Site icon Vistara News

INDIA Bloc: ಚುನಾವಣೆ ವೇಳೆ ತಟಸ್ಥ ನೀತಿ ಅನುಸರಿಸುವಂತೆ ಫೇಸ್‌ಬುಕ್, ಗೂಗಲ್‌ಗೆ ಪ್ರತಿಪಕ್ಷಗಳಿಂದ ಪತ್ರ!

Facebook, Google should follow neutrality during elections-INDIA Blac

ನವದೆಹಲಿ: 2024ರ ಚುನಾವಣೆ(Lok Sabha Election 2024) ಹಿನ್ನೆಲೆಯಲ್ಲಿ ತಟಸ್ಥ ನೀತಿಯನ್ನು (Neutrality) ಅನುರಿಸುವಂತೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು (INDIA Bloc) ಸಾಮಾಜಿಕ ಜಾಲತಾಣದ ದೈತ್ಯ ಕಂಪನಿಗಳಾದ ಫೇಸ್‌ಬುಕ್ (Facebook) ಮತ್ತು ಗೂಗಲ್‌ಗೆ (Google) ಪತ್ರ ಬರೆದು ಆಗ್ರಹಿಸಿದೆ. ಫೇಸ್‌ಬುಕ್ ಒಡೆತನದ ಮೆಟಾ ಕಂಪನಿಯ ಸಿಇಒ ಮಾರ್ಕ್‌ ಜುಕರ್‌ಬರ್ಗ್ ಹಾಗೂ ಗೂಗಲ್‌ ಸಿಇಒ ಸುಂದರ್ ಪಿಚ್ಛೈ ಅವರಿಗೆ ಪತ್ರ ಬರೆದಿರುವ ಇಂಡಿಯಾ ಕೂಟವು, ದೇಶದಲ್ಲಿ ಕೋಮು ದ್ವೇಷ ಹರಡುವಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರ ಹಾಗೂ ಮುಂಬರುವ ಚುನಾವಣೆಯಲ್ಲಿ ತಟಸ್ಥತೆಯನ್ನು ಕಾಯ್ದುಕೊಳ್ಳುವ ಬಗ್ಗೆ ವಿವರಿಸಿವೆ.

ಫೇಸ್‌ಬುಕ್, ವಾಟ್ಸಾಪ್ ಮತ್ತು ಯುಟ್ಯೂಬ್‌ಗಳು ಆಡಳಿತಾರೂಢ ಬಿಜೆಪಿ ಮತ್ತು ನೇರಂದ್ರ ಮೋದಿ ಅವರ ಬಗ್ಗೆ ಪಕ್ಷಪಾತ ಧೋರಣೆಯನ್ನು ತಾಳಿವೆ ಎಂಬ ಸಂಗತಿ ಕುರಿತು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು ಈ ಪತ್ರವನ್ನು ಬರೆದಿದೆ.

ಎಕ್ಸ್‌ ವೇದಿಕೆಯಲ್ಲಿ ಪತ್ರವನ್ನು ಹಂಚಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, “ಸಾಮಾಜಿಕ ಸೌಹಾರ್ದ ಹಾಳು ಮಾಡುವ ಮತ್ತು ಕೋಮು ದ್ವೇಷವನ್ನು ಪ್ರಚೋದನೆಯ ವಿಷಯದಲ್ಲಿ ಮೆಟಾ ಅಪರಾಧಿ ಸ್ಥಾನದಲ್ಲಿದೆ ಎಂಬರ್ಥದಲ್ಲಿದೆ ವಾಷಿಂಗ್ಟನ್ ಪೋಸ್ಟ್‌ನ ಸಮಗ್ರ ತನಿಖೆಗಳನ್ನು ಉಲ್ಲೇಖಿಸಿ ಫೇಸ್‌ಬುಕ್‌ನ ಶ್ರೀ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಇಂಡಿಯಾ ಕೂಟ ಬರೆದ ಪತ್ರ ಎಂದು ಬರೆದುಕೊಂಡಿದ್ದಾರೆ.

ಇಂಡಿಯಾ ಕೂಟದ ಪಕ್ಷಗಳು ವಾಷಿಂಗ್ಟನ್ ಪೋಸ್ಟ್‌ನ ಸಮಗ್ರ ತನಿಖೆಯ ಕುರಿತು ಗೂಗಲ್‌ನ ಸುಂದರ್ ಪಿಚೈ ಅವರಿಗೆ ಪತ್ರ ಬರೆದಿವೆ. ಆಲ್ಫಾಬೆಟ್ ಮತ್ತು ನಿರ್ದಿಷ್ಟವಾಗಿ ಯೂಟ್ಯೂಬ್ ಭಾರತದಲ್ಲಿ ಸಾಮಾಜಿಕ ಸೌಹಾರ್ತೆ ಹಾಳು ಮಾಡುವ ಮತ್ತು ಕೋಮು ದ್ವೇಷವನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ ಪತ್ರ ಬರೆದು ತಿಳಿಸಲಾಗಿದೆ ಎಂದು ಮಲ್ಲಿಕಾರ್ಜುನ ಅವರು ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Bhupesh Baghel: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಕ್ಯಾಂಡಿ ಕ್ರಶ್‌ ಆಡಿದ ಭೂಪೇಶ್‌ ಬಘೇಲ್‌!

ಇಂಡಿಯಾ ಕೂಟವು 23 ಪಕ್ಷಗಳ ಕೂಟವಾಗಿದ್ದು, ಇದು ಸಂಯೋಜಿತ ವಿರೋಧ ಒಕ್ಕೂಟವನ್ನು ಪ್ರತಿನಿಧಿಸುತ್ತದೆ ಮತ್ತು 11 ರಾಜ್ಯಗಳಲ್ಲಿ ಆಡಳಿತ ಮೈತ್ರಿಕೂಟವಾಗಿದೆ. ಅಲ್ಲದೇ ಸುಮಾರು ಅರ್ಧದಷ್ಟು ಭಾರತೀಯ ಮತದಾರರನ್ನು ಪ್ರತಿನಿಧಿಸುತ್ತದೆ ಎಂದು ಇಂಡಿಯಾ ಕೂಟವು ಮಾರ್ಕ್‌ ಜುಕರ್‌ಬರ್ಗ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದೆ. ಭಾರತದಲ್ಲಿ ಮೆಟಾ ಕಾರ್ಯಾಚರಣೆಯು ನಿಷ್ಪಕ್ಷಪಾತವಾಗಿರಬೇಕು ಎಂದು ಒತ್ತಾಯಿಸಲಾಗಿದೆ.

ಗೂಗಲ್‌ನ ಸುಂದರ್ ಪಿಚೈ ಅವರಿಗೆ ಬರೆದ ಪತ್ರದಲ್ಲಿ, “ಭಾರತೀಯ ಮುಸ್ಲಿಮರ ಮೇಲಿನ ದಾಳಿಗಳನ್ನು ಲೈವ್-ಸ್ಟ್ರೀಮ್ ಮಾಡುವರಿಗೆ ಯುಟ್ಯೂಬ್ ಪ್ರಶಸ್ತಿಯನ್ನು ನೀಡಿದೆ” ಎಂಬ ಶೀರ್ಷಿಕೆಯ ವಾಷಿಂಗ್ಟನ್ ಪೋಸ್ಟ್ ವರದಿ ಉಲ್ಲೇಖಿಸಿರುವ ಇಂಡಿಯಾ ಕೂಟವು, ಕೋಮು ದ್ವೇಷವನ್ನು ಪ್ರಚಾರ ಮಾಡುವುದರಲ್ಲಿ ಮತ್ತು ಭಾರತೀಯ ಸಮಾಜವನ್ನು ವಿಭಜಿಸುವಲ್ಲಿ ಯುಟ್ಯೂಬ್‌ ಪಾತ್ರದ ಬಗ್ಗೆ ವಿವರಿಸಲಾಗಿದೆ. ಅಲ್ಲದೇ, ಗೂಗಲ್ ಮತ್ತು ಅದರ ಇತರ ವೇದಿಕೆಗಳು ಭಾರತದಲ್ಲಿ ನಿಷ್ಪಕ್ಷವಾಗಿರುವಂತೆ ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version