Site icon Vistara News

Fact Check: ಕೇರಳ ಯೋಧನ ಮೇಲೆ ಪಿಎಫ್ಐ ದಾಳಿ! ಪ್ರಸಿದ್ಧಿಗಾಗಿ ‘ಫೇಕ್’ ಅಟ್ಯಾಕ್ ಕತೆ ಕಟ್ಟಿದ್ನಾ ಸೈನಿಕ?

Fact Check, PFI Attack on Soldier is Fake Says Kerala Police

ನವದೆಹಲಿ: ಕೇರಳದಲ್ಲಿ ನಿಷೇಧಿತ ಪಿಎಫ್ಐ ಭಾರತೀಯ ಸೇನಾ ಯೋಧನ ಮೇಲೆ ದಾಳಿ (PFI Attack) ನಡೆಸಿದ ಸುದ್ದಿ ಎರಡ್ಮೂರು ದಿನಗಳಿಂದ ಭಾರೀ ವೈರಲ್ ಆಗಿತ್ತು. ಆದರೆ, ಅದು ಫೇಕ್ ಘಟನೆ ಎಂದು ಸಾಬೀತಾಗಿದ್ದು, ಕೇರಳ ಪೊಲೀಸರು (Kerala Police) ‘ಸಂತ್ರಸ್ತ’ ಯೋಧ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ‘ಸಂತ್ರಸ್ತ’ ಯೋಧ (Indian Army Soldier) ತನ್ನ ಮನೆಯ ಸಮೀಪ ಆರು ಮಂದಿ ಹಲ್ಲೆ ನಡೆಸಿದ್ದಾರೆ ಮತ್ತು ತನ್ನ ಬೆನ್ನ ಮೇಲೆ ‘ಪಿಎಫ್‌ಐ’ ಎಂದು ಬರೆಯಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಈ ಕುರಿತು ವಿಚಾರಣ ನಡೆದಾಗ, ದಿಢೀರ್ ಖ್ಯಾತಿ ಗಳಿಸಲು ಯೋಧನೇ ಈ ರೀತಿಯ ಫೇಕ್ ಪಿಎಫ್ಐ ದಾಳಿ ಘಟನೆ ರೂಪಿಸಿದ್ದು ಬಹಿರಂಗವಾಗಿದೆ(Fact Check).

ಕೇರಳದ ಕೊಲ್ಲಮ್ ಜಿಲ್ಲೆ ಹಿರಿಯ ಪೊಲೀಸ್ ಅಧಿಕಾರಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಅರೆಸ್ಟ್ ಮಾಡಿಲ್ಲ. ಆದರೆ, ಯೋಧ ಶೈನ್ ಕುಮಾರ್ ಮತ್ತು ಆತನ ಗೆಳೆಯನನ್ನು ವಶಕ್ಕೆ ಪಡೆದುಕೊಂಡು ಹೇಳಿಕೆಯನ್ನು ದಾಖಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅವರ ಹೇಳಿಕೆಗಳನ್ನು, ವಿಷಯಗಳನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ದಿಢೀರ್ ಪ್ರಸಿದ್ಧಿಯನ್ನು ಪಡೆಯುವುದಕ್ಕಾಗಿ ಶೈನ್ ಕುಮಾರ್ ಪ್ರಸಿದ್ಧರಾಗಲು ಬಯಸಿದ್ದರು. ಅದಕ್ಕಾಗಿಯೇ ಈ ಪಿಎಫ್ಐ ದಾಳಿಯ ಫೇಕ್ ಕೃತ್ಯವನ್ನು ಮಾಡಿದ್ದರು ಎಂದು ಯೋಧನ ಸ್ನೇಹಿತ ಹೇಳಿದ್ದಾನೆ. ಆತನ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ.

ಯೋಧ ಶೈನ್ ಕುಮಾರ್ ಅವರು ಕಡಕ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿದಾಗ ಅವರ ದೂರು ಸುಳ್ಳು ಎಂದು ತಿಳಿದುಬಂದಿದೆ. ಅದರ ಆಧಾರದ ಮೇಲೆ ಈಗ ಯೋಧ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಘಟನೆಯಿಂದ ದೇಶದ ಗಮನ ಸೆಳೆಯಲು ತನಗೆ ಬೇಕಾದ ಪೋಸ್ಟಿಂಗ್ ಪಡೆಯಲು ಶೈನ್ ಕುಮಾರ್ ಮುಂದಾಗಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಕೊಲ್ಲಮ್ ಗ್ರಾಮಾಂತರದ ಹೆಚ್ಚುವರಿ ಎಸ್‌ಪಿ ಆರ್ ಪ್ರತಾಪನ್ ನಾಯರ್ ಹೇಳಿದ್ದಾರೆ.

ಈ ಕೃತ್ಯಕ್ಕೆ ಬಳಸಲಾದ ಹಸಿರು ಪೇಂಟ್, ಬ್ರಷ್ ಮತ್ತು ಟೇಪ್ ಅನ್ನು ಶೈನ್ ಕುಮಾರ್ ಸ್ನೇಹಿತನ ಮನೆಯಿಂದ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಪಿಎಎಫ್ ದಾಳಿ ನಡದೆ ರೀತಿ ಹೇಗೆ?

ಶೈನ್ ಕುಮಾರ್ ಅವರು ಹೇಗೆ ಪಿಎಫ್ಐ ನಕಲಿ ದಾಳಿಯ ಕೃತ್ಯವನ್ನು ಜಾರಿಗೆ ತಂದರು ಕತೆಯನ್ನು ಆತನ ಸ್ನೇಹಿತ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. “ನಾನು ಕುಡಿದಿದ್ದೆ, ಆದ್ದರಿಂದ ನಾನು ಆರಂಭದಲ್ಲಿ ಡಿಎಫ್‌ಐ ಅನ್ನು ಬರೆದ. ಆದರೆ ಅವನು (ಕುಮಾರ್) ಪಿಎಫ್‌ಐ ಬರೆಯಲು ಹೇಳಿದ. ಹಾಗಾಗಿ ನಾನು ಅದನ್ನು ಪಿಎಫ್‌ಐ ಮಾಡಿದೆ. ನಂತರ ಅವನು ನನ್ನನ್ನು ಹೊಡೆಯಲು ಕೇಳಿದ. ಆದರೆ ನಾನು ಕುಡಿದಿದ್ದರಿಂದ ನನಗೆ ಸಾಧ್ಯವಿಲ್ಲ ಎಂದೆ. ಆಗ ಅವನು ನೆಲದ ಮೇಲೆ ಎಳೆದುಕೊಂಡು ಹೋಗಲು ಹೇಳಿದನು. ಆದರೆ ನನ್ನ ಅಮಲಿನಲ್ಲಿದ್ದೆ ಅದು ನನಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವನು ತನ್ನ ಬಾಯಿ ಮತ್ತು ಕೈಗಳನ್ನು ಟೇಪ್‌ನಿಂದ ಬಂಧಿಸಿ ಹೊಗುವಂತೆ ತಿಳಿಸಿದ. ನಾನು ಹಾಗೆ ಮಾಡಿದೆ ಎಂದು ಆರೋಪಿಯ ಸ್ನೇಹಿತ ಹೇಳಿದ್ದಾನೆ.

ಈ ಸುದ್ದಿಯನ್ನೂ ಓದಿ: Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್‌ಐ’ ಎಂದು ಬರೆದ ದುರುಳರು!

ಭಾನುವಾರ ರಾತ್ರಿ ತನ್ನ ಮನೆಯ ಬಳಿ ಆರು ಜನರಿಂದ ಥಳಿಸಿದರು ಮತ್ತು ತನ್ನ ಬೆನ್ನಿನ ಮೇಲೆ ಹಸಿರು ಬಣ್ಣದಿಂದ ‘ಪಿಎಫ್‌ಐ’ ಎಂದು ಬರೆದಿದ್ದಾರೆ ಎಂದು ಸೈನಿಕನು ತನ್ನ ದೂರಿನಲ್ಲಿ ತಿಳಿಸಿದ್ದ. ಕೇರಳದ ಕಡಕ್ಕಲ್‌ನಲ್ಲಿರುವ ಅವರ ಮನೆಯ ಸಮೀಪವೇ ಈ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದ. ಈ ವಿಷಯವು ಭಾರೀ ಗಮನ ಸೆಳೆದಿತ್ತು. ಆದರೆ, ಕೇರಳ ಪೊಲೀಸರು ವಿಚಾರಣೆ ನಡೆಸಿದಾಗ ಇಡೀ ಘಟನೆ ನಕಲಿ ಎಂದು ಗೊತ್ತಾಗಿದ್ದು, ಕೇವಲ ಪ್ರಚಾರಕ್ಕಾಗಿ ಭಾರತೀಯ ಸೇನೆಯ ಯೋಧ ಫೇಕ್ ಪಿಎಫ್ಐ ದಾಳಿಯನ್ನು ರೂಪಿಸಿದ್ದ ಎಂದು ಗೊತ್ತಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version