Site icon Vistara News

Election Results 2024: “ಪ್ರಧಾನಿ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ”-ಕಾಂಗ್ರೆಸ್‌ ಮೊದಲ ರಿಯಾಕ್ಷನ್‌

Election Results 2024

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ(Lok Sabha Election 2024) ಬಹುತೇಕ ಹೊರಬಿದ್ದಿದ್ದು, ಜನರಿಗೆ ಈಗಾಗಲೇ ಫಲಿತಾಂಶದ(Election Results 2024) ಬಗ್ಗೆ ಸ್ಪಷ್ಟ ಚಿತ್ರ ಸಿಕ್ಕಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾರೀ ಹಿನ್ನಡೆ ಅನುಭವಿಸಿದ್ದು, 400ಕ್ಕಿಂತ ಹೆಚ್ಚು ಸ್ಥಾನಗಳ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ. ಇನ್ನು ಕಾಂಗ್ರೇಸ್‌ ನೇತೃತ್ವದ ಇಂಡಿಯಾ ಒಕ್ಕೂಟ(INDIA) ನಿರೀಕ್ಷೆಗಳಿಗಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಎನ್‌ಡಿಎಗೆ ನೆಕ್‌ ಟು ನೆಕ್‌ ಫೈಟ್‌ ಕೊಡುತ್ತಿದೆ. ಹೀಗಿರುವಾಗ ಈ ಬಗ್ಗೆ ಕಾಂಗ್ರೆಸ್‌ ಮೊದಲ ರಿಯಾಕ್ಷನ್‌ ನೀಡಿದೆ.

ಚುನಾವಣಾ ಫಲಿತಾಂಶ ಸ್ಪಷ್ಟ ಆಗುತ್ತಿದ್ದಂತೆ ಕಾಂಗ್ರೆಸ್‌ ಮುಖಂಡರಾದ ಜೈರಾಮ್‌ ರಮೇಶ್‌ ಮತ್ತು ಅಶೋಕ್‌ ಗೆಹ್ಲೋಟ್‌ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯ ಸಂಭಾವ್ಯ ಸ್ಥಾನಗಳ ನಷ್ಟಕ್ಕೆ ಪ್ರಧಾನಿ ಮೋದಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ಅಸಾಮಾನ್ಯರು ಎಂದು ಬಿಂಬಿಸಿಕೊಳ್ಳುತ್ತಿದ್ದರು, ಈಗ ಅವರು ಮಾಜಿ ಪ್ರಧಾನಿ ಆಗುವುದು ಸಾಬೀತಾಗಿದೆ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ.. ಇದೇ ಈ ಚುನಾವಣೆಯ ಸಂದೇಶ ಎಂದು ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2024 ರ ಲೋಕಸಭಾ ಚುನಾವಣೆಯನ್ನು ಸಂಪೂರ್ಣವಾಗಿ ತಮ್ಮ ಮೇಲೆ ಕೇಂದ್ರೀಕರಿಸಿದರು. ಪ್ರಚಾರದಲ್ಲಿ ಬಿಜೆಪಿ ಪದಕ್ಕಿಂತ ಮೋದಿ ಗ್ಯಾರಂಟಿ, ಮತ್ತೆ ಮೋದಿ ಸರ್ಕಾರ ಎಂಬ ಘೋಷಣೆಗಳೇ ಹೆಚ್ಚಾಗಿ ಕೇಳಿಬಂದವು. ಎಂಪಿ ಅಭ್ಯರ್ಥಿಗಳನ್ನೂ ಬೈಪಾಸ್ ಮಾಡಿ ಇಡೀ ಚುನಾವಣೆಯನ್ನು ಮೋದಿ ಗ್ಯಾರಂಟಿ ಹೆಸರಿನಲ್ಲಿ ನಡೆಸಲಾಗಿದೆ. ಚುನಾವಣೆಗಳಲ್ಲಿ ಹಣದುಬ್ಬರ, ನಿರುದ್ಯೋಗ, ಸಮಾಜದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಂತಹ ವಿಷಯಗಳು ಗೌಣವಾಗಿ ಮೋದಿ-ಮೋದಿ ಮಾತ್ರ ಕೇಳಿಬರತೊಡಗಿದವು. ಪ್ರಧಾನಿಯವರು ತಮ್ಮ ನಾಯಕತ್ವದಲ್ಲಿ ಸಂಸತ್ತಿನಲ್ಲಿ ಬಿಜೆಪಿಯ 370 ಸ್ಥಾನಗಳನ್ನು ಮತ್ತು ಎನ್‌ಡಿಎಯ 400 ಸ್ಥಾನಗಳನ್ನು ದಾಟುವುದಾಗಿ ಹೇಳಿಕೊಂಡಿದ್ದರು.

ಬಿಜೆಪಿಗೆ 370 ಸೀಟುಗಳು ಬರುವುದಿಲ್ಲ, ಎನ್ಡಿಎಗೆ 400 ಸ್ಥಾನಗಳು ಬರುವುದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಪ್ರಧಾನಿ ಮೋದಿಯವರ ಹೆಸರಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯವರು ಈಗ ಪ್ರಧಾನಮಂತ್ರಿ ಹುದ್ದೆಯ ಉಮೇದುವಾರಿಕೆಯಿಂದ ತಮ್ಮ ಹೆಸರನ್ನು ಹಿಂಪಡೆಯಬೇಕು ಎಂದು ಗೆಹ್ಲೋಟ್‌ ಟ್ವೀಟ್‌ ಮಾಡಿ ಕುಟುಕಿದ್ದಾರೆ.

ಇದನ್ನೂ ಓದಿ:AP Election results 2024 live: ಆಂಧ್ರ ಪ್ರದೇಶ ವಿಧಾನಸಭೆ: ಭರ್ಜರಿ ಗೆಲುವಿನತ್ತ ಟಿಡಿಪಿ

Exit mobile version