Site icon Vistara News

ತಮ್ಮ ಬಗ್ಗೆ ಟ್ರೋಲ್‌ ಮಾಡಿದ್ದನ್ನೂ ಮೆಚ್ಚಿದ ಮೋದಿ; ಮಮತಾ ಬ್ಯಾನರ್ಜಿ ನೋಟಿಸ್; ಯಾರು ಸರ್ವಾಧಿಕಾರಿ?

Phalody Satta Bazar

Lok Sabha Election 2024: Phalodi Satta Pazar prediction suggests BJP's Win; Here Is State Wise Seat

ನವದೆಹಲಿ: ಸೋಷಿಯಲ್‌ ಮೀಡಿಯಾ ಜಮಾನದಲ್ಲಿ ಗಣ್ಯರ ಕುರಿತು ಟ್ರೋಲ್‌ (Troll) ಮಾಡುವುದು, ಮೀಮ್‌ಗಳ (Meme) ಮೂಲಕ ಅವರ ಕಾಲೆಳೆಯುವುದು ಸಾಮಾನ್ಯ. ವಿಡಿಯೊ ಅಥವಾ ರೀಲ್ಸ್‌ ನೋಡಿ, ನಕ್ಕು, ಮುಂದೆ ಹೋಗುವಂತಹ ಟ್ರೋಲ್‌ಗಳು ವೈರಲ್‌ (Viral Video) ಆಗುತ್ತವೆ. ಆದರೆ, ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಮೂಲಕ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಟ್ರೋಲ್‌ ಮಾಡಿದ್ದಕ್ಕೆ ಇಬ್ಬರು ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಪಶ್ಚಿಮ ಬಂಗಾಳ ಪೊಲೀಸರು ನೋಟಿಸ್‌ ನೀಡಿದ್ದಾರೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ತಮ್ಮ ಬಗ್ಗೆ ಮಾಡಿದ ಟ್ರೋಲ್‌ ವಿಡಿಯೊವನ್ನು ಮೆಚ್ಚಿಕೊಂಡಿದ್ದಾರೆ.

ಸಾವಿರಾರು ಜನರ ಮಧ್ಯೆ ವ್ಯಕ್ತಿಯೊಬ್ಬ ಅತ್ಯುತ್ಸಾಹದಿಂದ ಬಂದು ಡಾನ್ಸ್‌ ಮಾಡುತ್ತಾನೆ. ಆ ವ್ಯಕ್ತಿಯ ಬದಲಿಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಬಳಸಿ ಮೋದಿ ಅವರು ಡಾನ್ಸ್‌ ಮಾಡುವಂತೆ ಎಡಿಟ್‌ ಮಾಡಲಾಗಿದೆ. ಈ ಟ್ರೋಲ್‌ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ ವ್ಯಕ್ತಿಯೊಬ್ಬ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾನೆ. “ಸರ್ವಾಧಿಕಾರಿ ನರೇಂದ್ರ ಮೋದಿ ಅವರು ಈ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ್ದಕ್ಕೆ ನನ್ನನ್ನು ಬಂಧಿಸಲಿಕ್ಕಿಲ್ಲ” ಎಂದು ಕ್ರಿಪ್ಟಿಕ್‌ ಆಗಿ ಪೋಸ್ಟ್‌ ಮಾಡಿದ್ದಾನೆ. ಆದರೆ, ಆ ವಿಡಿಯೊವನ್ನೇ ಶೇರ್‌ ಮಾಡಿದ ಮೋದಿ, ಅದನ್ನು ಮೆಚ್ಚಿಕೊಂಡಿದ್ದಾರೆ.

ಮೋದಿ ಪ್ರತಿಕ್ರಿಯಿಸಿದ್ದು ಹೀಗೆ…

“ನಿಮ್ಮಂತೆ, ನಾನು ಕೂಡ ನಾನೇ ನೃತ್ಯ ಮಾಡಿದಂತೆ ಬಿಂಬಿಸಿರುವ ವಿಡಿಯೊವನ್ನು ನೋಡಿ ಎಂಜಾಯ್‌ ಮಾಡಿದ್ದೇನೆ. ಇಂತಹ ಕ್ರಿಯೇಟಿವಿಯಿಂದ ಕೂಡಿರುವ ಟ್ರೋಲ್‌ಗಳು ಚುನಾವಣೆ ಕಣವನ್ನು ಮತ್ತಷ್ಟು ರಂಗೇರಿಸುವಂತೆ ಮಾಡಿವೆ” ಎಂದು ಹೇಳುವ ಮೂಲಕ ನರೇಂದ್ರ ಮೋದಿ ಅವರು ತಮ್ಮ ಬಗ್ಗೆ ಮಾಡಿದ ಟ್ರೋಲ್‌ಅನ್ನು ಕೂಡ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ. ನರೇಂದ್ರ ಮೋದಿ ಅವರ ಸಕಾರಾತ್ಮಕ ಮನೋಭಾವ, ಮೀಮರ್‌ಗಳನ್ನು ಕೂಡ ಹೊಗಳುವ ರೀತಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ರೋಲ್‌ ಸಹಿಸದ ದೀದಿ

ನರೇಂದ್ರ ಮೋದಿ ಅವರು ಡಾನ್ಸ್‌ ಮಾಡುವ ರೀತಿ ಬಿಂಬಿಸಿದ ರೀತಿಯೇ ಮಮತಾ ಬ್ಯಾನರ್ಜಿ ಅವರ ಟ್ರೋಲ್‌ ವಿಡಿಯೊವನ್ನು ಮೊದಲು ಹಂಚಿಕೊಳ್ಳಲಾಗಿತ್ತು. ತಮಾಷೆಗಾಗಿ ಮಾಡಿದ ವಿಡಿಯೊ ಕಂಡ ಪಶ್ಚಿಮ ಬಂಗಾಳ ಪೊಲೀಸರು, ಪೋಸ್ಟ್‌ ಮಾಡಿದ ಇಬ್ಬರಿಗೆ ಕಠಿಣ ಕ್ರಮದ ಎಚ್ಚರಿಕೆ ಜತೆಗೆ ನೋಟಿಸ್‌ ನೀಡಿದ್ದಾರೆ.

ಯಾವಾಗ ಟ್ರೋಲ್‌ ವಿಡಿಯೊ ಅಪ್‌ಲೋಡ್‌ ಮಾಡಿದ ಇಬ್ಬರಿಗೆ ನೋಟಿಸ್‌ ನೀಡಲಾಯಿತೋ, ಆಗ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಯಿತು. ನಾನು ಕೂಡ ಈ ವಿಡಿಯೊ ಅಪ್‌ಲೋಡ್‌ ಮಾಡಿದ್ದೇನೆ, ನನ್ನ ವಿಳಾಸ ಇದು, ನನಗೂ ನೋಟಿಸ್‌ ಕಳುಹಿಸಿ ಎಂದು ಬಿಜೆಪಿ ನಾಯಕರು ಸೇರಿ ಹಲವರು ಮಮತಾ ಬ್ಯಾನರ್ಜಿ ಅವರ ಟ್ರೋಲ್‌ ವಿಡಿಯೊವನ್ನು ಹಂಚಿಕೊಂಡರು. ಆ ಮೂಲಕ ಮಮತಾ ಬ್ಯಾನರ್ಜಿ ಅವರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: Trinamool Congress: ಮಮತಾ ಬ್ಯಾನರ್ಜಿಯನ್ನು ಅರೆಸ್ಟ್‌ ಮಾಡಿ; ಟಿಎಂಸಿ ಉಗ್ರ ಸಂಘಟನೆ ಎಂದು ಘೋಷಿಸಿ-ಬಿಜೆಪಿ ಆಗ್ರಹ

Exit mobile version