ನವದೆಹಲಿ: ಉತ್ತರಪ್ರದೇಶ(Uttar Pradesh)ದಲ್ಲಿ ಈ ಬಾರಿ ಡಬಲ್ ಎಂಜಿನ್ ಸರ್ಕಾರವಾಗಲೀ, ಅಯೋಧ್ಯೆ(Ayodhya) ರಾಮ ಮಂದಿರವಾಗಲಿ ಬಿಜೆಪಿ(BJP)ಗೆ ವರವಾಗಿಲ್ಲ. ಇಡೀ ಸುಮಾರು 60ಕ್ಕಿಂತ ಹೆಚ್ಚಿನ ಸ್ಥಾನದ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಕನಸಿಗೆ ಈ ಬಾರಿ ತನ್ನೀರೆರಚಿದಂತಾಗಿದ್ದು, ಕೇವಲ 33 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು(Election Results 2024). ಇದರಿಂದ ಬಿಜೆಪಿಗೆ ಬಹಳ ಮುಖಭಂಗ ಎದುರಿಸುವಂತಾಗಿದೆ. ಅದರಲ್ಲೂ ಈ ಬಾರಿ ಶ್ರೀರಾಮನ ಮಂದಿರ ನಿರ್ಮಾಣಗೊಂಡು ಇಡೀ ಜಗತ್ತನ್ನೇ ಸೆಳೆದಿದ್ದ ಅಯೋಧ್ಯೆಯಲ್ಲೇ ಬಿಜೆಪಿ ಹಿನ್ನಡೆ ಅನುಭವಿಸಿರುವುದು ಪಕ್ಷಕ್ಕೆ ದೇಶ-ವಿದೇಶದಲ್ಲೂ ಮುಖಭಂಗ ಎದುರಿಸುವಂತಾಗಿದೆ. ಹಾಗಿದ್ದರೆ ಅಯೋಧ್ಯೆಯಲ್ಲೇ ಬಿಜೆಪಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಹಿನ್ನಡೆ ಅನುಭವಿಸಲು ಕಾರಣ ಏನು?
ಅಯೋಧ್ಯೆಯನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ (Faizabad Election Result) ಎಸ್‌ಪಿ (SP) ಅಭ್ಯರ್ಥಿಯ ಮುಂದೆ ಬಿಜೆಪಿ (BJP) ಅಭ್ಯರ್ಥಿ ಸೋತಿದ್ದಾರೆ. ಅಯೋಧ್ಯೆಯನ್ನು ಒಳಗೊಂಡ ಫೈಜಾಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅವಧೇಶ್ ಪ್ರಸಾದ್ ಮುಂದೆ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸೋತಿದ್ದಾರೆ. ಫೈಜಾಬಾದ್‌ನಿಂದ ಮೂರು ಬಾರಿ ಸಂಸದರಾಗಿರುವ ಸಿಂಗ್ ಅವರ ಈ ಸಲದ ಸೋಲು ಅಚ್ಚರಿದಾಯಕವಾಗಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಗಿಂತ 10,000ಕ್ಕೂ ಅಧಿಕ ಮತಗಳ ಅಂತರದಿಂದ ಸಿಂಗ್ ಹಿಂದುಳಿದರು. ಫೈಜಾಬಾದ್ ಜಿಲ್ಲೆಯನ್ನು 2018ರಲ್ಲಿ ಅಧಿಕೃತವಾಗಿ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಯಿತು. ಆದಾಗ್ಯೂ, ಲೋಕಸಭಾ ಸ್ಥಾನವನ್ನು ಇನ್ನೂ ಫೈಜಾಬಾದ್ ಎಂದು ಕರೆಯಲಾಗುತ್ತದೆ.
ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ಅಂಶಗಳಾವುದು?
ಬಿಜೆಪಿ ಈ ಬಾರಿ ಹಿಂದುಳಿದ ವರ್ಗ ಮತ್ತು ದಲಿತ ವರ್ಗದಿಂದ ಅಂತರ ಕಾಯ್ದುಕೊಂಡು ಬಂದಿರುವುದು ಕೂಡ ಎಸ್‌ಪಿಗೆ ಲಾಭದಾಯಕವಾಗಿತ್ತು. ಅದೂ ಅಲ್ಲದೇ ಮಂದಿರ ನಿರ್ಮಾಣಕ್ಕೆಂದು ಜನರ ಭೂಮಿಯನ್ನು ಪಡೆದಿದ್ದು, ಅದರ ಪರಿಹಾರ ಹಣ ಇನ್ನೂ ಒದಗಿಸಿಲ್ಲ ಎಂಬುದನ್ನು ಸರಿಯಾದ ರೀರಿಯಲ್ಲಿ ಜನರಿಗೆ ಮನದಟ್ಟು ಮಾಡುವಲ್ಲಿ ಅಖಿಲೇಶ್ ಯಾದವ್ ಬಣ ಯಶಸ್ವಿ ಆಗಿತ್ತು. ಅದೂ ಅಲ್ಲದೇ ರಾಜ್ಯ ಮತ್ತು ಕೇಂದ್ರ ಬಿಜೆಪಿ ನಡುವಿನ ಬಿಕ್ಕಟ್ಟನ್ನು ಜನರಿಗೆ ಎತ್ತಿ ತೋರಿಸಲಾಯಿತು. ಇವೆಲ್ಲಾ ಕಾರಣಗಳಿಂದಾಗಿ ಬಿಜೆಪಿ ಮೇಲಿನ ಒಲುವು ಜನರಿಗೆ ಕಡಿಮೆ ಆಯಿತು.
ಬಿಜೆಪಿಯ ‘400 ಪಾರ್’ ಘೋಷಣೆ ಹೇಗೆ ಹಿನ್ನಡೆಯಾಯಿತು?
ಚುನಾವಣೆ ಆರಂಭಕ್ಕೂ ಮುನ್ನ ಬಿಜೆಪಿ ಈ ಬಾರಿ ʼ400 ಪಾರ್ʼ ಘೋಷಣೆ ಕೂಗುತ್ತಲೇ ಬಂದಿದೆ. ಇದೆ ವಿಚಾರವನ್ನು ಎತ್ತಿಕೊಂಡ ಸಮಾಜವಾದಿ ಪಕ್ಷ ಬಿಜೆಪಿ ಒಂದು ವೇಳೆ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿದರೆ ಸಂವಿಧಾನವನ್ನೇ ಬದಲಿಸಿ ಬಿಡುತ್ತದೆ. ಆ ಮೂಲಕ ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ ಎಂದು ಪ್ರಚಾರ ಕಾರ್ಯಕ್ರಮದಲ್ಲಿ ಒತ್ತಿ ಒತ್ತಿ ಹೇಳಿತ್ತು.
ದಲ್ಲದೆ, ಸಮಾಜವಾದಿ ಪಕ್ಷದ ಮತಬ್ಯಾಂಕ್ ಪರವಾಗಿ ಪ್ರಬಲವಾದ ಜಾತಿ ಸಮೀಕರಣವನ್ನು ಹೊಂದಿರುವ ಸ್ಥಾನಗಳಲ್ಲಿ ಫೈಜಾಬಾದ್ ಕೂಡ ಒಂದಾಗಿದೆ. ಅಲ್ಲದೆ, ಸಮಾಜವಾದಿ ಪಕ್ಷಕ್ಕೆ ಕೆಲಸ ಮಾಡಿದಂತೆ ತೋರುತ್ತಿರುವುದು ಬಿಜೆಪಿಯು ಬ್ರೂಟ್ ಬಹುಮತವನ್ನು ಪಡೆದರೆ ಸಂವಿಧಾನವನ್ನು ಬದಲಾಯಿಸುವ ನಿರೂಪಣೆಯಾಗಿದೆ. ಸಮಾಜವಾದಿ ಪಕ್ಷದ ಆರೋಪಕ್ಕೆ ಸರಿಯಾದ ಸಷ್ಟನೆ ಕೊಡುವಲ್ಲಿ ಸೋತ ಬಿಜೆಪಿ ಜನರ ವಿಶ್ವಾಸವನ್ನೇ ಕಳೆದುಕೊಂಡಿತು.
ಫೈಜಾಬಾದ್‌ನಲ್ಲಿನ ಜಾತಿ ಸಮೀಕರಣವೇ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಎಂದು ಪರಿಗಣಿಸಲಾಗಿದೆ. ಅಯೋಧ್ಯೆಯು ಅತಿ ಹೆಚ್ಚು OBC ಮತದಾರರನ್ನು ಹೊಂದಿದೆ, ಕುರ್ಮಿಗಳು ಮತ್ತು ಯಾದವ ಸಮುದಾಯವೇ ಬಲಿಷ್ಟವಾಗಿದೆ. ಒಬಿಸಿಗಳು 22% ಮತದಾರರು ಮತ್ತು ದಲಿತರು 21% ರಷ್ಟಿದ್ದಾರೆ. ದಲಿತರ ಪೈಕಿ ಪಾಸಿ ಸಮುದಾಯದವರು ಗರಿಷ್ಠ ಮತದಾರರನ್ನು ಹೊಂದಿದ್ದಾರೆ. ವಿಜೇತ ಅಭ್ಯರ್ಥಿ ಅವಧೇಶ್ ಪ್ರಸಾದ್ ಪಾಸಿ ಸಮುದಾಯಕ್ಕೆ ಸೇರಿದವರು.
ಇದನ್ನೂ ಓದಿ: Valmiki Corporation Scam: ಸಚಿವ ನಾಗೇಂದ್ರ ಇಂದೇ ರಾಜೀನಾಮೆ: ಖಚಿತಪಡಿಸಿದ ಡಿಸಿಎಂ ಡಿಕೆಶಿ