Site icon Vistara News

ವಾಟ್ಸಾಪ್‌ ಗ್ರೂಪಿನಿಂದ ತೆಗೆದಿದ್ದಕ್ಕೆ ಬಾಸ್ ಮೇಲೆ ಹಲ್ಲೆ ಮಾಡಿ, ಐಫೋನ್ ಒಡೆದ ನೌಕರ!

employee attacked the boss and broke the iPhone for removing him from the WhatsApp group

ನವದೆಹಲಿ: ಉದ್ಯೋಗಿಗಳಿಗೆ (employee) ಬಾಸ್‌ಗಳ (Office Boss) ಮೇಲೆ ಹೇಗೆಲ್ಲ ಕೋಪ ಇರುತ್ತೆ ನೋಡಿ ಮತ್ತು ಅವಕಾಶ ಸಿಕ್ಕಾಗ ತಮ್ಮ ಸಿಟ್ಟನ್ನು ಹೇಗೆ ತೀರಿಸಿಕೊಳ್ಳುತ್ತಾರೆಂಬುದಕ್ಕೆ ಇಲ್ಲೊಂದು ಉದಾಹರಣೆ ದೊರೆತಿದೆ. ಆಫೀಸ್‌ ವಾಟ್ಸಾಪ್ ಗ್ರೂಪಿನಿಂದ(WhatsApp Group) ರಿಮೂವ್ ಮಾಡಿದರು ಎಂಬ ಕಾರಣಕ್ಕೆ ಉದ್ಯೋಗಿಯೊಬ್ಬರು ತಮ್ಮ ಬಾಸ್ ಮೇಲೆ ದೈಹಿಕ ಹಲ್ಲೆ (Physical Assault) ಮಾಡಿದ್ದು, ಮಾತ್ರವಲ್ಲದೇ ಅವರ ದುಬಾರಿ ಐಫೋನ್ (iPhone Damage) ಕೂಡ ಒಡೆದು ಹಾಕಿದ್ದಾರೆ. ಈ ಘಟನೆ ಪುಣೆಯ ಇನಸ್ಟಾ ಗೋ ಎಂಬ ಕಚೇರಿಯಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದೆ.

ಫ್ರೀ ಪ್ರೆಸ್ ಜರ್ನಲ್‌ನ ವರದಿಯ ಪ್ರಕಾರ ಡಿಸೆಂಬರ್ 1 ರಂದು 12:30 ರಿಂದ 1 ರವರೆಗೆ ಇನ್‌ಸ್ಟಾ ಗೋ ಕಂಪನಿಯಲ್ಲಿ ಘಟನೆ ಸಂಭವಿಸಿದೆ. ಮಹಾರಾಷ್ಟ್ರದ ಪುಣೆಯ ಚಂದನ್ ನಗರದ ಹಳೆಯ ಮುಂಡ್ವಾ ರಸ್ತೆಯಲ್ಲಿರುವ ಖಾಸಗಿ ಕಂಪನಿ ಕಚೇರಿ ಇದು. ಉದ್ಯೋಗಿ ಸತ್ಯಂ ಶಿಂಗ್ವಿ ಅವರು ಸಂಸ್ಥೆಯ ಮುಖ್ಯಸ್ಥ ಅಮೋಲ್ ಶೇಷರಾವ್ ಧೋಬ್ಲೆ ಅವರಿಗೆ ದೈಹಿಕವಾಗಿ ಕಿರುಕುಳ ನೀಡಿದ್ದಲ್ಲದೆ, ಅವರ ಸೆಲ್‌ಫೋನ್ ಒಡೆದು ಹಾಕಿದ್ದಾರೆ. ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ವಾಟ್ಸಾಪ್ ಗ್ರೂಪ್‌ನಿಂದ ತೆಗೆದು ಹಾಕಿದ್ದಕ್ಕೆ ಇಷ್ಟೆಲ್ಲ ರಂಪಾ ಮಾಡಿದ್ದಾರೆ ಉದ್ಯೋಗಿ ಸತ್ಯಂ ಶಿಂಗ್ವಿ.

ಲೋಹೆಗಾಂವ್‌ನ ಖಾಂಡ್ವೆ ನಗರದ ನಿವಾಸಿ, ಬಾಸ್ ಅಮೋಲ್ ಶೇಷರಾವ್ ಧೋಬ್ಲೆ ಅವರು ಡಿಸೆಂಬರ್ 6 ರಂದು ಚಂದನ್ ನಗರ ಪೊಲೀಸ್ ಠಾಣೆಯಲ್ಲಿ ಸತ್ಯಂ ಶಿಂಗ್ವಿ ವಿರುದ್ಧ ದೂರು ದಾಖಲಿಸಿದ್ದಾರೆ. ಸತ್ಯಂ ಅವರ ತಪ್ಪು ಕೆಲಸ ಮತ್ತು ದುರಂಹಕಾರದ ನಡವಳಿಕೆ ತೋರಿದ್ದಾರೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ವರದಿಗಳ ಪ್ರಕಾರ, ಸತ್ಯಂ ವಿರುದ್ಧ ದುರ್ವರ್ತನೆ ಆರೋಪ ಹೊರಿಸಿರುವುದು ಇದೇ ಮೊದಲಲ್ಲ. ಅವರ ದುರ್ವರ್ತನೆಗಾಗಿ ಅವರು ಕಂಪನಿಯಲ್ಲಿ ಹಲವಾರು ಗ್ರಾಹಕರ ದೂರುಗಳಿಗೆ ಒಳಗಾಗಿದ್ದರು.

ಇಷ್ಟಾಗಿಯೂ, ದುರ್ನಡತೆ ತೋರಿದ ಉದ್ಯೋಗಿ ತಾನು ಮಾಡಿದ ಕೃತ್ಯದ ಕುರಿತು ವಾದ ಮಾಡಲು ಇನ್‌ಸ್ಟಾ ಗೋ ಕಂಪನಿಯು ಅವಕಾಶ ಕಲ್ಪಿಸಲು ಮುಂದಾಗಿತ್ತು. ಆದರೆ, ಆರೋಪಿ ಸತ್ಯಂ ಶಿಂಗ್ವಿ ಕಂಪನಿಯ ಸಂಪರ್ಕಕ್ಕೆ ಸಿಕ್ಕೇ ಇಲ್ಲ. ಹೀಗಾಗಿ, ಕಂಪನಿಯ ವಾಟ್ಸಾಪ್‌ ಗ್ರೂಪ್‌ನಿಂದ ಶಿಂಗ್ವಿಯನ್ನು ತೆಗೆದು ಹಾಕಲಾಗಿದೆ. ಇದರಿಂದ ರೊಚ್ಚಿಗೆದ್ದ ಆರೋಪಿ ಅತ್ಯಂತ ಅನುಚಿತ ಮತ್ತು ಕಾನೂನುಬಾಹಿರ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಕೆಲಸ ಮಾಡುವ ಸಮಯದಲ್ಲಿ ಬಾಸ್ ಎದುರು ಜಗಳಕ್ಕೆ ನಿಂತ ಶಿಂಗ್ವಿ, ವಾಟ್ಸಾಪ್‌ ಗ್ರೂಪ್‌ನಿಂದ ತೆಗೆದು ಹಾಕಿದ್ದೇಕೆ ಎಂದು ಪ್ರಶ್ನಿಸಿದ್ದಾನೆಂದು ಹೇಳಲಾಗಿದೆ.

ಬಳಿಕ ಆರೋಪಿ ಸತ್ಯಂ ಶಿಂಗ್ವಿ, ಬಿದರಿನ ಕೋಲಿನೊಂದಿಗೆ ಕಚೇರಿಗೆ ನುಗ್ಗಿ ಬಾಸ್ ಅಮೋಲ್ ಧೋಬ್ಲೆ ಮೇಲೆ ಹಲ್ಲೆ ಮಾಡಿದ್ದಾನೆ. ಅವರ ಐಫೋನ್ ಒಡೆದು ಹಾಕಿದ್ದಾನೆ. ಈ ಕುರಿತು ಇನ್ನೂ ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪುಣೆಯ ಚಂದನನಗರ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: WhatsApp New Feature: ವಾಟ್ಸಾಪ್‌ನಲ್ಲಿ ಇನ್ನು ಎಚ್‌ಡಿ ಫೋಟೋ ಕಳುಹಿಸಬಹುದು!

Exit mobile version