Site icon Vistara News

Election results 2024: ಜಮ್ಮು-ಕಾಶ್ಮೀರದಲ್ಲಿ ಮಾಜಿ ಸಿಎಂಗಳಿಗೆ ಹೀನಾಯ ಸೋಲು

Election Results 2024

ಜಮ್ಮು-ಕಾಶ್ಮೀರ: ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದುಗೊಂಡ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಲೋಕಸಭಾ ಚುನಾವಣೆ(Lok Sabha Election 2024) ಇದಾಗಿದ್ದು, ಕಣದಲ್ಲಿದ್ದ ಇಬ್ಬರು ಮಾಜಿ ಮುಖ್ಯಮಂತ್ರಿಗಳು(EX CMs) ಸೋಲುಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಓಮರ್‌ ಅಬುಲ್ಲಾ ಮತ್ತು ಮೆಹಬೂಬಾ ಮುಫ್ತಿ ಹೀನಾಯ ಸೋಲುಂಡಿದ್ದಾರೆ.(Election results 2024)

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಒಟ್ಟು ಆರು ಕ್ಷೇತ್ರಗಳಲ್ಲಿ ಎರಡು ಕ್ಷೇತ್ರಗಳಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಉಳಿದ ಎರಡು ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಾರಾಮುಲ್ಲಾ ಕ್ಷೇತ್ರದಲ್ಲಿ ಐದು ಹಂತಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಎನ್‌ಸಿ ಪಕ್ಷ ಉಪಾಧ್ಯಕ್ಷ ಓಮರ್‌ ಅಬ್ದುಲ್ಲಾ 46000 ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಇನ್ನು ರಜೌರಿ-ಅನಂತಕುಮಾರ್‌ ಕ್ಷೇತ್ರದಲ್ಲಿ ಮೆಹಬೂಬಾ ಮುಫ್ತಿ 1,60,000 ಮತಗಳ ಸೋಲುಂಡಿದ್ದಾರೆ. ಇನ್ನಿ ಓಮರ್‌ ಅಬ್ದುಲ್ಲಾ ಅವರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಂಜಿನಿಯರ್‌ ಅಬ್ದುಲ್‌ ರಶೀದ್‌ ತಿಹಾರ್‌ ಜೈಲಿನಿಂದಲೇ ಕಣಕ್ಕಿಳಿದಿದ್ದರು. ಅವರ ಪರವಾಗಿ ಅವರ ಪುತ್ರ ಅಬ್ರಾರ್‌ ರಶೀದ್‌ ಪ್ರಚಾರ ನಡೆಸಿದ್ದರು. ಇನ್ನು ರಶೀದ್‌ 1,40,073, ಓಮರ್‌ ಅಬ್ದುಲ್ಲಾ 78,458 ಹಾಗೂ ಪೀಪಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಸಜ್ಜದ್‌ ಲೋನೆ 55,906 ಮತ ಗಳಿಸಿದ್ದಾರೆ.

ರಜೌರಿ-ಅನಂತಕುಮಾರ್‌ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ 1,59,266 ಮತಗಳನ್ನು ಪಡೆದು ಸೋಲುಂಡಿದ್ದಾರೆ. ಅವರ ವಿರುದ್ಧ ಕಣಕ್ಕಿಳಿದಿದ್ದ ಎನ್‌ಸಿ ಅಭ್ಯರ್ಥಿ ಮಿಯಾನ್‌ ಅಲ್ತಾಫ್‌ 2,92,181 ಪಡೆಯುವ ಮೂಲಕ ಗೆಲವು ಸಾಧಿಸಿದ್ದಾರೆ.

ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಸಿಯ ಅಗಾ ಸೈಯದ್ ರುಹುಲ್ಲಾ ಮೆಹದಿ ಅವರು ತಮ್ಮ ಪಿಡಿಪಿ ಪ್ರತಿಸ್ಪರ್ಧಿ ವಹೀದ್ ಉರ್ ರೆಹಮಾನ್ ಪಾರಾ ವಿರುದ್ಧ 87,699 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ರುಹುಲ್ಲಾ 1,49,089 ಮತಗಳನ್ನು ಪಡೆದರೆ, ಪರ್ರಾ 61,390 ಮತಗಳನ್ನು ಪಡೆದರು.

ಬಿಜೆಪಿಯ ಹಾಲಿ ಸಂಸದರಾದ ಜುಗಲ್ ಕಿಶೋರ್ ಶರ್ಮಾ ಮತ್ತು ಜಿತೇಂದ್ರ ಸಿಂಗ್ ಅವರು ಜಮ್ಮು ಮತ್ತು ಉಧಂಪುರದಲ್ಲಿ ಕ್ರಮವಾಗಿ 70,286 ಮತಗಳು ಮತ್ತು 46,016 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಲಡಾಖ್‌ನಲ್ಲಿ ಸ್ವತಂತ್ರ ಅಭ್ಯರ್ಥಿ ಹನೀಫಾ ಜಾನ್ 17,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ:Election Results 2024: ಕೇರಳದಲ್ಲಿ ಕೊನೆಗೂ ಅರಳಿದ ಕಮಲ; ತ್ರಿಶ್ಯೂರ್‌ನಲ್ಲಿ ಬಿಜೆಪಿಗೆ ಭರ್ಜರಿ ಜಯ

Exit mobile version