Site icon Vistara News

AK-47 Rifle: ಮೊದಲ ಮ್ಯಾರೇಜ್ ಆ್ಯನಿವರ್ಸರಿ, ಹೆಂಡತಿಗೆ ಎಕೆ-47 ರೈಫಲ್ ಗಿಫ್ಟ್ ನೀಡಿದ ಟಿಎಂಸಿ ಮಾಜಿ ನಾಯಕ!

Ak 47 Rifle

ನವದೆಹಲಿ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದ (Trinamool Congress – TMC)) ಮಾಜಿ ನಾಯಕರೊಬ್ಬರು ತಮ್ಮ ಪತ್ನಿಗೆ ವಿವಾಹ ವಾರ್ಷಿಕೋತ್ಸವದ (Marriage Anniversary) ಅಂಗವಾಗಿ ಎಕೆ-47 ರೈಫಲ್ ಗಿಫ್ಟ್ (AK-47 Rifle Gift) ನೀಡಿ, ವಿವಾದಕ್ಕೆ ಕಾರಣವಾಗಿದ್ದಾರೆ. ರಿಯಾಜುಲ್ ಹಕ್ (Riazul Haque) ಎಂಬುವವರೇ ತಮ್ಮ ಪತ್ನಿ ಸಬೀನಾ ಯಾಸ್ಮಿನ್ (Sabina Yasmin) ಅವರಿಗೆ ಈ ರೈಫಲ್ ಗಿಫ್ಟ್ ನೀಡಿದ್ದು, ಆ ಫೋಟೋವನ್ನು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದರು. ಆದರೆ, ವಿವಾದ ಜೋರಾಗುತ್ತಿದ್ದಂತೆ ಈಗ ಫೋಟೋವನ್ನು ಡಿಲಿಟ್ ಮಾಡಿದ್ದಾರೆ. ಈ ಮಧ್ಯೆ, ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಬಿಜೆಪಿ ಹಾಗೂ ಎಡಪಕ್ಷಗಳು ಆಗ್ರಹಿಸಿವೆ(West Bengal).

ರಿಯಾಜ್ ಅವರ ನಡೆಯನ್ನು ಖಂಡಿಸಿರುವ ಭಾರತೀಯ ಜನತಾ ಪಾರ್ಟಿ ಮತ್ತು ಎಡ ಪಕ್ಷಗಳು ತಾಲಿಬಾನ್ ಆಡಳಿತಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಆರೋಪಿಸಿವೆ. ಅಷ್ಟೇ ಅಲ್ಲದೇ, ಈ ಕುರಿತು ಉನ್ನತ ತನಿಖೆ ನಡೆಸಬೇಕು ಎಂದು ಪಶ್ಚಿಮ ಬಂಗಾಳಕ್ಕೆ ಆಗ್ರಹಿಸಿವೆ.

ವಿವಾದ ಸ್ವರೂಪ ಗಂಭೀರವಾಗುತ್ತಿದ್ದಂತೆ ಎಕ್ಸ್ ವೇದಿಕೆಯಿಂದ ಎಕೆ-47 ರೈಫಲ್ ಜತೆಗಿರುವ ತಮ್ಮ ಪತ್ನಿಯ ಫೋಟೋ ಡಿಲಿಟ್ ಮಾಡಿರುವ ರಿಯಾಜ್ ಅವರು, ವಿವಾಹ ವಾರ್ಷಿಕೋತ್ಸವದ ಅಂಗವಾಗಿ ನೀಡಿದ್ದ ರೈಫಲ್ ಒರಿಜಿನಲ್ ಅಲ್ಲ. ಅದು ಆಟಿಕೆ ರೈಫಲ್ ಆಗಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಚಿತ್ರದಲ್ಲಿ ನನ್ನ ಹೆಂಡತಿ ಆಟಿಕೆ ಬಂದೂಕನ್ನು ಹಿಡಿದಿದ್ದಳು. ಆಟಿಕೆ ರೈಫಲ್ ನೀಡುವುದರಲ್ಲಿ ಯಾವುದೇ ಅಕ್ರಮವಿಲ್ಲ. ನನ್ನ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ, ಏಕೆಂದರೆ ಆ ಬಂದೂಕು ನಿಜವಲ್ಲ ಎಂದು ರಿಯಾಜುಲ್ ಹೇಳಿದ್ದಾರೆ. ಬಹುತೇಕ ಎಲ್ಲರೂ ಅದು ನಿಜವಾದ ರೈಫಲ್ ಕೇಳುತ್ತಿದ್ದರಿಂದ ಫೋಸ್ಟ್ ಅಳಿಸಿ ಹಾಕಿದ್ದೇನೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ ರಿಯಾಜ್.

ಈ ಸುದ್ದಿಯನ್ನೂ ಓದಿ: ಐಟಿಬಿಪಿ ಕ್ಯಾಂಪಿನಿಂದಲೇ ಎಕೆ-47 ರೈಫಲ್‌ಗಳ ಕಳವು

ರಿಯಾಜುಲ್ ಹಕ್ ಅವರು ರಾಮ್‌ಪುರಹತ್-1 ಬ್ಲಾಕ್‌ನಲ್ಲಿ ಟಿಎಂಸಿಯ ಅಲ್ಪಸಂಖ್ಯಾತರ ಸೆಲ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆದರೆ ಕೆಲವು ತಿಂಗಳ ಹಿಂದೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ಉಪ ಸ್ಪೀಕರ್ ಮತ್ತು ರಾಮ್‌ಪುರಹಟ್ ಶಾಸಕ ಆಶಿಶ್ ಬಂಡೋಪಾಧ್ಯಾಯ ಅವರಿಗೆ ಆಪ್ತರು ಎಂದು ಹೇಳಲಾಗುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version