ನವದೆಹಲಿ: ಸೌರವ್ಯೂಹದಲ್ಲಿ ಭೂಮಿಯ ಸುತ್ತಲೂ ನೂರಾರು ಕ್ಷುದ್ರಗ್ರಹಗಳು ಸುತ್ತುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೊಂದಿಷ್ಟು ಸಣ್ಣ ಗಾತ್ರದಲ್ಲಿದ್ದರೆ, ಮತ್ತೊಂದಿಷ್ಟು ಕ್ಷುದ್ರಗ್ರಹಗಳು ಚಂದ್ರನಿಗಿಂತಲೂ ದೊಡ್ಡದಾಗಿರುತ್ತವೆ. ಬಹುತೇಕ ಕ್ಷುದ್ರಗ್ರಹಗಳು ಭೂಮಿಯ ಸಮೀಪವೂ ಸುಳಿಯುವುದಿಲ್ಲ. ಆದರೆ, ಕೆಲವೊಂದಿಷ್ಟು ಕ್ಷುದ್ರಗಳು ಭೂಮಿಯ ಸಮೀಪ ಬಂದರೆ ಅಪ್ಪಳಿಸದೆ ಬಿಡುವುದಿಲ್ಲ ಹಾಗೂ ಅಪ್ಪಳಿಸಿದರೆ ಅಪಾಯ ತಪ್ಪಿದ್ದಲ್ಲ. ಅದರಲ್ಲೂ, ಮುಂದಿನ ವಾರ ಐದು ಬೃಹತ್ ಕ್ಷುದ್ರಗ್ರಹಗಳು ಭೂಮಿಯ (Asteroids Alert) ಸಮೀಪ ಬರಲಿದ್ದು, ಬಾಹ್ಯಾಕಾಶ ವಿಜ್ಞಾನಿಗಳು ಅಪಾಯದ ಎಚ್ಚರಿಕೆ ನೀಡಿದ್ದಾರೆ.
ಐದು ಬೃಹತ್ ಕ್ಷುದ್ರಗ್ರಹಗಳು ಮುಂದಿನ ವಾರ ಭೂಮಿಯ ಸಮೀಪ ಬರುವುದನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ವಿಜ್ಞಾನಿಗಳು ಟೆಲಿಸ್ಕೋಪ್ (ದೂರದರ್ಶಕ) ಮೂಲಕ ಪತ್ತೆಹಚ್ಚಿದ್ದಾರೆ. ಭೂಮಿಯ ಸಮೀಪ ಬರುವ ಇವು ಅಪ್ಪಳಿಸಿದರೆ ಸಾವು-ನೋವು ಸಂಭವಿಸುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಐದು ಕ್ಷುದ್ರಗ್ರಹ ಯಾವವು?
ಒಟ್ಟು ಐದು ಕ್ಷುದ್ರಗ್ರಹಗಳು ಭೂಮಿಯ ಹತ್ತಿರಕ್ಕೆ ಬರಲಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ೨೦೨೨ ಕ್ಯೂಎಫ್ ಎಂಬ ಕ್ಷುದ್ರಗ್ರಹವು ೧೪೦ ಅಡಿ ಅಗಲ ಹೊಂದಿದ್ದು, ಇದು ಭೂಮಿಗೆ ೭೩ ಲಕ್ಷ ಕಿ.ಮೀ ಸಮೀಪಕ್ಕೆ ಬರಲಿದೆ. ಅಂದಾಜು ಗಂಟೆಗೆ ೩೦ ಸಾವಿರ ಕಿ.ಮೀ ಸರಾಸರಿ ವೇಗದಲ್ಲಿ ಚಲಿಸಲಿದೆ. ಇದು ಅಪ್ಪಳಿಸಿದರೆ ಭಾರಿ ಪ್ರಮಾಣದಲ್ಲಿ ಪರಿಣಾಮ ಎದುರಾಗಲಿದೆ.
೨೦೦೮ ಆರ್‌ಡಬ್ಲ್ಯೂ ಎಂಬ ಕ್ಷುದ್ರಗ್ರಹವು 310 ಅಡಿ ಅಗಲವಾಗಿದೆ. ಇದು ಸೆಪ್ಟೆಂಬರ್ ೧೨ರಂದು ಭೂಮಿಗೆ ೬೭ ಲಕ್ಷ ಕಿ.ಮೀ ಹತ್ತಿರ ಬರಲಿದ್ದು, ಗಂಟೆಗೆ ೩೬,೭೫೬ ಕಿ.ಮೀ ವೇಗದಲ್ಲಿ ಚಲಿಸಲಿದೆ. ೨೦೨೨ ಕ್ಯೂಡಿ೧ ಕ್ಷುದ್ರಗ್ರಹ ೨೪೨ ಅಡಿ ಅಗಲವಾಗಿದ್ದು, ಸೆಪ್ಟೆಂಬರ್ ೧೬ರಂದು ಭೂಮಿಗೆ ೭೪ ಲಕ್ಷ ಕಿ.ಮೀ ದೂರದಲ್ಲಿ ಕಾಣಿಸಿಕೊಳ್ಳಲಿದೆ.
೨೦೦೫ ಆರ್‌ಎಕ್ಸ್‌೩ ಬೃಹತ್ ಕ್ಷುದ್ರಗ್ರವಾಗಿದ್ದು, ೪೦೩ ಅಡಿ ಅಗಲ ಹೊಂದಿದೆ. ಸೆಪ್ಟೆಂಬರ್ ೧೮ರಂದು ಭೂಮಿಗೆ ೪೭ ಲಕ್ಷ ಕಿ.ಮೀ ಸಮೀಪ ಸುಳಿಯಲಿದೆ. ೬೨,೮೫೬ ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ಇದು ಅಪ್ಪಳಿಸಿದರೆ ಭಾರಿ ಪ್ರಮಾಣದಲ್ಲಿ ತೊಂದರೆ ಆಗಲಿದೆ. ೨೦೨೨ ಕ್ಯೂಬಿ೩೭ ಕ್ಷುದ್ರಗ್ರಹವು ಸೆಪ್ಟೆಂಬರ್ ೧೮ರಂದು ೬೫ ಲಕ್ಷ ಸಮೀಪ ಬರಲಿದೆ. ಗಂಟೆಗೆ ೩೩,೧೯೨ ಕಿ.ಮೀ ವೇಗದಲ್ಲಿ ಸಂಚರಿಸಲಿದೆ.
ಇದನ್ನೂ ಓದಿ | ಏಲಿಯೆನ್ಸ್ ಸೆಳೆಯಲು ಕಾಮಸೂತ್ರ ಬಳಕೆ, ಅನ್ಯಗ್ರಹಕ್ಕೆ ಗಂಡು-ಹೆಣ್ಣಿನ ನಗ್ನ ಚಿತ್ರ ರವಾನೆ!