Site icon Vistara News

Tirupati Temple: ಮಾರ್ಚ್ 1ರಿಂದ ತಿರುಪತಿ ದೇಗುಲದಲ್ಲಿ ಫೇಸ್‌ ರಿಕಗ್ನೇಷನ್ ವ್ಯವಸ್ಥೆ

Face Recognition System will commence from March 1 at Tirupati temple

ತಿರುಪತಿ, ಆಂಧ್ರಪ್ರದೇಶ: ಜಗತ್ತಿನ ಅತ್ಯಂತ ಶ್ರೀಮಂತ ದೇವರು ಎಂದು ಕರೆಯಿಸಿಕೊಳ್ಳುವ ತಿರುಪತಿ ತಿರುಮಲ ವೆಂಕಟೇಶ್ವರ ದೇಗುಲದಲ್ಲಿ (Tirupati Temple) ಮಾರ್ಚ್ 1ರಿಂದ ಫೇಸ್ ರಿಕಗ್ನೇಷನ್(Face Recognition) ವ್ಯವಸ್ಥೆಯು ಜಾರಿಗೆ ಬರಲಿದೆ ಎಂದು ತಿರುಪತಿ ತಿರುಮಲ ದೇವಸ್ಥಾನಮ್ ಟ್ರಸ್ಟ್(TTD) ತಿಳಿಸಿದೆ. ದೇವಸ್ಥಾನದ ಅಧಿಕೃತ ಜಾಲತಾಣದಲ್ಲಿ ಈ ಬಗ್ಗೆ ಟ್ರಸ್ಟ್ ಮಾಹಿತಿಯನ್ನು ಹಂಚಿಕೊಂಡಿದೆ.

ದೇವರ ದರ್ಶನ ಮತ್ತು ವಸತಿ ಕಲ್ಪಿಸುವ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ಹೊಸ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ದೇಗುಲಕ್ಕೆ ಭೇಟಿ ನೀಡುವ ಸಾವಿರಾರು ಯಾತ್ರಾರ್ಥಿಗಳಿಗೆ ತಂತ್ರಜ್ಞಾನದ ಮೂಲಕ ಹೆಚ್ಚು ಪರಿಣಾಮಕಾರಿ ಸೇವೆಗಳನ್ನು ಒದಗಿಸುವ ಗುರಿಯನ್ನು ದೇವಸ್ಥಾನವು ಹೊಂದಿದೆ.

ಫೇಸ್‌ ರಿಕಗ್ನೇಷನ್ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಯಾಗಿ ತರಲಾಗುತ್ತಿದೆ. ಆರಂಭದಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ ಎಂದು ದೇವಸ್ಥಾನವು ತಿಳಿಸಿದೆ. ಟಿಟಿಡಿ ಮಾರ್ಚ್ 1 ರಿಂದ ವೈಕುಂಠಂ 2 ಮತ್ತು ಎಎಂಎಸ್‌ ವ್ಯವಸ್ಥೆಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಮುಖ ಗುರುತಿಸುವಿಕೆ ತಂತ್ರಜ್ಞಾನ(ಫೇಸ್‌ ರಿಕಗ್ನೇಷನ್)ವನ್ನು ಪರಿಚಯಿಸಲು ಸಜ್ಜಾಗಿದೆ. ಟೋಕನ್‌ಲೆಸ್ ದರ್ಶನ ಮತ್ತು ವಸತಿ ಹಂಚಿಕೆ ವ್ಯವಸ್ಥೆಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಯಾತ್ರಾರ್ಥಿಗಳಿಗೆ ಹೆಚ್ಚು ಪರಿಣಾಮಕಾರಿ ಸೇವೆಗಳನ್ನು ಒದಗಿಸಲಾಗುವುದು ಜಾಲತಾಣದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: TTD Mobile App: ಜಿಯೋ ಸಹಕಾರದಿಂದ ಹೊಸ ಆ್ಯಪ್​ ಬಿಡುಗಡೆ ಮಾಡಿದ ತಿರುಮಲ ತಿರುಪತಿ ದೇಗುಲ; ಭಕ್ತರಿಗೇನು ಅನುಕೂಲ?

ಸರ್ವ ದರ್ಶನ ಸಂಕೀರ್ಣ ಮತ್ತು ಠೇವಣಿ ಮರುಪಾವತಿ ಕೌಂಟರ್‌ಗಳಲ್ಲಿ ಭಕ್ತರು ಹೆಚ್ಚಿನ ಟೋಕನ್‌ಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ತಿರುಮಲವು ಸುಮಾರು 7,000 ವಸತಿ ಸೌಲಭ್ಯಗಳನ್ನು ಹೊಂದಿದೆ. ಅದರಲ್ಲಿ 1,000 ಮೀಸಲಾತಿಯ ಅಡಿಯಲ್ಲಿ ಬರುತ್ತದೆ ಮತ್ತು ಉಳಿದವುಗಳನ್ನು ನಿಯಮಿತ ಸಂದರ್ಶಕರಿಗೆ ನೀಡಲಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version