2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Elections 2023) ಗುರುವಾರ (ನವೆಂಬರ್ 30) ತೆರೆ ಬೀಳಲಿದೆ. ಸದ್ಯದಲ್ಲೇ ಎಕ್ಸಿಟ್ ಪೋಲ್ ಪ್ರಕಟವಾಗಲಿವೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ, ತೆಲಂಗಾಣ ಚುನಾವಣೆ ಮುಗಿದಿದೆ. ಚುನಾವಣೆ ಫಲಿತಾಂಶಕ್ಕೆ ಮತಗಟ್ಟೆ ಸಮೀಕ್ಷಾ ವರದಿಯು ದಿಕ್ಸೂಚಿಯಾಗುವ ಸಾಧ್ಯತೆ ಇರುವ ಕಾರಣ ಐದೂ ರಾಜ್ಯಗಳ ಟ್ರೆಂಡ್ ಕಾತರ ಹೆಚ್ಚಾಗಿದೆ.
ಸಿಎನ್ಎನ್ ಪ್ರಕಾರ- ತೆಲಂಗಾಣದಲ್ಲಿ ಬಿಎಆರ್ಎಸ್ 48, ಕಾಂಗ್ರೆಸ್ 56, ಬಿಜೆಪಿಗೆ ಶೂನ್ಯ ಹಾಗೂ ಇತರ ಪಕ್ಷಗಳಿಗೆ ಸೊನ್ನೆ ಸ್ಥಾನಗಳು ಸಿಗಲಿವೆ.
ಸಿಎನ್ಎನ್ ಸಮೀಕ್ಷೆ ಪ್ರಕಾರ
ರಾಜಸ್ಥಾನದಲ್ಲಿ ಬಿಜೆಪಿಗೆ 111, ಕಾಂಗ್ರೆಸ್ಗೆ 74, ಬಿಎಸ್ಪಿ 0, ಇತರ-14
ಯಾವ ರಾಜ್ಯಗಳಲ್ಲಿ ಎಷ್ಟು ಸೀಟು, ಅಧಿಕಾರ ರಚಿಸಲು ಎಷ್ಟು ಸೀಟು ಗೆಲ್ಲಬೇಕು?
ಮಧ್ಯ ಪ್ರದೇಶ
ಒಟ್ಟು ಸ್ಥಾನ: 230
ಮ್ಯಾಜಿಕ್ ನಂಬರ್: 116
ರಾಜಸ್ಥಾನ
ಒಟ್ಟು ಸ್ಥಾನ: 200
ಮ್ಯಾಜಿಕ್ ನಂಬರ್: 101
ಛತ್ತೀಸ್‌ಗಢ
ಒಟ್ಟು ಕ್ಷೇತ್ರ: 90
ಮ್ಯಾಜಿಕ್ ನಂಬರ್: 46
ತೆಲಂಗಾಣ
ಒಟ್ಟು ಕ್ಷೇತ್ರ: 119
ಮ್ಯಾಜಿಕ್ ನಂಬರ್: 60
ಮಿಜೋರಾಮ್
ಒಟ್ಟು ಕ್ಷೇತ್ರ: 40
ಮ್ಯಾಜಿಕ್ ನಂಬರ್: 21