Site icon Vistara News

ಫ್ರಾನ್ಸ್‌ ವಶದಲ್ಲಿದ್ದ ವಿಮಾನ ಭಾರತಕ್ಕೆ ವಾಪಸ್; ನಿಟ್ಟುಸಿರು ಬಿಟ್ಟ 276 ಭಾರತೀಯರು

Flight

Indians paid up to ₹1.2 crore each to fly on 'donkey flight' grounded in France: Cops

ಮುಂಬೈ: ಮಾನವ ಕಳ್ಳಸಾಗಣೆ ಆರೋಪದಲ್ಲಿ (Human Trafficking) ಫ್ರಾನ್ಸ್‌ ವಶದಲ್ಲಿದ್ದ ಭಾರತೀಯರಿದ್ದ ವಿಮಾನವು ಭಾರತಕ್ಕೆ ಸುರಕ್ಷಿತವಾಗಿ ಆಗಮಿಸಿದೆ. ಫ್ರಾನ್ಸ್‌ನಿಂದ ಹೊರಟಿದ್ದ ವಿಮಾನವು ಮಂಗಳವಾರ (ಡಿಸೆಂಬರ್‌ 26) ಬೆಳಗ್ಗೆ 4 ಗಂಟೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಿದೆ. ಪ್ಯಾರಿಸ್‌ನ ಪ್ಯಾಟ್ರಿ ವಿಮಾನ ನಿಲ್ದಾಣದಿಂದ ಹೊರಟ ವಿಮಾನವು ಸುರಕ್ಷಿತವಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗುತ್ತಲೇ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ಕೆಲ ದಿನಗಳ ಹಿಂದಷ್ಟೇ ವಿಮಾನವನ್ನು ಫ್ರಾನ್ಸ್‌ನಲ್ಲಿ ಲ್ಯಾಂಡ್‌ ಮಾಡಿಸಲಾಗಿತ್ತು. ಅಮೆರಿಕ (USA) ಅಥವಾ ಕೆನಡಾಗೆ (Canada) ವಿಮಾನದಲ್ಲಿದ್ದ ಭಾರತೀಯ ಕಾನೂನುಬಾಹಿರವಾಗಿ ತೆರಳುವ ಉದ್ದೇಶ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದ್ದವು. ವಿಮಾನದಲ್ಲಿ ಭಾರತೀಯರೇ ಹೆಚ್ಚಿರುವ ಕಾರಣ ಆತಂಕ ಹೆಚ್ಚಾಗಿತ್ತು. ಆದರೆ, ತನಿಖೆಯ ಬಳಿಕ ವಿಮಾನವನ್ನು ಭಾರತಕ್ಕೆ ಕಳುಹಿಸಲಾಗಿದೆ. ಸದ್ಯ 276 ಪ್ರಯಾಣಿಕರು ಭಾರತಕ್ಕೆ ಆಗಮಿಸಿದ್ದು, ಇನ್ನೂ 25 ಪ್ರಯಾಣಿಕರು ಫ್ರಾನ್ಸ್‌ನಲ್ಲೇ ಉಳಿದಿದ್ದು, ಆಶ್ರಯ ಕೋರಿದ್ದಾರೆ ಎಂದು ತಿಳಿದುಬಂದಿದೆ.

ಅನಾಮಧೇಯ ನೀಡಿದ ಖಚಿತ ಮಾಹಿತಿಯಾಧಾರದ ಮೇಲೆ, ವಿಮಾನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್‌ಗಳು ಹೇಳಿದ್ದರು. ಈ ವಿಮಾನದಲ್ಲಿ 303 ಭಾರತೀಯ ಪ್ರಯಾಣಿಕರು ಇದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ವಿಮಾನವು ಟೇಕಾಫ್ ಆಗಿದ್ದು, ಪ್ರವಾಸದ ಉದ್ದೇಶಗಳ ಕುರಿತು ನ್ಯಾಯಾಂಗ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ವರದಿ ಮಾಡಿತ್ತು. ಅಧಿಕಾರಿಗಳು ಶಂಕಿತ ಮಾನವ ಕಳ್ಳ ಸಾಗಣೆಯ ನಿಟ್ಟಿನಲ್ಲೂ ತನಿಖೆ ಮಾಡಿದ್ದರು.

ದುಬೈನಿಂದ ಹೊರಟ ಈ ವಿಮಾನವು ರೊಮೇನಿಯನ್ ಚಾರ್ಟರ್ ಕಂಪನಿಗೆ ಸೇರಿದ್ದಾಗಿದೆ. ಪೊಲೀಸರು ಅಡ್ಡಿಪಡಿಸಿದ ಬಳಿಕವು ತಾಂತ್ರಿಕ ನಿಲುಗಡೆಗಾಗಿ ಸಣ್ಣ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಿತು ಎಂದು ಹೇಳಲಾಗಿದೆ. ವ್ಯಾಟ್ರಿ ವಿಮಾನ ನಿಲ್ದಾಣದ ಸ್ವಾಗತ ಕೋರುವ ಹಾಲ್‌ ಅನ್ನು ವೇಯ್ಟಿಂಗ್ ರೂಮ್ ಆಗ ಪರಿವರ್ತಿಸಲಾಗಿದ್ದು, ಪ್ರಯಾಣಿಕರಿಗೆ ಹಾಸಿಗೆಗಳನ್ನು ಪೂರೈಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ: Human Trafficking: ಮಾನವ ಕಳ್ಳಸಾಗಣೆ; ಫ್ರಾನ್ಸ್‌ನಲ್ಲಿ 300 ಭಾರತೀಯರಿದ್ದ ವಿಮಾನ ಲ್ಯಾಂಡಿಂಗ್!

ಫ್ರಾನ್ಸ್‌ನ ಸಂಘಟಿತ ಅಪರಾಧ ತಡೆ ಘಟಕ ಜುನಾಲ್ಕೋ(JUNALCO) ತನಿಖೆಯ ನೇತೃತ್ವವನ್ನು ಹೊತ್ತುಕೊಂಡಿತ್ತು. ಸುದ್ದಿ ಸಂಸ್ಥೆಗಳ ವರದಿಗಳ ಪ್ರಕಾರ, ಭಾರತೀಯ ಪ್ರಜೆಗಳನ್ನು ಹೊಂದಿರುವ ಈ ವಿಮಾನವು ಕೇಂದ್ರ ಅಮೆರಿಕಕ್ಕೆ ಹೊರಟಿತ್ತು. ಕೆನಡಾ ಮತ್ತು ಅಮೆರಿಕಕ್ಕೆ ಕಾನೂನುಬಾಹಿರವಾಗಿ ಪ್ರಯಾಣಿಕರನ್ನು ಕಳುಹಿಸುವುದು ಇದರ ಉದ್ದೇಶವಾಗಿತ್ತು ಎಂದು ಹೇಳಲಾಗಿತ್ತು.

Exit mobile version