ನವದೆಹಲಿ: ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ದೆಹಲಿಯಲ್ಲಿ ಎಲ್ಲಾ ಏಳು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿಯೂ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ(Election results 2024). ಈಗಾಗಲೇ ಮತ ಎಣಿಕೆ ಪ್ರಾರಂಭಗೊಂಡಿದ್ದು, ಎಲ್ಲಾ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಇನ್ನು ಈ ಬಾರಿ ಕಾಂಗ್ರೆಸ್(Congress) ಮತ್ತು ಆಪ್(AAP) ಎರಡೂ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ಸೆಡ್ಡುಹೊಡೆದಿತ್ತು. ಆಪ್ ನಾಲ್ಕು ಅಭ್ಯರ್ಥಿಗಳನ್ನು ಮತ್ತು ಕಾಂಗ್ರೆಸ್ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಏತನ್ಮಧ್ಯೆ, ಬಿಜೆಪಿ(BJP) ಆರು ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಿತ್ತು. ಕೇವಲ ಒಂದು ಕ್ಷೇತ್ರದಲ್ಲಿ ಹಾಲಿ ಸಂಸದ ಮನೋಜ್ ತಿವಾರಿ ಅವರನ್ನು ಮತ್ತೆ ಕಣಕ್ಕಿಳಿಸಿತ್ತು.
ಇನ್ನು ಬಿಜೆಪಿ ಈ ಬಾರಿ ಮೀನಾಕ್ಷಿ ಲೇಖಿ ಬದಲಿಗೆ ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್, ಚಾಂದಿನಿ ಚೌಕ್‌ನಿಂದ ಪ್ರವೀಣ್ ಖಂಡೇಲ್‌ವಾಲ್ (ಡಾ ಹರ್ಷವರ್ಧನ್ ಬದಲಿಗೆ), ಪೂರ್ವ ದೆಹಲಿಯಿಂದ ಹರ್ಷ್ ಮಲ್ಹೋತ್ರಾ (ಗೌತಮ್ ಗಂಭೀರ್ ಬದಲಿಗೆ), ಯೋಗೇಂದ್ರ ಚಂದೋಲಿಯಾ ವಾಯುವ್ಯ ದೆಹಲಿಯಿಂದ (ಹನ್ಸ್ ರಾಜ್ ಹನ್ಸ್ ಬದಲಿಗೆ), ಪಶ್ಚಿಮ ದೆಹಲಿಯಿಂದ ಕಮಲ್ಜೀತ್ ಸೆಹ್ರಾವತ್ (ಪರ್ವೇಶ್ ವರ್ಮಾ ಬದಲಿಗೆ) ಮತ್ತು ದಕ್ಷಿಣ ದೆಹಲಿಯಿಂದ ರಾಮ್ವೀರ್ ಸಿಂಗ್ ಬಿಧುರಿಗೆ (ರಮೇಶ್ ಬಿಧುರಿ ಬದಲಿಗೆ) ಟಿಕೆಟ್ ನೀಡಿದೆ.
ಮತ್ತೊಂದೆಡೆ, ಎಎಪಿ ನವದೆಹಲಿಯಲ್ಲಿ ಸೋಮನಾಥ್ ಭಾರ್ತಿ, ಪಶ್ಚಿಮ ದೆಹಲಿಯಲ್ಲಿ ಮಹಾಬಲ್ ಮಿಶ್ರಾ, ದಕ್ಷಿಣ ದೆಹಲಿಯಲ್ಲಿ ಸಾಹಿ ರಾಮ್ ಪೆಹೆಲ್ವಾನ್ ಮತ್ತು ಪೂರ್ವ ದೆಹಲಿಯಲ್ಲಿ ಕುಲದೀಪ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಕನ್ಹಯ್ಯಾ ಕುಮಾರ್ (ಪೂರ್ವ ದೆಹಲಿ), ಜೈ ಪ್ರಕಾಶ್ ಅಗರ್ವಾಲ್ (ಚಾಂದಿನಿ ಚೌಕ್) ಮತ್ತು ಉದಿತ್ ರಾಜ್ (ವಾಯುವ್ಯ ದೆಹಲಿ) ಅವರಿಗೆ ಟಿಕೆಟ್ ನೀಡಿದೆ.
ಆರಂಭಿಕ ಟ್ರೆಂಡ್‌ಗಳಲ್ಲಿ ಬಿಜೆಪಿ ಎಲ್ಲಾ ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದಾಗ್ಯೂ, ನವದೆಹಲಿ, ದಕ್ಷಿಣ ದೆಹಲಿ ಮತ್ತು ಚಾಂದಿನಿ ಚೌಕ್‌ನಲ್ಲಿ ನೆಕ್ ಟು ನೆಕ್ ಫೈಟ್ ಇದೆ. ಬಿಜೆಪಿಯ ಮನೋಜ್ ತಿವಾರಿ (4873 ಮತಗಳು) ಈಶಾನ್ಯ ದೆಹಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ವಿರುದ್ಧ (2888 ಮತಗಳು) ಮುನ್ನಡೆ ಸಾಧಿಸಿದ್ದಾರೆ.
ಇದನ್ನೂ ಓದಿ: Lok Sabha Election Result 2024: ಮುನ್ನಡೆಯಲ್ಲೇ ಮ್ಯಾಜಿಕ್ ನಂಬರ್ ದಾಟಿದ ಎನ್‌ಡಿಎ; ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿ