Site icon Vistara News

Pakistan Flag: ಮನೆ ಮೇಲೆ ಪಾಕ್‌ ಧ್ವಜ ಹಾರಿಸಿದ ಇಬ್ಬರು ಮುಸ್ಲಿಮರು; ತಂದೆ-ಮಗನ ಬಂಧನ

Pakistan Flag In Uttar Pradesh

Father And Son Arrested for hoisting Pakistan flag at their house in Uttar Pradesh

ಲಖನೌ: ಜಗತ್ತಿನ ಯಾವುದೇ ಮೂಲೆಯಲ್ಲಿ ಭಾರತದ ತಿರಂಗಾವನ್ನು (Indian Tricolour) ನೋಡಿದರೆ ಹೆಮ್ಮೆ ಎನಿಸುತ್ತದೆ. ತಿರಂಗಾ ಹಾರುತ್ತಿದ್ದರೆ ಮನಸ್ಸು ತುಂಬಿ ಬರುತ್ತದೆ. ಭಾರತದಲ್ಲಿ ಹುಟ್ಟಿದ ನಾವೇ ಧನ್ಯರು ಎನಿಸುತ್ತದೆ. ಆದರೆ, ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಇಬ್ಬರು ಮುಸ್ಲಿಮರು ಮನೆಯ ಮೇಲೆ ಪಾಕಿಸ್ತಾನ ಧ್ವಜವನ್ನು (Pakistan Flag) ಹಾರಿಸುವ ಮೂಲಕ ಉದ್ಧಟತನ ಮೆರೆದಿದ್ದಾರೆ.

ಮೊರಾದಾಬಾದ್‌ ಜಿಲ್ಲೆ ಬುಧನ್‌ಪುರ್‌ ಅಲಿಗಂಜ್‌ ಗ್ರಾಮದಲ್ಲಿ ರಯೀಸ್‌ ಹಾಗೂ ಆತನ ಪುತ್ರ ಸಲ್ಮಾನ್‌ ಎಂಬುವವರು ಮನೆಯ ಮೇಲೆ ಪಾಕ್‌ ಧ್ವಜ ಹಾರಿಸಿದ್ದಾರೆ. ಈ ವಿಡಿಯೊ ವೈರಲ್‌ ಆಗಿ, ಜನರಿಂದ ಆಕ್ರೋಶ ವ್ಯಕ್ತವಾಗುತ್ತಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪಾಕಿಸ್ತಾನದ ಧ್ವಜ ಹಾರಿಸಿದ ವಿಡಿಯೊವನ್ನು ಪರಿಶೀಲಿಸಿದ ಪೊಲೀಸರು, ತಂದೆ ಹಾಗೂ ಮಗನ ವಿರುದ್ಧ ದೇಶದ್ರೋಹದ ಕಾನೂನಿನ ಅಡಿಯಲ್ಲಿ ಕೇಸ್‌ ದಾಖಲಿಸಿದ್ದಾರೆ.

ಇಬ್ಬರೂ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಹಿಂತೆ (IPC) ಸೆಕ್ಷನ್‌ 153 ಎ ಹಾಗೂ 153 ಬಿ ಅಡಿಯಲ್ಲಿ ದೇಶದ್ರೋಹದ ಕೇಸ್‌ ದಾಖಲಿಸಿದ್ದಾರೆ. ಮನೆಯ ಮೇಲೆ ಧ್ವಜ ಹಾರಿಸಲು ಕಾರಣ ಏನು ಎಂಬುದನ್ನು ತಿಳಿಯಲು ಪೊಲೀಸರು ಇಬ್ಬರನ್ನೂ ವಿಚಾರಿಸುತ್ತಿದ್ದಾರೆ. ಇದಾದ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Tiranga On Burj Khalifa: ಬುರ್ಜ್‌ ಖಲೀಫಾ ಮೇಲೆ ಕಂಗೊಳಿಸಿದ ತಿರಂಗಾ, ತನ್ನ ಧ್ವಜ ಇಲ್ಲದ್ದಕ್ಕೆ ಪಾಕ್‌ಗೆ ಭಾರಿ ಮುಖಭಂಗ?

ರಯೀಸ್‌ ಟೆಕ್ಸ್‌ಟೈಲ್‌ ಉದ್ಯಮಿಯಾಗಿದ್ದು, ಏಕೆ ಹೀಗೆ ಮಾಡಿದರು ಎಂಬುದರ ಕುರಿತು ಸ್ಥಳೀಯರು ಕೂಡ ಮಾಹಿತಿ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಲೇ ಸ್ಥಳಕ್ಕೆ ತೆರಳಿದ ಪೊಲೀಸರು ಮೊದಲು ಪಾಕ್‌ ಧ್ವಜವನ್ನು ಕೆಳಗಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಮನೆಯ ಮೇಲೆ ಪಾಕ್‌ ಧ್ವಜ ಹಾರಿಸಿದ ತಂದೆ-ಮಗನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version