ಕಾನ್ಪುರ್: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur City) ಸಾಕು ಬೆಕ್ಕು (Pet Cat) ಕಚ್ಚಿದ ಕಾರಣಕ್ಕೆ (Cat Bite) ತಂದೆ ಮತ್ತು ಮಗ ಇಬ್ಬರು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ(Father and Son). ಮೃತರಿಗೆ ಕಚ್ಚಿದ ಬೆಕ್ಕಿಗೆ, ಬೀದಿ ನಾಯಿಯೊಂದು ಕಚ್ಚಿತ್ತು. ಅದೇ ಬೆಕ್ಕು ತಂದೆ ಮತ್ತು ಮಗ ಇಬ್ಬರಿಗೂ ಕಚ್ಚಿದ್ದರಿಂದ ಅವರಿಗೆ ಮಾರಣಾಂತಿಕ ರೇಬೀಸ್ ಸೋಂಕು (rabies virus) ತಗುಲಿ, ಅಂತಿಮವಾಗಿ ಮೃತಪಟ್ಟರು. ಇವರಿಬ್ಬರೂ ಒಂದು ವಾರದ ಅಂತರದಲ್ಲಿ ಸಾವನ್ನಪ್ಪಿದ್ದಾರೆ.
ಕಾನ್ಪುರ ದೇಹತ್‌ನ ಅಕ್ಬರ್‌ಪುರ ನಗರದಲ್ಲಿ ಈ ಘಟನೆ ನಡೆದಿದ್ದು, ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಬೆಕ್ಕನ್ನು ಸಾಕಿದ್ದರು. ಕುಟುಂಬದ ಸದಸ್ಯರೆಲ್ಲರೂ ಬೆಕ್ಕಿನೊಂದಿಗೆ ಆಟ ಆಡುತ್ತಿದ್ದರು. ಈ ಬೆಕ್ಕಿಗೆ ಬೀದಿನಾಯಿ ಕಚ್ಚಿತು ಮತ್ತು ಕೆಲವೇ ದಿನಗಳಲ್ಲಿ ರೇಬೀಸ್‌ನ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಬಳಿಕ ಆಟವಾಡುತ್ತಿದ್ದ ವೇಳೆ ಕುಟುಂಬದ ಮಗನಿಗೆ ಬೆಕ್ಕು ಗೀಚಿದೆ. ಕ್ರಮೇಣ ಅವನ ಸ್ಥಿತಿ ಹದಗೆಡಲಾರಂಭಿಸಿತು. ಬಳಿಕ ಆತನಲ್ಲಿ ಬೆಕ್ಕಿನ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಕೆಲವು ದಿನಗಳ ನಂತರ, ಆತ ಮೃತಪಟ್ಟ. ಬಳಿಕ, ಮೃತ ಯುವಕನ ತಂದೆಯಲ್ಲೂ ಅದೇ ಲಕ್ಷಣಗಳು ಕಾಣಿಸಕೊಳ್ಳಲಾರಂಭಿಸಿದವು. ಮಗ ಸತ್ತ ಒಂದು ವಾರದಲ್ಲೇ ರೇಬೀಸ್ ಕಾಯಿಲೆಗೆ ತಂದೆ ಕೂಡ ಮೃತಪಟ್ಟಿದ್ದಾರೆ.
ಬೆಕ್ಕಿನಿಂದ ರೇಬೀಸ್ ತಗುಲಿ ತಂದೆ-ಮಗ ಇಬ್ಬರು ಸಾಯಿತ್ತಿದ್ದಂತೆ ಆ ಪ್ರದೇಶದಲ್ಲಿ ಭಾರೀ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕೆ ಬೆಕ್ಕು ಸಾಕಿದ್ದ ಕುಟುಂಬದ ಸದಸ್ಯರನ್ನು ಪರೀಕ್ಷೆಗಾಗಿ ಕಾನ್ಪುರ್‌ಗೆ ಕಳುಹಿಸಲಾಗಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಆ ಬೆಕ್ಕು ಪ್ರದೇಶದ ಇನ್ನಾರಿಗೋ ಕಚ್ಚಿರುವ ಇಲ್ಲವೇ ಗೀಚಿರುವ ಸಾಧ್ಯತೆಯನ್ನು ಊಹಿಸಿಕೊಂಡೇ ಜನರು ಭಯಭೀತರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಾಕು ನಾಯಿ ಮತ್ತು ಸಾಕು ಬೆಕ್ಕು ಹೊಂದಿರುವ ಕುಟುಂಬಗಳಲ್ಲಿ ಹೆಚ್ಚಿನ ಆತಂಕ ಶುರುವಾಗಿದೆ.
ಸಾಕು ಪ್ರಾಣಿಗಳಿಗೆ ಆ್ಯಂಟಿ ರೇಬೀಸ್ ಇಂಜಕ್ಷನ್ ನೀಡಬೇಕು ಎಂದು ಪಶು ವೈದ್ಯರು ತಿಳಿಸಿದ್ದಾರೆ. ಯಾವುದೇ ಬೀದಿ ಪ್ರಾಣಿ ಕಚ್ಚಿದರೆ, ದಾಳಿ ಮಾಡಿದರೆ ಮೊದಲಿಗೆ ಗಾಯವನ್ನು ಸ್ವಚ್ಛವಾಗಿ ತೊಳೆಯಬೇಕು. ವೈದ್ಯರನ್ನು ಸಂಪರ್ಕಿಸಿದ ನಂತರ ಚಿಕಿತ್ಸೆಯನ್ನು ಪಡೆಯಬೇಕು. ಏಕೆಂದರೆ ಕೆಲವೊಮ್ಮೆ ರೇಬೀಸ್‌ನ ಲಕ್ಷಣಗಳು ವರ್ಷಗಳ ನಂತರವೂ ಕಾಣಿಸಿಕೊಳ್ಳಬಹುದು. ನಿರ್ಲಕ್ಷ್ಯ ವಹಿಸಿದರೆ ವ್ಯಕ್ತಿಯು ಸಾಯಬಹುದು. ಅಂತಹ ಪರಿಸ್ಥಿತಿಯಲ್ಲಿ, ಚಿಕಿತ್ಸೆ ಮತ್ತು ಜಾಗೃತಿ ಮಾತ್ರ ರಕ್ಷಣೆ ಮಾಡಲು ಸಾಧ್ಯ ಎಂದು ತಜ್ಞರು ಹೇಳುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Actor Darshan : ವೈದ್ಯೆಗೆ ನಾಯಿ ಕಚ್ಚಿದ ಪ್ರಕರಣ; ವಿಚಾರಣೆಗೆ ನಟ ದರ್ಶನ್ ಹಾಜರ್