ಮುಂಬೈ: ಮಹಾರಾಷ್ಟ್ರದಲ್ಲಿ ಈ ಬಾರಿ ಶಿವಸೇನೆ(ShivSena) ಮತ್ತು ಎನ್‌ಸಿಪಿ(NCP) ಇಬ್ಬಾಗಗೊಂಡ ಬಳಿಕ ಎದುರಿಸುತ್ತಿರುವ ಮೊದಲ ಲೋಕಸಭೆ ಚುನಾವಣೆ ಇದಾಗಿದ್ದು, ಇದೀಗ ಫಲಿತಾಂಶ(Election Results 2024)ದತ್ತ ಇಡೀ ದೇಶದ ಗಮನ ಸೆಳೆದಿದೆ. ಮತ ಎಣಿಕೆ ಈಗಾಗಲೇ ಬಿರುಸಿನಿಂದ ಸಾಗಿದ್ದು, ಬಿಜೆಪಿ(BJP) ನೇತೃತ್ವ ಎನ್‌ಡಿಎ(ಬಿಜೆಪಿ, ಏಕನಾಥ್ ಶಿಂಧೆಯವರ ಶಿವಸೇನಾ, ಅಜಿತ್ ಪವಾರ್ ಅವರ ಎನ್‌ಸಿಪಿ) ಮತ್ತು ಇಂಡಿಯಾ(ಕಾಂಗ್ರೆಸ್, ಶರದ್ ಪವಾರ್ ಅವರ ಎನ್‌ಸಿಪಿ ಎಸ್‌ಪಿ, ಉದ್ಧವ್ ಠಾಕ್ರೆಯವರ ಶಿವಸೇನಾ UBT) ನಡುವೆ ನೆಕ್ ಟು ನೆಕ್ ಫೈಟ್ ಇತ್ತು.
ಒಟ್ಟು 48 ಕ್ಷೇತ್ರಗಳಲ್ಲಿ ಬರೋಬ್ಬರಿ ಐದು ಹಂತಗಳಲ್ಲಿ ಮತದಾನ ನಡೆದಿತ್ತು. ಇದೀಗ ಮತ ಎಣಿಕೆ ನಡೆಯುತ್ತಿದ್ದು, ಆರಂಭಿಕ ಹಂತದಲ್ಲೇ ಇಂಡಿಯಾ ಒಕ್ಕೂಟ ಮುನ್ನಡೆ ಸಾಧಿಸಿದ್ದು, 29 ಕ್ಷೇತ್ರಗಳಲ್ಲಿ ಗೆಲುವಿನ ಹಾದಿಯಲ್ಲಿದೆ. ಶಿವಸೇನಾ UBT 11, ಕಾಂಗ್ರೆಸ್ 10, ಎನ್‌ಸಿಪಿ ಎಸ್‌ಪಿ 8 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಇಂಡಿಯಾ ಒಕ್ಕೂಟ ಕೇವಲ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸದ್ಯ ಬಿಜೆಪಿ 11, ಎನ್‌ಸಿಪಿ 1, ಶಿವಸೇನಾ 6 ಕ್ಷೇತ್ರಗಳಲ್ಲಿ ಗೆಲುವಿನ ಹಾದಿಯಲ್ಲಿದೆ.
ಬಿಜೆಪಿ 28, ಶಿವಸೇನೆ 15, ಎನ್‌ಸಿಪಿ 4 ಮತ್ತು ಆರ್‌ಎಸ್‌ಪಿ 1 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ವಿರೋಧ ಪಕ್ಷದ ಮೈತ್ರಿಯಲ್ಲಿ ಶಿವಸೇನೆ ಯುಬಿಟಿ 21 ಸ್ಥಾನಗಳಲ್ಲಿ, ಕಾಂಗ್ರೆಸ್ 17 ಮತ್ತು ಎನ್‌ಸಿಪಿ ಎಸ್‌ಪಿ 10 ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಸುಪ್ರಿಯಾ ಸುಳೆ ಅವರಂತಹ ಕೆಲವು ಎತ್ತರದ ನಾಯಕರು ಆರಂಭಿಕ ಮುನ್ನಡೆ ಸಾಧಿಸಿದ್ದಾರೆ.
ಕಣದಲ್ಲಿರುವ ಪ್ರಮುಖರು:
ಪಿಯೂಷ್ ಗೋಯಲ್ (ಬಿಜೆಪಿ, ಮುಂಬೈ-ಉತ್ತರ), ನಿತಿನ್ ಗಡ್ಕರಿ (ಬಿಜೆಪಿ, ನಾಗ್ಪುರ), ಸುಪ್ರಿಯಾ ಸುಳೆ (ಎನ್‌ಸಿಪಿ (ಶರದ್ ಪವಾರ್), ಬಾರಾಮತಿ), ಅರವಿಂದ್ ಸಾವಂತ್ (ಶಿವಸೇನೆ (ಯುಬಿಟಿ) ಸೇರಿದ್ದಾರೆ. ಮುಂಬೈ-ದಕ್ಷಿಣ), ವರ್ಷಾ ಗಾಯಕ್ವಾಡ್ (ಕಾಂಗ್ರೆಸ್, ಮುಂಬೈ ಉತ್ತರ ಕೇಂದ್ರ), ಉಜ್ವಲ್ ನಿಕಮ್ (ಬಿಜೆಪಿ, ಮುಂಬೈ ಉತ್ತರ ಕೇಂದ್ರ), ಕಪಿಲ್ ಪಾಟೀಲ್ (ಬಿಜೆಪಿ, ಭಿವಂಡಿ), ರಾಜನ್ ಬಾಬುರಾವ್ ವಿಚಾರೆ (ಶಿವಸೇನೆ (ಯುಬಿಟಿ), ಥಾಣೆ), ಶ್ರೀಕಾಂತ್ ಶಿಂಧೆ (ಶಿವ ಸೇನಾ, ಕಲ್ಯಾಣ್), ದನ್ವೆ ರಾವ್ಸಾಹೇಬ್ ದಾದಾರಾವ್ (ಬಿಜೆಪಿ, ಜಲ್ನಾ), ಪಂಕಜಾ ಮುಂಡೆ (ಬಿಜೆಪಿ, ಬೀಡ್). ಇತರ ಪ್ರಮುಖ ಅಭ್ಯರ್ಥಿಗಳು ನವನೀತ್ ಕೌರ್ ರಾಣಾ (ಬಿಜೆಪಿ, ಅಮರಾವತಿ), ಅನುಪ್ ಧೋತ್ರೆ (ಬಿಜೆಪಿ, ಅಕೋಲಾ) ಈ ಭಾರಿ ಕಣದಲ್ಲಿದ್ದಾರೆ.