Site icon Vistara News

Election Results 2023 : ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಬೃಹತ್‌ ಮುನ್ನಡೆ, ಉರುಳುತ್ತಾ ಕೆಸಿಆರ್‌ ಸರ್ಕಾರ?

K Chandrashekhar Rao and Hemant Reddy

ಹೈದರಾಬಾದ್‌: ತೆಲಂಗಾಣ ವಿಧಾನಸಭಾ ಚುನಾವಣೆಯ (Telangana Results 2023) ಮತ ಎಣಿಕೆಯ ಆರಂಭಿಕ ಮುನ್ನಡೆ ಪ್ರವೃತ್ತಿಗಳು (Election Results 2023) ಲಭ್ಯವಾಗುತ್ತಿದ್ದು, ಮೊದಲ ಹಂತದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (BRS) ಹಿನ್ನಡೆ ಅನುಭವಿಸಿದ್ದು, ಕೆ. ಚಂದ್ರಶೇಖರ್‌ ರಾವ್‌ (K ChandraShekhar Rao) ನೇತೃತ್ವದ ಸರ್ಕಾರ ಉರುಳುತ್ತಾ ಎಂಬ ಪ್ರಶ್ನೆ ಮೂಡಿದೆ.

ತೆಲಂಗಾಣದ 119 ಕ್ಷೇತ್ರಗಳ ಪೈಕಿ 8.50ರ ಹೊತ್ತಿಗೆ ಎಲ್ಲ 119 ಕ್ಷೇತ್ರಗಳ ಮುನ್ನಡೆ ಪ್ರವೃತ್ತಿ ಲಭ್ಯವಾಗಿದೆ. ಕಾಂಗ್ರೆಸ್‌ 66, ಬಿಆರ್‌ಎಸ್‌ 41 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಬಿಜೆಪಿ 5 ಮತ್ತು ಎಐಎಂಐಎಂ ಆರು ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ. ಇಲ್ಲಿ ಈಗಾಗಲೇ ಕಾಂಗ್ರೆಸ್‌ ಮ್ಯಾಜಿಕ್‌ ನಂಬರ್‌ ದಾಟಿ ಮುನ್ನಡೆಯಲ್ಲಿದೆ.

telangana exit poll

ತೆಲಂಗಾಣವು ಒಟ್ಟು 119 ಸ್ಥಾನಗಳನ್ನು ಹೊಂದಿದ್ದು, ಬಹುಮತ ಪಡೆಯಲು 60 ಸ್ಥಾನಗಳನ್ನು ಗೆಲ್ಲಬೇಕು. ಈ ಹಿಂದಿನ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಬಿಆರ್‌ಎಸ್‌ಗೆ ಈ ಭಾರಿ ಸೋಲು ಎಂದು ಬಹಳಷ್ಟು ಸಮೀಕ್ಷೆಗಳು ಹೇಳುತ್ತಿವೆ.

ಎಕ್ಸಿಟ್ ಪೋಲ್‌ಗಳು ಹೇಳೋದೇನು?

ಸಿಎನ್​​ಎನ್​ ಸಮೀಕ್ಷೆ: ಕಾಂಗ್ರೆಸ್: 56, ಬಿಆರ್​ಎಸ್​: 48, ಬಿಜೆಪಿ: 10: ಎಐಎಂಐಎಂ: 5
ಜನ್ ಕಿ ಬಾತ್ : ಕಾಂಗ್ರೆಸ್: 48-64, ಬಿಆರ್​ಎಸ್​: 40-55, ಬಿಜೆಪಿ: 7-13, ಎಐಎಂಐಎಂ: 4-7 ಸ್ಥಾನ
ಇಂಡಿಯಾ ಟಿವಿ- ಸಿಎನ್ಎಕ್ಸ್ ಬಿಆರ್​ಎಸ್​ 31-47, ಕಾಂಗ್ರೆಸ್: 63-79, ಬಿಜೆಪಿ 2-4,ಎಐಎಂಐಎಂ 5-7
ಜನ್ ಕಿ ಬಾತ್ ಬಿಆರ್​ಎಸ್​ 40-55, ಕಾಂಗ್ರೆಸ್ 48-64,ಬಿಜೆಪಿ 7-13,ಎಐಎಂಐಎಂ 4-7
ರಿಪಬ್ಲಿಕ್ ಟಿವಿ- ಮ್ಯಾಟ್ರಿಜ್​- ಆರ್​ಎಸ್​ 46-56.ಕಾಂಗ್ರೆಸ್ 58-68, ಬಿಜೆಪಿ 4-9,ಎಐಎಂಐಎಂ 5-7
ಟಿವಿ 9 ಭಾರತ್ ವರ್ಷ್ – ಪೋಲ್ಸ್ಟ್ರಾಟ್ ಬಿಆರ್​ಎಸ್​48-58,ಕಾಂಗ್ರೆಸ್ 49-59,ಬಿಜೆಪಿ 5-10,ಎಐಎಂಐಎಂ 6-8

ಈಗ ಪರಿಸ್ಥಿತಿ ಹೇಗಿದೆ?

ಕೆ ಚಂದ್ರಶೇಖರ್‌ ರಾವ್‌ ಅವರು ಕಾಮರೆಡ್ಡಿ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಅಲ್ಲಿ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ರೇವಂತ್‌ ರೆಡ್ಡಿ ಅವರು ಮುನ್ನಡೆಯಲ್ಲಿದ್ದಾರೆ. ಕೆಸಿಆರ್‌ ಇನ್ನೊಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಕೆಸಿಆರ್‌ ಅವರು ಹಿನ್ನಡೆಯಾಗಿರುವುದು ಇದರಿಂದ ಸ್ಪಷ್ಟವಾಗಿದೆ.

ಇದನ್ನೂ ಓದಿ: Assembly Election Results 2023 Live: ತೆಲಂಗಾಣ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ

ಕಾಂಗ್ರೆಸ್‌ನ ಎಲ್ಲ ಅಭ್ಯರ್ಥಿಗಳು ಸ್ಟಾರ್‌ ಹೋಟೆಲ್‌ನಲ್ಲಿ

ತೆಲಂಗಾಣದಲ್ಲಿ ಅತಂತ್ರ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಬಿಆರ್‌ಎಸ್‌ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಸ್ಟಾರ್‌ ಹೋಟೆಲ್‌ ನಲ್ಲಿ ಇರಿಸಿವೆ. ಬೆಂಗಳೂರಿನಿಂದ ಹೈದರಾಬಾದ್‌ಗೆ ಹೋಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಮತ್ತು ವಸತಿ ಸಚಿವ ಜಮೀರ್‌ ಅಹಮದ್‌‌ ಖಾನ್ ಅವರು ಅಲ್ಲಿ ಶಾಸಕರ ಜತೆ ಮಾತುಕತೆ ನಡೆಸುತ್ತಿದ್ದಾರೆ.

Exit mobile version