Site icon Vistara News

BF.7 Variant | ವಿದೇಶಿ ಮಹಿಳೆ ಸೇರಿ ಬಂಗಾಳದಲ್ಲಿ ಇಬ್ಬರಿಗೆ ಕೊರೊನಾ, ಆಸ್ಪತ್ರೆಯಲ್ಲಿ ಐಸೊಲೇಷನ್‌

covid-19

ಕೋಲ್ಕೊತಾ: ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಕೋಲ್ಕೊತಾದಲ್ಲೂ ಒಬ್ಬ ವಿದೇಶಿ ಮಹಿಳೆ ಸೇರಿ ಇಬ್ಬರಿಗೆ ಸೋಂಕು (BF.7 Variant) ತಗುಲಿದೆ. ಬ್ರಿಟನ್‌ ಪಾಸ್‌ಪೋರ್ಟ್‌ ಹೊಂದಿರುವ ಮಹಿಳೆಯು ಕೌಲಾಲಂಪುರದಿಂದ ಕೋಲ್ಕೊತಾಗೆ ಆಗಮಿಸಿದ್ದಾರೆ. ಮತ್ತೊಬ್ಬ ವ್ಯಕ್ತಿಯು ಬಿಹಾರದವರಾಗಿದ್ದು, ಇವರು ದುಬೈನಿಂದ ಕೋಲ್ಕೊತಾಗೆ ಆಗಮಿಸಿದ್ದಾರೆ. ಇಬ್ಬರಿಗೂ ಕೊರೊನಾ ದೃಢಪಟ್ಟಿದೆ.

ಇಬ್ಬರ ಮಾದರಿಯನ್ನೂ ಜೆನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ. ಹಾಗೆಯೇ, ಬ್ರಿಟಿಷ್‌ ಮಹಿಳೆಯನ್ನು ಬೆಲಿಯಾಘಟ ಆಸ್ಪತ್ರೆಯ ಐಸೊಲೇಷನ್‌ನಲ್ಲಿ ವಾರ್ಡ್‌ನಲ್ಲಿ ಇರಿಸಲಾಗಿದೆ. ಇವರಿಗೆ ಆರ್‌ಟಿ-ಪಿಸಿಆರ್‌ ತಪಾಸಣೆಯನ್ನೂ ಮಾಡಲಾಗಿದೆ ಎಂದು ಕೋಲ್ಕೊತಾ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಗಯಾ ಪಟ್ಟಣದಲ್ಲಿರುವ ನಾಲ್ವರು ವಿದೇಶಿಯರಿಗೂ ಕೊರೊನಾ ದೃಢಪಟ್ಟಿದೆ. ಅವರ ಮಾದರಿಗಳನ್ನೂ ಜೆನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಭಾನುವಾರ ಒಬ್ಬರಿಗೆ ಹಾಗೂ ಸೋಮವಾರ ಇನ್ನೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರ ಮಾದರಿಯನ್ನೂ ಜೆನೋಮ್‌ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ.

ಇದನ್ನೂ ಓದಿ | BF.7 Variant | ಉತ್ತರ ಪ್ರದೇಶದಲ್ಲಿ ಮತ್ತೊಂದು ಕೊರೊನಾ ಕೇಸ್​ ಪತ್ತೆ; ದುಬೈಗೆ ಹೊರಟಿದ್ದವನಿಗೆ ಕೋವಿಡ್​ ಪಾಸಿಟಿವ್​

Exit mobile version