Site icon Vistara News

Election Results 2024: 7 ಲಕ್ಷ ಮತಗಳಿಂದ ಗೆದ್ದು ಬೀಗಿದ ಅಮಿತ್‌ ಶಾ; ಬಿಜೆಪಿಗೆ ಮೊದಲ ಗೆಲುವು

Amit Shah

Amit Shah directs to implement area domination, zero terror plans in Jammu Kashmir after terrorist attacks

ನವದೆಹಲಿ: ಲೋಕಸಭೆ ಚುನಾವಣೆಯ ಮತಎಣಿಕೆ ಕಾರ್ಯವು ಭರದಿಂದ ಸಾಗುತ್ತಿದ್ದು, ಅಭ್ಯರ್ಥಿಗಳ ಮುನ್ನಡೆ ಹಾಗೂ ಹಿನ್ನಡೆ ಕುರಿತು ಚರ್ಚಿಸಲಾಗುತ್ತಿದೆ. ಒಟ್ಟು 543 ಕ್ಷೇತ್ರಗಳ ಪೈಕಿ ಎನ್‌ಡಿಎ ಮೈತ್ರಿಕೂಟವು (NDA) 294 ಕ್ಷೇತ್ರಗಳಲ್ಲಿ ಮುನ್ನಡೆ (Election Results 2024) ಸಾಧಿಸಿದೆ. ಅತ್ತ, ಇಂಡಿಯಾ ಒಕ್ಕೂಟವೂ (India Bloc) ತೀವ್ರ ಪೈಪೋಟಿ ನೀಡುತ್ತಿದ್ದು, 230 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದರ ಮಧ್ಯೆಯೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟಿದ್ದಾರೆ.

ಹೌದು, ಅಮಿತ್‌ ಶಾ ಅವರು ಗುಜರಾತ್‌ನ ಗಾಂಧಿನಗರ ಲೋಕಸಭೆ ಕ್ಷೇತ್ರದಲ್ಲಿ 7.49 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಕುರಿತು ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಕಾಂಗ್ರೆಸ್‌ನ ಸೋನಲ್‌ ರಮಣ್‌ಭಾಯಿ ಪಟೇಲ್‌ ವಿರುದ್ಧ ಅಮಿತ್‌ ಶಾ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. 2019ರಲ್ಲಿಯೂ ಅಮಿತ್‌ ಶಾ ಅವರು ಗಾಂಧಿನಗರದಲ್ಲಿ 5.57 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈಗಲೂ ಅವರ ಗೆಲುವಿನ ಅಂತರ ಜಾಸ್ತಿಯಾಗಿದೆ.

ಬಿಜೆಪಿಗೆ ಭದ್ರಕೋಟೆಗಳಲ್ಲೇ ಹಿನ್ನಡೆ

ಬಿಜೆಪಿಯ ಭದ್ರಕೋಟೆಯಾಗಿರುವ ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ್, ರಾಜಸ್ಥಾನ್​​​ ರಾಜ್ಯಗಳಲ್ಲಿ ಹಿನ್ನಡೆ ಉಂಟಾಗಿರುವುದು. ಜತೆಗೆ ಹರಿಯಾಣ ಹಾಗೂ ಪಂಜಾಬ್​ನಲ್ಲೂ ಬಿಜೆಪಿಗೆ ಯಾವುದೇ ರೀತಿಯಲ್ಲಿ ಲಾಭವಾಗಿಲ್ಲ. 2019ರಲ್ಲಿ ಗುಜರಾತ್​ನಲ್ಲಿ ಬಿಜೆಪಿ 26ಕ್ಕೆ 26 ಕ್ಷೇತ್ರಗಳನ್ನೂ ಗೆದ್ದಿತ್ತು. ಆದರೆ, ಈ ಬಾರಿ ಸುಮಾರು 4 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದಲ್ಲಿ 2019ರಲ್ಲಿ 62 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 43 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಪಡೆದುಕೊಂಡಿದೆ. ಉಳಿದ ಸ್ಥಾನಗಳನ್ನು ಎಸ್​ಪಿಗೆ ಸಿಗಲಿದೆ.

ಮಹಾರಾಷ್ಟ್ರದಲ್ಲಿ ಎನ್​ಡಿಎ 22 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. ಒಟ್ಟು 48ರಲ್ಲಿ 41 ಸ್ಥಾನಗಳನ್ನು 2019ರಲ್ಲಿ ಗೆದ್ದುಕೊಂಡಿತ್ತು. ಪಂಜಾಬ್​ನಲ್ಲಿಯೂ 13 ಸ್ಥಾನಗಳಲ್ಲಿ ಕಾಂಗ್ರೆಸ್​​ 6, ಆಪ್​ 3 ಹಾಗೂ ಎಸ್​ಡಿಎಮ್​ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಹಿಂದೆ ಇಲ್ಲೂ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. ರಾಜಸ್ಥಾನದಲ್ಲಿ ಬಿಜೆಪಿ 14 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದ್ದು ಕಾಂಗ್ರೆಸ್ 8 ಹಾಗೂ ಇತರರು 3 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. 2019ರಲ್ಲಿ ಅಲ್ಲಿ 25 ಕ್ಷೇತ್ರಗಳನ್ನೂ ಬಿಜೆಪಿ ಗೆದ್ದುಕೊಂಡಿತ್ತು. ಇಲ್ಲೂ ಸಾಕಷ್ಟು ನಷ್ಟವಾಗಿದೆ. ಆದರೆ ಮಧ್ಯಪ್ರದೇಶಲ್ಲಿ ಬಿಜೆಪಿಗೆ ಭರ್ಜರಿ ಲಾಭವಾಗಿದೆ.

ಹರಿಯಾಣದಲ್ಲಿ ಕಾಂಗ್ರೆಸ್​ ಪಕ್ಷವೇ 8 ಸ್ಥಾನ ಮುನ್ನಡೆ ಪಡೆದುಕೊಂಡಿದ್ದು, ಬಿಜೆಪಿ ಕೈಯಲ್ಲಿ ಒಂದು ಸ್ಥಾನ ಮಾತ್ರ ಇದೆ. ಆದರೆ, 2019ರಲ್ಲಿ ಇಲ್ಲಿ ಬಿಜೆಪಿ ಎಲ್ಲ 10 ಸೀಟುಗಳನ್ನು ಗೆದ್ದುಕೊಂಡಿತ್ತು.

ಇದನ್ನೂ ಓದಿ: Election Results 2024: ಅಸಾದುದ್ದೀನ್‌ ಓವೈಸಿ ವಿರುದ್ಧ ಹಿಂದು ಫೈರ್‌ ಬ್ರ್ಯಾಂಡ್‌ ಮಾಧವಿ ಲತಾಗೆ ಭಾರಿ ಮುನ್ನಡೆ

Exit mobile version