Site icon Vistara News

Train Derail: ಬಿಹಾರದಲ್ಲಿ ಹಳಿ ತಪ್ಪಿದ ರೈಲು, ಐವರು ಪ್ರಯಾಣಿಕರ ದುರ್ಮರಣ

Express Train derails in bihar and 5 dead

ಬಕ್ಸರ್: ಬಿಹಾರದಲ್ಲಿ (Bihar) ನಾರ್ತ್ ಈಸ್ಟ್ ಎಕ್ಸ್‌ಪ್ರೆಸ್ ರೈಲು (North East Express Train) ಹಳಿತಪ್ಪಿ ಕನಿಷ್ಠ ಐವರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. 9.35ರ ಸುಮಾರಿಗೆ ಬಕ್ಸರ್ ಬಳಿಯ ರಘುನಾಥಪುರ ನಿಲ್ದಾಣದ (Raghunathpur Rail station) ಸಮೀಪ ಈ ಅಪಘಾತ ಸಂಭವಿಸಿದೆ(Train Derail) ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯ ಆನಂದ್ ವಿಹಾರ್ ಟರ್ಮಿನಸ್‌ನಿಂದ ಬರುತ್ತಿದ್ದ ರೈಲು ಅಸ್ಸಾಂನ ಗುವಾಹಟಿ ಬಳಿಯ ಕಾಮಾಖ್ಯಕ್ಕೆ ತೆರಳುತ್ತಿತ್ತು. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪಡೆಗಳ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಪರಿಹಾರ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಬಿಹಾರ ಡಿಸಿಎಂ ಹೇಳಿದ್ದಾರೆ.

ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರು, ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ, ಆರೋಗ್ಯ ಇಲಾಖೆ ಮತ್ತು ಬಕ್ಸರ್ ಮತ್ತು ಬೋಜ್ಪುರ್ ಜಿಲ್ಲಾಧಿಕಾರಿಗಳ ಜತೆ ಮಾತನಾಡಿದ್ದು, ಘಟನಾ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಒಡಿಶಾ ರೈಲು ಅಪಘಾತದ ಬಗ್ಗೆ ತುರ್ತು ಸೇವೆಗಳಿಗೆ ತಕ್ಷಣ ಮಾಹಿತಿ ನೀಡಿದ್ದು, ರಜಾದಲ್ಲಿದ್ದ ಎನ್​ಡಿಆರ್​​ಎಫ್ ಯೋಧ!

ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಅವರು ಕಚೇರಿ ಕೂಡ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ರೈಲು ಹಳಿ ತಪ್ಪಿರುವ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದು ಹೇಳಿದೆ. ಬಕ್ಸರ್ ಜಿಲ್ಲಾಡಳಿತ ಸೇರಿದಂತೆ ಇತರ ಸಂಸ್ಥೆಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ಸಿಎಂ ಕಚೇರಿ ತಿಳಿಸಿದೆ.

ಜೂನ್ ತಿಂಗಳಲ್ಲಿ ಒಡಿಶಾ ರಾಜ್ಯದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 296 ಜನರು ಮೃತಪಟ್ಟು, ಸಾವಿರಾರು ಪ್ರಯಾಣಿಕರು ಗಾಯಗೊಂಡಿದ್ದರು. ಈಗ ಮತ್ತೆ ಅಂಥದ್ದೇ ಅಪಘಾತ ಬಿಹಾರದಲ್ಲಿ ಸಂಭವಿಸಿದೆ. ಸದ್ಯಕ್ಕೆ ಸಾವು ನೋವಿನ ಪ್ರಮಾಣವು ಮಿತಿಯಲ್ಲಿದ್ದು, ಇನ್ನಷ್ಟು ಮಾಹಿತಿ ದೊರೆಯಬೇಕಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version