ಲಕ್ನೋ: ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಮೂರು ವರ್ಷಗಳ ಹಿಂದೆ ಸುಳ್ಳು ಹೇಳಿ ರಜೆ ಪಡೆದು ಮಹಿಳಾ ಪೊಲೀಸ್ ಜತೆಗೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಡಿಎಸ್‌ಪಿಗೆ ಹಿಂಬಡ್ತಿ ನೀಡಲಾಗಿದೆ (Extra Marital Affair). ಕಾನ್‌ಸ್ಟೇಬಲ್ ಆಗಿ ಹಿಂಬಡ್ತಿ ಪಡೆದವನನ್ನು ಕೃಪಾ ಶಂಕರ್ ಕನೌಜಿಯಾ (Kripa Shankar Kannaujiya) ಎಂದು ಗುರುತಿಸಲಾಗಿದೆ.
ಈ ಹಿಂದೆ ಉನ್ನಾವೊದ ಬಿಘಾಪುರ್‌ನಲ್ಲಿ ಸರ್ಕಲ್ ಆಫೀಸರ್ (ಸಿಒ) ಹುದ್ದೆಯನ್ನು ಹೊಂದಿದ್ದ ಕೃಪಾ ಶಂಕರ್ ಕನೌಜಿಯಾನನ್ನು ಈಗ ಗೋರಖ್‌ಪುರದ 26ನೇ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PAC) ಬೆಟಾಲಿಯನ್‌ಗೆ ನಿಯೋಜಿಸಲಾಗಿದೆ.
ಘಟನೆಯ ವಿವರ
ಕೃಪಾ ಶಂಕರ್ ಕನೌಜಿಯಾರಿಗೆ ಶಿಕ್ಷೆ ಲಭಿಸಲು ಕಾರಣವಾಗಿದ್ದ ಘಟನೆ 2021ರಲ್ಲಿ ನಡೆದಿತ್ತು. ಉನ್ನಾವೊದ ಬಿಘಪುರ್ ಠಾಣೆಯಲ್ಲಿ ಕೃಪಾ ಶಂಕರ್ ಕನೌಜಿಯಾ ಮೊದಲು ಸಕರ್ಲ್ ಆಫೀಸರ್ ಆಗಿದ್ದ. ಬಳಿಕ ಆತ ಡಿಎಸ್‌ಪಿ ಆಗಿ ಮುಂಬಡ್ತಿ ಪಡೆದುಕೊಂಡಿದ್ದ. ಮದುವೆಯಾಗಿದ್ದರೂ ಅದೇ ಠಾಣೆಯ ಮಹಿಳಾ ಪೇದೆಯೊಂದಿಗೆ ಆತ್ಮೀಯವಾಗಿದ್ದ.
2021ರ ಜುಲೈಯಲ್ಲಿ ಕೃಪಾ ಶಂಕರ್ ಕೌಟುಂಬಿಕ ಕಾರಣ ಹೇಳಿ ಒಂದು ವಾರ ತುರ್ತು ರಜೆ ಹಾಕಿದ್ದ. ಬಳಿಕ ಮಹಿಳಾ ಪೇದೆ ಜತೆ ಕಾನ್ಪುರಕ್ಕೆ ತೆರಳಿ ಮೊಬೈಲ್ ಸ್ವಿಚ್ ಆಫ್ ಮಾಡಿ ಹೋಟೆಲ್ ಒಂದರಲ್ಲಿ ರೂಮ್ ಪಡೆದುಕೊಂಡಿದ್ದ. ಇತ್ತ ಪತಿಯ ಕಳ್ಳಾಟಸ ಅರಿವಿರದ ಆತನ ಪತ್ನಿ ಗಾಬರಿಗೊಂಡಿದ್ದರು. ಮನೆಗೆ ಬಾರದ ಕಾರಣ ಕೃಪಾ ಶಂಕರ್ ಮೊಬೈಲ್ ಫೋನ್‌ಗೆ ಕರೆ ಮಾಡಿದ್ದರು. ಆದರೆ ಸ್ವಿಚ್ ಆಫ್ ಬರುತ್ತಿದ್ದರಂದ ಪತಿಯ ಠಾಣೆಗೆ ಕರೆ ಮಾಡಿ ವಿಚಾರಿಸಿದ್ದರು. ಬಳಿಕ ಪೊಲೀಸರು ನಾಪತ್ತೆ ದೂರು ದಾಖಲಿಸಿ ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು.
ಕೃಪಾ ಶಂಕರ್ ಅವರ ಮೊಬೈಲ್ ಟ್ರೇಸ್ ಮಾಡಿಕೊಂಡು ಪೊಲೀಸರು ಕಾನ್ಪುರದ ಹೋಟೆಲ್ ತಲುಪಿದ್ದರು. ಅಲ್ಲಿನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ರೂಮ್‌ಗೆ ತೆರಳಿದಾಗ ಕೃಪಾ ಶಂಕರ್ ಮತ್ತು ಮಹಿಳಾ ಪೇದೆ ಅಸಭ್ಯ ರೀತಿಯಲ್ಲಿ ಕಂಡು ಬಂದಿದ್ದರು. ಈ ಘಟನೆಯನ್ನು ವಿವರಿಸಿ ಪೊಲೀಸರು ಎಡಿಜಿಗೆ ವರದಿ ಸಲ್ಲಿಸಿದ್ದರು. ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಸರ್ಕಾರ ಕೃಪಾ ಶಂಕರ್ ಅವರ ಹುದ್ದೆ ಕಸಿದುಕೊಂಡು ಕಾನ್ಸ್‌ಟೇಬಲ್ ಆಗಿ ಹಿಂಪಡ್ತಿ ನೀಡಿದೆ. ಮಾಡಬಾರದ್ದನ್ನು ಮಾಡಿದರೆ ಆಗ ಬಾರದ್ದು ಆಗುತ್ತದೆ ಎನ್ನುವ ಗಾದೆ ಮಾತಿನಂತೆ ಇದೀಗ ಕೃಪಾ ಶಂಕರ್ ಪರಿತಪಿಸುತ್ತಿದ್ದಾನೆ.
ಇದನ್ನೂ ಓದಿ: Love Jihad: ಅಪ್ರಾಪ್ತೆ ಜತೆಗೆ ಲವ್; ಮುಸ್ಲಿಂ ಯುವಕನ ಕೂಡಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಹಿಂದೂ ಕಾರ್ಯಕರ್ತರು
ಒಂದೇ ಶಾಲೆಯ ಶಿಕ್ಷಕ-ಶಿಕ್ಷಕಿ ಲವ್ವಿ ಡವ್ವಿ
ತುಮಕೂರು: ಅವನು ಒಂದು ಶಾಲೆಯ ಶಿಕ್ಷಕ, ಇವಳೂ ಅದೇ ಶಾಲೆಯಲ್ಲಿ ಸಹಶಿಕ್ಷಕಿ. ಮಕ್ಕಳಿಗೆ ಒಳಿತಿನ ಪಾಠ ಮಾಡಬೇಕಾದ ಇವರಿಬ್ಬರು ತಾವಿಬ್ಬರೇ ಕೋಣೆಯಲ್ಲಿ ಕುಳಿತು ಕಾಮದಾಟ ಆಡಲು ಶುರು ಮಾಡಿದ್ದರು. ಆದರೆ ಕದ್ದು ಮುಚ್ಚಿ ನಡೆಯೋ ಈ ವ್ಯವಹಾರಗಳೆಲ್ಲ ಎಷ್ಟು ದಿನಾಂತ ನಡೀತದೆ… ಒಂದು ಒಳ್ಳೆಯ ದಿನ ಶಿಕ್ಷಕನ ಹೆಂಡತಿ ರೆಡ್ ಹ್ಯಾಂಡ್ ಆಗಿ, ಬೆತ್ತಲೆಯಾಗಿಯೇ ಇಬ್ಬರನ್ನು ಹಿಡಿದು ಬಿಟ್ಟಿದ್ದಾರೆ! ಈ ಘಟನೆ ಇತ್ತೀಚೆಗೆ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ದಸೂಡಿ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಇದೀಗ ಅದೇ ಮಾದರಿಯ ಘಟನೆ ಬೆಳಕಿಗೆ ಬಂದಂತಾಗಿದೆ.