Site icon Vistara News

Election result 2022 | ಮೈನ್‌ಪುರಿ ಲೋಕಸಭೆ ಕ್ಷೇತ್ರದಲ್ಲಿ ಡಿಂಪಲ್‌ ಯಾದವ್‌ ಮುನ್ನಡೆ

dimple yadav

ಮೈನ್‌ಪುರಿ: ಉತ್ತರಪ್ರದೇಶದ ಮೈನ್‌ಪುರಿ ಲೋಕಸಭೆ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್‌ ಯಾದವ್‌ ಅವರು ಮುನ್ನಡೆ ಸಾಧಿಸಿದ್ದಾರೆ.

ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ ಡಿಂಪಲ್‌ ಯಾದವ್‌ 5,536 ಮತಗಳನ್ನೂ, ಅವರ ನಿಕಟ ಸ್ಪರ್ಧಿ ಭಾರತೀಯ ಜನತಾ ಪಾರ್ಟಿಯ ರಘುರಾಜ್‌ ಸಿಂಗ್‌ ಶಾಕ್ಯ 3,416 ಮತಗಳನ್ನೂ ಪಡೆದಿದ್ದಾರೆ.

ಮೈನ್‌ಪುರಿಯ ಸಂಸದರಾಗಿದ್ದ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಯಾದವ್‌ ಅವರ ನಿಧನದ ಬಳಿಕ ತೆರವಾದ ಲೋಕಸಭೆ ಸ್ಥಾನಕ್ಕೆ ಈ ಉಪಚುನಾವಣೆ ನಡೆದಿದೆ. ಈ ಕ್ಷೇತ್ರದಲ್ಲಿ 1996ರ ಬಳಿಕ ಯಾವುದೇ ಚುನಾವಣೆಯಲ್ಲಿ ಎಸ್‌ಪಿ ಸೋತಿಲ್ಲ. ಯಾದವ್‌ ಕುಟುಂಬದ ಸೊಸೆ, ಅಖಿಲೇಶ್‌ ಯಾದವ್‌ ಅವರ ಪತ್ನಿ ಹಾಗೂ ಲೋಕಸಭೆ ಮಾಜಿ ಸದಸ್ಯೆ ಡಿಂಪಲ್‌ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಅವರು ಈ ಮುನ್ನ ಕನೌಜ್‌ ಕ್ಷೇತ್ರದ ಸಂಸದರಾಗಿದ್ದರು.

ಕಾಂಗ್ರೆಸ್‌ ಹಾಗೂ ಬಿಎಸ್‌ಪಿಗಳು ಈ ಬಾರಿ ಈ ಕ್ಷೇತ್ರದಲ್ಲಿ ಸ್ಪರ್ಧಿಗಳನ್ನು ಹಾಕಿಲ್ಲ. ಹೀಗಾಗಿ ಎಸ್‌ಪಿ- ಬಿಜೆಪಿ ನಡುವೆ ನೇರ ಹಣಾಹಣಿ ಇದೆ.

ಮೈನ್‌ಪುರಿ ಮಾತ್ರವಲ್ಲದೆ ಉತ್ತರ ಪ್ರದೇಶದ ರಾಮ್‌ಪುರ್‌ ಸದರ್‌ ಹಾಗೂ ಖತೌಲಿಗಳಲ್ಲಿಯೂ ಉಪಚುನಾವಣೆ ನಡೆದಿದೆ. ಎಸ್‌ಪಿ ನಾಯಕ ಅಜಂ ಖಾನ್‌ ಅವರ ದ್ವೇಷ ಭಾಷಣದ ಕಾರಣದಿಂದ ಅನರ್ಹತೆ ಹಾಗೂ ಮೂರು ವರ್ಷಗಳ ಜೈಲು ಶಿಕ್ಷೆಗೆ ಒಳಗಾದ ಹಿನ್ನೆಲೆಯಲ್ಲಿ ರಾಮ್‌ಪುರ್‌ ಸದರ್‌ ಕ್ಷೇತ್ರದ ಸಂಸದ ಸ್ಥಾನ ಖಾಲಿಯಾಗಿತ್ತು.

ಇದನ್ನೂ ಓದಿ | Election Result 2022 | ಗುಜರಾತ್‌ನಲ್ಲಿ ಬಿಜೆಪಿ ಮುನ್ನಡೆ, ಹಿಮಾಚಲದಲ್ಲಿ ಸಮ ಬಲ ಸ್ಪರ್ಧೆ, ಇದು ಆರಂಭಿಕ ಟ್ರೆಂಡ್

Exit mobile version