Site icon Vistara News

Exit poll 2024: ಮೂರು ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಸೀಟು 400 ದಾಟಲಿದೆ!

Exit Poll 2024

ನವದೆಹಲಿ: ಲೋಕಸಭಾ ಚುನಾವಣಾ(Lok Sabha Election 2024) ಕೊನೆಗೊಂಡಿದ್ದು, ಎಕ್ಸಿಟ್‌ ಪೋಲ್‌(Exit Poll 2024) ಫಲಿತಾಂಶವೂ ಹೊರಬಿದ್ದಾಗಿದೆ. ಚುನಾವಣೆಗೂ ಮುನ್ನ ಅಬ್‌ ಕೀ ಬಾರ್‌ 400 ಪಾರ್‌(400 ಕ್ಕೂ ಅಧಿಕ ಸೀಟು) ಅಂತಾ ಹೇಳುತ್ತಲೇ ಬಂದಿರುವ ಬಿಜೆಪಿ ಕನಸು ನನಸಾಗುವುದು ಬಹುತೇಕ ಖಚಿತವಾಗಿದೆ. ಅದಕ್ಕೆ ಪೂರಕ ಎಂಬಂತೆ ನಿನ್ನೆ ಹೊರಬಿದ್ದಿರುವ ಎಕ್ಸಿಟ್‌ ಪೋಲ್‌ ಫಲಿತಾಂಶಗಳಲ್ಲಿ ಮೂರು ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಈ ಬಾರಿ 400ಕ್ಕೂ ಅಧಿಕ ಸೀಟ್‌ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿವೆ.

ಇಂಡಿಯಾ ನ್ಯೂಸ್ ಡೈನಾಮಿಕ್ಸ್ ಸಮೀಕ್ಷಾ ವರದಿ ಎನ್‌ಡಿಎ 371,ಇಂಡಿಯಾ ಮೈತ್ರಿ 125 ಇತರರು 47 ಸ್ಥಾನಗಳನ್ನು ಪಡೆದರೆ, ಜನ್ ಕಿ ಬಾತ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 377, ಇಂಡಿಯಾ ಒಕ್ಕೂಟ 151, ಇತರರು 15, ಎನ್‌ಡಿಟಿವಿ ಇಂಡಿಯಾ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 365, ಇಂಡಿಯಾ ಒಕ್ಕೂಟ 142, ಇತರರು 36, ನ್ಯೂಸ್ ನೇಷನ್ ಸಮೀಕ್ಷಾ ವರದಿ ಪ್ರಕಾರ, ಎನ್‌ಡಿಎ 342-378, ಇಂಡಿಯಾ ಒಕ್ಕೂಟ 153-169, ಇತರರು 21-23, ರಿಪ್ಲಬಿಕ್ ಭಾರ್ ಮ್ಯಾಟ್ರಿಜ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 353-368, ಇಂಡಿಯಾ ಒಕ್ಕೂಟ 118-133, ಇತರರು 43-48 ಸ್ಥಾನಗಳನ್ನು ಗಳಿಸಲಿದೆ. ಇನ್ನು ಪಿಮಾರ್ಕ್ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 359, ಇಂಡಿಯಾ ಒಕ್ಕೂಟ 154, ಇತರರು 30 ಕ್ಷೇತ್ರಗಳಲ್ಲಿ ಗೆಲ್ಲಲಿದೆ.

ಇನ್ನು ನ್ಯೂಸ್ 18 ಮೆಗಾ ಎಕ್ಸಿಟ್ ಪೋಲ್ ಪ್ರಕಾರ, ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 23-26 ಸ್ಥಾನ ಬರಲಿದೆ. ಕಾಂಗ್ರೆಸ್ ಕೇವಲ 3-7 ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ ಗೆಲುವು ದಾಖಲಿಸಬಹುದು ಎಂದು ಹೇಳಿದೆ. ರಿಪಬ್ಲಿಕ್ ಟೀವಿ ಸಮೀಕ್ಷೆ ಪ್ರಕಾರ ಬಿಜೆಪಿ ಜೆಡಿಎಸ್ 22, ಕಾಂಗ್ರೆಸ್ 6 ಸ್ಥಾನ ಗೆಲ್ಲಲಿವೆ. ಇಂಡಿಯಾ ಟುಡೇ, ಎಬಿಪಿ ನ್ಯೂಸ್ ಎರಡೂಸಮೀಕ್ಷೆಗಳುಎನ್‌ಡಿಗೆ 23-25,ಕಾಂಗ್ರೆಸ್ ಗೆ 3-5 ಸ್ಥಾನ ನೀಡಿವೆ.

ಸಕ್ಸಸ್‌ ಆಗುತ್ತಾ ಬಿಜೆಪಿಯ 400 ಟಾರ್ಗೆಟ್‌?

ಇನ್ನು ಮೂರು ಸಮೀಕ್ಷಾ ವರದಿಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 400 ಟಾರ್ಗೆಟ್‌ ದಾಟಲಿದೆ ಎಂಬುದು ಬಯಲಾಗಿದೆ. ಇಂಡಿಯಾ ಟಿವಿ ನೀಡಿರುವ ಸಮೀಕ್ಷಾ ವರದಿ ಪ್ರಕಾರ ಎನ್‌ಡಿಎ 371-401 ಹಾಗೂ ಇಂಡಿಯಾ ಒಕ್ಕೂಟ 109-139 ಸ್ಥಾನಗಳನ್ನು ಗಳಿಸಲಿವೆ. ಆಕ್ಸಿಸ್ ಮೈ ಇಂಡಿಯಾ ನಡೆಸಿರುವ ಸಮೀಕ್ಷೆಯಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ. ಈ ಸಂಸ್ಥೆಯ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಒಟ್ಟು 543 ಸಂಸದೀಯ ಸ್ಥಾನಗಳಲ್ಲಿ ಎನ್‌ಡಿಎ 361 ರಿಂದ 401 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೇ ಚಾಣಾಕ್ಯ ವರದಿ ಪ್ರಕಾರವೂ ಎನ್ಡಿಎಗೆ 400ಕ್ಕೂ ಅಧಿಕ ಸ್ಥಾನಗಳು ದೊರೆಯಲಿದೆ.

ಹಿಂದೊಮ್ಮೆ ನಡೆದಿತ್ತು ಚಾರ್‌ ಸೌ ಪಾರ್‌

ದೇಶದ ಚುನಾವಣಾ ಇತಿಹಾಸದಲ್ಲಿ ಕೇವಲ ಒಂದೇ ಒಂದು ಬಾರಿ ಪಕ್ಷವೊಂದು 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿ ಪ್ರಚಂಡ ಗೆಲುವು ಸಾಧಸಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 541 ಸ್ಥಾನಗಳಲ್ಲಿ 414 ಸ್ಥಾನಗಳನ್ನು ಗಳಿಸಿತು. ಇದು ಕಾಂಗ್ರೆಸ್‌ನ ಐತಿಹಾಸಿಕ ಗೆಲವಾಗಿತ್ತು. ಇದೀಗ ಈ ಬಾರಿ ಎನ್‌ಡಿಎ ಮತ್ತೊಮ್ಮೆ ಈ ಇತಿಹಾಸ ಬರೆಯುತ್ತದೋ ಅನ್ನೋದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ:Exit Poll 2024 : ಟಿಎಂಸಿಯ ಭದ್ರಕೋಟೆಗೆ ಕಮಲ ಪಕ್ಷದ ಲಗ್ಗೆ; ಮಮತಾ ಬ್ಯಾನರ್ಜಿಗೆ ಮುಖಭಂಗ?

Exit mobile version