ಘಾಜಿಯಾಬಾದ್: ಮಹಿಳೆಯರ ಬಟ್ಟೆ ಬದಲಾಯಿಸುವ, ಚಾವಣಿಯಿಲ್ಲದ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ (CCTV camera) ಅಳವಡಿಸಿದ ಆರೋಪದ ಮೇರೆಗೆ ಘಾಜಿಯಾಬಾದ್ ನ (Ghaziabad) ದೇವಸ್ಥಾನದ (temple) ಅರ್ಚಕರೊಬ್ಬರ ವಿರುದ್ಧ ನಗರ ಪೊಲೀಸರು ಪ್ರಕರಣ (FIR Filed) ದಾಖಲಿಸಿದ್ದಾರೆ. ಮುರಾದ್‌ನಗರ (Muradnagar) ಗಂಗಾ ಕಾಲುವೆಯ (Ganga canal) ಬಳಿ ಇರುವ ದೇವಾಲಯದ ಅರ್ಚಕರ ವಿರುದ್ಧ ಪ್ರಕರಣ ದಾಖಲಾಗಿದೆ. ಭಕ್ತರು ಸಾಮಾನ್ಯವಾಗಿ ಕಾಲುವೆಯಲ್ಲಿ ಸ್ನಾನ ಮಾಡಿ ಅನಂತರ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 21ರಂದು ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದ ಮಹಿಳೆ ಮತ್ತು ಅವರ ಮಗಳು ಚಾವಣಿಯಿಲ್ಲದ ಸ್ನಾನಗೃಹದತ್ತ ಸಿಸಿಟಿವಿ ಕ್ಯಾಮೆರಾ ತೋರಿಸುತ್ತಿರುವುದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುವ ಕೊಠಡಿಯ ಮೇಲೆ ಕೇಂದ್ರೀಕೃತವಾಗಿರುವುದನ್ನು ಮಹಿಳೆ ಗಮನಿಸಿದ್ದಾಳೆ ಎಂದು ಪೊಲೀಸ್ ಉಪ ಆಯುಕ್ತ (ಗ್ರಾಮೀಣ) ವಿವೇಕ್ ಚಂದ್ರ ಯಾದವ್ ತಿಳಿಸಿದ್ದಾರೆ.
ಸಿಸಿಟಿವಿ ಕ್ಯಾಮೆರಾದ ಡಿಸ್‌ಪ್ಲೇಯು ಅರ್ಚಕರ ಮೊಬೈಲ್ ಫೋನ್‌ಗೆ ಲಿಂಕ್ ಮಾಡಲ್ಪಟ್ಟಿದೆ. ಅದರಲ್ಲಿ ಅವರು ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ವೀಕ್ಷಿಸುತ್ತಾರೆ ಎಂದು ಡಿಸಿಪಿ ಹೇಳಿದರು. ಕ್ಯಾಮೆರಾವನ್ನು ಗಮನಿಸಿದ ಮಹಿಳೆ ತಕ್ಷಣ ಅರ್ಚಕ ಮಹಂತ್ ಗೋಸ್ವಾಮಿ ಅವರನ್ನು ಸಂಪರ್ಕಿಸಿ ಸಿಸಿಟಿವಿ ಕ್ಯಾಮೆರಾದ ಬಗ್ಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಂತ್ ಮಹಿಳೆಯ ಮೇಲೆ ನಿಂದಿಸಲು ಪ್ರಾರಂಭಿಸಿದರು ಮತ್ತು ಕ್ಯಾಮೆರಾದ ಬಗ್ಗೆ ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು ಎಂದು ಡಿಸಿಪಿ ಯಾದವ್ ಹೇಳಿದ್ದಾರೆ.
ದೂರು ಪಡೆದ ಅನಂತರ ಮುರಾದನಗರ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ. ಅರ್ಚಕನನ್ನು ಬಂಧಿಸಲು ಪೊಲೀಸ್ ತಂಡ ದೇವಸ್ಥಾನಕ್ಕೆ ಬಂದಾಗ ಆತ ಅಲ್ಲಿ ಇರಲಿಲ್ಲ ಎಂದು ಡಿಸಿಪಿ ತಿಳಿಸಿದರು. ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯ ಮೇಲೆ ಕ್ರಿಮಿನಲ್ ಹಲ್ಲೆ), 354 ಸಿ (ಖಾಸಗಿ ಕೃತ್ಯದಲ್ಲಿ ತೊಡಗಿರುವ ಮಹಿಳೆಯರ ಚಿತ್ರವನ್ನು ವೀಕ್ಷಿಸುವುದು ಅಥವಾ ಸೆರೆಹಿಡಿಯುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅರ್ಚಕನನ್ನು ಬಂಧಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Road Accident: ಕೆಎಸ್ಆರ್‌ಟಿಸಿ ಬಸ್-ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು