ನವದೆಹಲಿ: ಭಾರತೀಯರ ನೆಚ್ಚಿನ ಸಾಮಾಜಿಕ ಜಾಲತಾಣಗಳಾದ (Social Media) ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸರ್ವರ್ ಡೌನ್ (Facebook Server) ಆಗಿದೆ. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ (Instagram) ಖಾತೆಗಳು ಲಾಗ್‌ಔಟ್ ಆಗಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಮೊಬೈಲ್ ಹಾಗೂ ಕಂಪ್ಯೂಟರ್‌ನಲ್ಲಿ ಎರಡೂ ಖಾತೆಗಳು ಲಾಗ್‌ಔಟ್ ಆಗಿದ್ದು, ಮತ್ತೆ ಲಾಗ್‌ಇನ್ ಆಗುತ್ತಿಲ್ಲ. ಇದರಿಂದಾಗಿ ಸಾವಿರಾರು ಜನ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಫೇಸ್‌ಬುಕ್‌ಗೆ ಏನಾಗಿದೆ? ಯಾಕೆ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗಳು ಏಕಾಏಕಿ ಲಾಗ್‌ಔಟ್ ಆಗಿವೆ? ಯಾಕೆ ಮತ್ತೆ ಲಾಗ್‌ಇನ್ ಆಗುತ್ತಿಲ್ಲ ಎಂಬ ಪ್ರಶ್ನೆಗಳನ್ನು ಎಕ್ಸ್‌ನಲ್ಲಿ ಜನ ಕೇಳುತ್ತಿದ್ದಾರೆ. ಇನ್ನು, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸರ್ವರ್ ಡೌನ್ ಆಗಿರುವ ಕುರಿತು ಬಗೆಬಗೆಯ ಟ್ರೋಲ್‌ಗಳು, ವಿಡಿಯೊಗಳನ್ನು ಕೂಡ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.
Anyone else's #Facebook logged out? Can't log back in, keeps saying session expired or unexpected error?🙄
— 💙Maham Khattak 🇵🇰 (@Maham_Khattak10) March 5, 2024
#facebookdown pic.twitter.com/PqZUTpr2yW
ಸರ್ವರ್ ಡೌನ್ ಆಗಿರುವ ಅಥವಾ ನಿಜವಾಗಿ ಯಾವ ಸಮಸ್ಯೆ ಉಂಟಾಗಿದೆ ಎಂಬುದರ ಕುರಿತು ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಂ ಇದುವರೆಗೆ ಯಾವುದೇ ಅಪ್‌ಡೇಟ್ ನೀಡಿಲ್ಲ. ಇನ್ನು, ಶೀಘ್ರವೇ ಸಮಸ್ಯೆ ಬಗೆಹರಿಸಿ ಎಂಬ ಒತ್ತಾಯಗಳು ಕೂಡ ಜನರಿಂದ ಕೇಳಿಬರುತ್ತಿವೆ.
Anyone else's #Facebook logged out? Can't log back in, keeps saying session expired or unexpected error? #facebookdown pic.twitter.com/oLZRSSY4qw
— Birty (@birty156) March 5, 2024
ಇದನ್ನೂ ಓದಿ: Instagram Down : ಇನ್ಸ್ಟಾಗ್ರಾಮ್ ಸರ್ವರ್ ಡೌನ್, ಬಳಕೆದಾರರ ಬೇಸರ
ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ತಾಣಗಳನ್ನು ಭಾರತ ಸೇರಿ ಜಗತ್ತಿನಾದ್ಯಂತ ನೂರಾರು ಕೋಟಿ ಜನ ಬಳಸುತ್ತಾರೆ. ಇನ್ನು, ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸರ್ವರ್ ಡೌನ್ ಆಗಿದೆ ಎಂದು ತಿಳಿದುಬಂದಿದೆ. ದೇಶ-ವಿದೇಶಗಳ ಜನರು ಎಕ್ಸ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ