Site icon Vistara News

Election Results 2024: ಸ್ಟ್ರಾಂಗ್‌ ರೂಂ ಕೀ ಮಿಸ್ಸಿಂಗ್‌; ತಮಿಳುನಾಡಿನಲ್ಲಿ ಭಾರೀ ಎಡವಟ್ಟು

Election Results 2024

ಚೆನ್ನೈ: ತಮಿಳುನಾಡಿನಲ್ಲಿ(Tamil nadu) ಮತ ಎಣಿಕೆ ಬಿರುಸಿನಿಂದ ಸಾಗಿದ್ದು, ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ರಾಜಕೀಯ ಪಕ್ಷಗಳ ಭವಿಷ್ಯದ ಸ್ಪಷ್ಟ ಚಿತ್ರಣ ಸಿಗಲಿದೆ. ಇಡಿ ರಾಜ್ಯವೇ ಫಲಿತಾಂಶದತ್ತ(Election Results 2024) ಕಣ್ಣು ನೆಟ್ಟಿದೆ. ಈ ನಡುವೆ ತಿರುನೆಲ್ವೆಲಿ ಲೋಕಸಭಾ ಕ್ಷೇತ್ರ(Lok Sabha Election 2024)ದಲ್ಲಿ ಸ್ಟ್ರಾಂಗ್‌ ರೂಂ(Strong room) ಕೀ ಕಳೆದು ಹೋಗಿ ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಅದೂ ಅಲ್ಲದೇ ಕೆಲವು ಏಜೆಂಟ್‌ ಮತ್ತು ಚುಣಾವಣಾಧಿಕಾರಿಗಳ ನಡುವೆ ಭಾರೀ ವಾಗ್ವಾದವೂ ನಡೆಯಿತು.

ತಿರುನೆಲ್ವಿಲಿ ಲೋಕಸಭಾ ಕ್ಷೇತ್ರದ ಅಂಬಾಸಮುದ್ರಂ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆ ನಡೆಯಬೇಕಾಗಿತ್ತು. ಮತ ಎಣಿಕೆ ಹಿನ್ನೆಲೆ ಬೆಳಗ್ಗೆಯಿಂದಲೇ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಆದರೆ ಮತ ಎಣಿಕೆ ಕೇಂದ್ರ ಎರಡೂ ಬೀಗದ ಕೀಗಳು ಕಳೆದು ಹೋಗಿ ಕೆಲ ಹೊತ್ತು ಗೊಂದಲ ಸೃಷ್ಟಿಯಾಗಿತ್ತು. ಬೀಗದ ಕೀ ಕಾಣದೇ ಅಧಿಕಾರಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿತ್ತು. ಆಗ ಅಲ್ಲೇ ಇದ್ದ ಏಜೆಂಟ್‌ಗಳು ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದರು. ಅದೂ ಅಲ್ಲದೇ ಪ್ರತಿಭಟನೆಯನ್ನೂ ನಡೆಸಿದರು. ಇದಾದ ಬಳಿಕ ಅಧಿಕಾರಿಗಳು ಬೀಗ ಒಡೆದು ಮತ ಎಣಿಕೆ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಮತ ಎಣಿಕೆ ಆರಂಭವಾದ ಮೊಲದ ಮೂರು ಗಂಟೆಗಳ ಬಳಿಕ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಇಂಡಿ ಮೈತ್ರಿಕೂಟವು (2024 election results) 39 ಸ್ಥಾನಗಳಲ್ಲಿ 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಸಾಧಿಸುವತ್ತ ಸಾಗುತ್ತಿದೆ. ಎನ್​​ಡಿಎ ಮಿತ್ರಪಕ್ಷ ಪಿಎಂಕೆ ಧರ್ಮಪುರಿಯಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದರೆ, ಕೊಯಮತ್ತೂರಿನಲ್ಲಿ ಬಿಜೆಪಿಯ ಅಣ್ಣಾಮಲೈ ಹಿನ್ನಡೆಯಲ್ಲಿದ್ದಾರೆ. ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಈ ವರ್ಷ ಶೇಕಡಾ 69.72 ರಷ್ಟು ಮತದಾನವಾಗಿದೆ.

ಪ್ರಮುಖ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳು: ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಕೊಯಮತ್ತೂರಿನಲ್ಲಿ ಡಿಎಂಕೆಯ ಗಣಪತಿ ಪಿ ಮತ್ತು ಎಐಎಡಿಎಂಕೆಯ ಸಿಂಗೈ ವಿರುದ್ಧ ಸ್ಪರ್ಧಿಸಿದರೆ, ಹಾಲಿ ಡಿಎಂಕೆ ಸಂಸದೆ ಕನಿಮೋಳಿ ತೂತುಕುಡಿಯಲ್ಲಿ ಎಐಎಡಿಎಂಕೆಯ ಆರ್.ಶಿವಸಾಮಿ ವೇಲುಮಣಿ ಅವರನ್ನು ಎದುರಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲ ತಮಿಳಿಸೈ ಸೌಂದರರಾಜ್ ಚೆನ್ನೈ ದಕ್ಷಿಣದಿಂದ ಸ್ಪರ್ಧಿಸಿದರೆ, ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಅವರು ನೀಲಗಿರಿಯಲ್ಲಿ ಕೇಂದ್ರ ಮೀನುಗಾರಿಕೆ ರಾಜ್ಯ ಸಚಿವರೂ ಆಗಿರುವ ಬಿಜೆಪಿಯ ಎಲ್.ಮುರುಗನ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ:AP Election results 2024 live: ಆಂಧ್ರ ಪ್ರದೇಶ ವಿಧಾನಸಭೆ: ಭರ್ಜರಿ ಗೆಲುವಿನತ್ತ ಟಿಡಿಪಿ

Exit mobile version