರ್‌ಪಿ ಕಾಯಿದೆಯೆ 29ಎ ಸೆಕ್ಷನ್ ಪ್ರಕಾರ, ಪ್ರತಿ ರಾಜಕೀಯ ಪಕ್ಷವು, ತನ್ನ ಯಾವುದೇ ಹೆಸರು ಬದಲಾವಣೆ, ಕೇಂದ್ರ ಕಚೇರಿ, ಪದಾಧಿಕಾರಿಗಳು, ವಿಳಾಸ, ಪಾನ್ ನಂಬರ್ ‌ಮಾಹಿತಿಯನ್ನು ತಡ ಮಾಡದೇ ಆಯೋಗಕ್ಕೆ ಕೊಡಬೇಕು. ಆದರೆ, 86 ಪಕ್ಷಗಳು ಅಸ್ತಿತ್ವದಲ್ಲೇ ಇಲ್ಲ.

ಸಂಬಂಧಪಟ್ಟ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳು ನಡೆಸಿದ ಭೌತಿಕ ಪರಿಶೀಲನೆಯ ನಂತರ 86 ಪಕ್ಷಗಳು ಅಸ್ತಿತ್ವದಲ್ಲಿಲ್ಲ ಎಂದು ಕಂಡುಬಂದಿದೆ. ಸಂಬಂಧಪಟ್ಟ ಪಕ್ಷದ ನೋಂದಾಯಿತ ವಿಳಾಸಕ್ಕೆ ಕಳುಹಿಸಲಾದ ಅಂಚೆ ಪ್ರಾಧಿಕಾರದಿಂದ ತಲುಪಿಸದ ಪತ್ರಗಳು/ನೋಟಿಸ್‌ಗಳ ವರದಿಯನ್ನು ಆಧರಿಸಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

2022ರ ಮೇ 25, ಜೂನ್ 20ರ ಆದೇಶಗಳ ಮೂಲಕ ಭಾರತೀಯ ಚುನಾವಣಾ ಆಯೋಗವು 87 ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳು ಮತ್ತು 111 ಪಕ್ಷಗಳನ್ನು ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆ. ಹೀಗಾಗಿ ಪಟ್ಟಿಯಿಂದ ತೆಗೆದುಹಾಕಲಾದ ಒಟ್ಟು ಪಕ್ಷಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಬಿಹಾರ, ದಿಲ್ಲಿ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ನೀಡಿದ ವರದಿಯ ಆಧಾರದ ಅನುಸಾರವೇ 253 ನಾನ್ – ಕಂಪ್ಲೈನಟ್ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗವು ಹೇಳಿದೆ.

253 ಪಕ್ಷಗಳನ್ನು ನಿಷ್ಕ್ರಿಯ ಎಂದು ಗುರುತಿಸಲಾಗಿದೆ. ಹೀಗೆ ಗುರುತಿಸಲಾದ ಪಕ್ಷಗಳಿಗೆ ಕಳುಹಿಸಲಾದ ಪತ್ರಗಳು, ನೋಟಿಸ್‌ಗಳಿಗೆ ಯಾವುದೇ ಉತ್ತರವೂ ಬಂದಿಲ್ಲ. 2014 ಮತ್ತು 2019ರಲ್ಲಿಯಾವುದೇ ಒಂದು ಚುನಾವಣೆಯಲ್ಲೂ ಈ ರಾಜಕೀಯ ಪಕ್ಷಗಳು ಸ್ಪರ್ಧೆ ಮಾಡಿಲ್ಲ. ಈ ಎಲ್ಲ ರಾಜಕೀಯ ಪಕ್ಷಗಳು ಶಾಸನಾತ್ಮಕ ನಿಯಮಗಳ ಪಾಲನೆಯನ್ನು ಮಾಡಿಲ್ಲ. ಹಾಗಾಗಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯೋಗವು ತಿಳಿಸಿದೆ.

ಇದನ್ನೂ ಓದಿ | ಇ-ವೋಟಿಂಗ್ ವಿಧಾನ ಅಳವಡಿಕೆಗೆ ರಾಜ್ಯ ಚುನಾವಣಾ ಆಯೋಗ ಚಿಂತನೆ

Exit mobile version