2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Elections 2023) ಗುರುವಾರ (ನವೆಂಬರ್ 30) ತೆರೆ ಬೀಳಲಿದೆ. ಸದ್ಯದಲ್ಲೇ ಎಕ್ಸಿಟ್ ಪೋಲ್ ಪ್ರಕಟವಾಗಲಿವೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ, ತೆಲಂಗಾಣ ಚುನಾವಣೆ ಮುಗಿದಿದೆ. ಚುನಾವಣೆ ಫಲಿತಾಂಶಕ್ಕೆ ಮತಗಟ್ಟೆ ಸಮೀಕ್ಷಾ ವರದಿಯು ದಿಕ್ಸೂಚಿಯಾಗುವ ಸಾಧ್ಯತೆ ಇರುವ ಕಾರಣ ಐದೂ ರಾಜ್ಯಗಳ ಟ್ರೆಂಡ್ ಕಾತರ ಹೆಚ್ಚಾಗಿದೆ.
ತೆಲಂಗಾಣ ಜನ್ ಕಿ ಬಾತ್ ಚುನಾವಣೋತ್ತರ ಸಮೀಕ್ಷೆ ಭವಿಷ್ಯ
ಕಾಂಗ್ರೆಸ್: 48-64
ಬಿಆರ್ಎಸ್ : 40-55
ಬಿಜೆಪಿ: 7-13
ಎಐಎಂಐಎಂ: 4-7
ಒಟ್ಟು ಸ್ಥಾನಗಳು: 119
ಛತ್ತೀಸ್ಗಢದಲ್ಲಿ 90 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಇಲ್ಲಿ ಮ್ಯಾಜಿಕ್ ನಂಬರ್ 46
ಎಬಿಪಿ ನ್ಯೂಸ್- ಸಿ ಓಟರ್ ಪ್ರಕಾರ ಬಿಜೆಪಿಗೆ 36ರಿಂದ 48, ಕಾಂಗ್ರೆಸ್ಗೆ 41-53
ಇಂಡಿಯಾ ಟುಡೆ- ಆ್ಯಕ್ಸಿಸ್ ಮೈ ಇಂಡಿಯಾ ಪ್ರಕಾರ ಬಿಜೆಪಿಗೆ 36-46. ಕಾಂಗ್ರೆಸ್ಗೆ 40-50
ಇಂಡಿಯಾ ಟಿವಿ- ಸಿಎನ್ಎಕ್ಸ್- ಬಿಜೆಪಿ 30- 40, ಕಾಂಗ್ರೆಸ್ 46- 56
ಜನ್ಕಿ ಬಾತ್ ಪ್ರಕಾರ ಬಿಜೆಪಿಗೆ 34 -45, ಕಾಂಗ್ರೆಸ್ಗೆ 42- 53 ಸ್ಥಾನಗಳು ಲಭಿಸಲಿವೆ.
ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ಗೆ ಇಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬಹುದು ಎನ್ನಲಾಗಿದೆ.
ಮಧ್ಯಪ್ರದೇಶದಲ್ಲಿ ಒಟ್ಟು 230 ಸ್ಥಾನಗಳಿವೆ
ಜನ್ಕಿ ಬಾತ್ ಪ್ರಕಾರ ಬಿಜೆಪಿಗೆ 100ರಿಂದ 103, ಕಾಂಗ್ರೆಸ್ಗೆ 102ರಿಂದ 105 ಸ್ಥಾನ ದೊರೆಯಲಿದೆ ಬಿಎಸ್ಪಿಗೆ ಒಂದೇ ಒಂದು ಸ್ಥಾನ ಸಿಗುವುದಿಲ್ಲ.
ರಿಪಬ್ಲಿಕ್ ಟಿವಿ ಪ್ರಕಾರ ಬಿಜೆಪಿಗೆ 118ರಿಂದ 130, ಕಾಂಗ್ರೆಸ್ಗೆ 97ರಿಂದ 107 ಸ್ಥಾನ ದೊರೆಯಲಿದೆ.
ಟಿವಿ9 ಭರತ್ ವರ್ಷ್ ಪ್ರಕಾರ ಬಿಜೆಪಿಗೆ 106ರಿಂದ 116, ಕಾಂಗ್ರೆಸ್ಗೆ 111- 121 ಸ್ಥಾನ ದೊರೆಯಲಿದೆ.
ಇಲ್ಲಿ ಎರಡು ಸಮೀಕ್ಷೆಗಳು ಕಾಂಗ್ರೆಸ್ಗೆ ಹೆಚ್ಚು ಸ್ಥಾನ ಎಂದು ಹೇಳಿದೆ. ಇಲ್ಲಿ ಮ್ಯಾಜಿಕ್ ನಂಬರ್ 116
ಜನ್ಕಿ ಬಾತ್ಪ್ರಕಾರ ಛತ್ತೀಸ್ಗಢದಲ್ಲ ಕಾಂಗ್ರೆಸ್ ಅಧಿಕಾರಕ್ಕೆ ,ಮ್ಯಾಜಿಕ್ ನಂಬರರ 46, ಕಾಂಗ್ರೆಸ್ ಅಷ್ಟು ಸ್ಥಾನ ಪಡೆಯಲಿದೆ ಬಿಜೆಪಿಗೆ 41 ಸ್ಥಾನ ದೊರೆಯಲಿದೆ. ಇತರರಿಗೆ 3 ಸ್ಥಾನ ಸಿಗಲಿದೆ.
ಜನ್ಕಿ ಬಾತ್
ಮಿಜೋರಾಂ
ಎನ್ಎನ್ಎಫ್-10ರಿಂದ 14
ಝಡ್ಪಿಎಮ್-15ರಿಂದ 20
ಕಾಂಗ್ರೆಸ್-5ರಿಂದ9
ಬಿಜೆಪಿ- 0-2