1. ಹುಲಿ ಉಗುರು ಸಿಕ್ಕ ಸೆಲೆಬ್ರಿಟಿಗಳಿಗೆ ಜೀವದಾನ?; ಸರ್ಕಾರಕ್ಕೆ ಮರಳಿಸಲು ಅಂತಿಮ ಚಾನ್ಸ್?
ಬೆಂಗಳೂರು: ರಾಜ್ಯದಲ್ಲಿ ಹುಲಿ ಉಗುರಿನ (Tiger Nail) ಲಾಕೆಟ್ ಇರುವ ಸರ ಧರಿಸಿರುವವರ ವಿರುದ್ಧ ನಿತ್ಯ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ , ಅದರಲ್ಲೂ ಗಣ್ಯ ವ್ಯಕ್ತಿಗಳು, ಸೆಲೆಬ್ರಿಟಿಗಳ ಮೇಲೆ ಕೇಸು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ (Forest department) ಗೋ ಸ್ಲೋ ತಂತ್ರವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ವರ್ತೂರು ಸಂತೋಷ್ (Varthuru Santhosh) ಅವರ ಕೊರಳಲ್ಲಿದ್ದ ಹುಲಿಯ ಉಗುರನ್ನು ಟಿವಿ ಪರದೆಯ ಮೇಲೆ ನೋಡಿ ಕೇಸು ದಾಖಲಿಸಿಕೊಂಡು, ಬಿಗ್ ಬಾಸ್ ಮನೆಗೇ ಹೋಗಿ ಬಂಧಿಸಿದ್ದ ಅರಣ್ಯ ಇಲಾಖೆ ಈಗ ಸಾಲು ಸಾಲು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ದಿಕ್ಕು ತೋಚದಂತಾಗಿದೆ. ಈ ಹಂತದಲ್ಲಿ ಶಿಕ್ಷೆಯ ಬದಲು ಜಾಗೃತಿ ಮೂಡಿಸಲು ಮುಂದಾಗಿದೆ. ಜತೆಗೆ ಈಗ ಇರುವ ವನ್ಯಜೀವಿ (Wild life) ಸಂಬಂಧಿತ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಲು ಒಂದು ಅಂತಿಮ ದಿನವನ್ನು ನಿಗದಿಪಡಿಸುವ ಸಾಧ್ಯತೆ ಕಂಡುಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Tiger Nail : ನವಿಲು ಗರಿ ಇಟ್ಟುಕೊಂಡಿರುವ ದರ್ಗಾ, ಮಸೀದಿ ಮೇಲೂ ದಾಳಿ ಮಾಡಿ ಮೌಲ್ವಿಗಳ ಬಂಧಿಸಿ ಎಂದ ಬಿಜೆಪಿ
Forest act : ಮರ್ಡರ್ ಕೇಸ್‌ಗಿಂತಲೂ ಬಿಗಿ ವನ್ಯಜೀವಿ ಸಂರಕ್ಷಣಾ ಕಾಯಿದೆ; ಏನಿದೆ ಅದರಲ್ಲಿ?
2. ವರ್ಗಾವಣೆಗೆ ಹಣ ಪಡೆದಿಲ್ಲವೆಂದು ಸಿಎಂ, ಡಿಸಿಎಂ, 30 ಸಚಿವರು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ: ಎಚ್‌ಡಿಕೆ ಸವಾಲು
ಬೆಂಗಳೂರು: ನಾನಾಗಲೀ ನನ್ನ ಕುಟುಂಬದವರಾಗಲೀ ಅಧಿಕಾರದಲ್ಲಿದ್ದಾಗ ಪೊಲೀಸ್ ವರ್ಗಾವಣೆ ಸೇರಿದಂತೆ ಇನ್ನು ಯಾವುದೇ ವರ್ಗಾವಣೆಗೆ ದುಡ್ಡು (Transfer racket) ತೆಗೆದುಕೊಂಡಿಲ್ಲ. ಈ ಬಗ್ಗೆ ಮಾಗಡಿ ಬಾಲಕೃಷ್ಣ (Magadi Balakrishna) ಹಾಕಿರುವ ಸವಾಲನ್ನು ನಾನು ಸ್ವೀಕಾರ ಮಾಡುತ್ತೇನೆ. ನಾನೂ ಧರ್ಮಸ್ಥಳಕ್ಕೆ ಬರುತ್ತೇನೆ. ಅವರೂ ಧರ್ಮಸ್ಥಳಕ್ಕೆ ಬರಲಿ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಸೇರಿದಂತೆ 30 ಸಚಿವರೂ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
3. ರಾಮಮಂದಿರ ಉದ್ಘಾಟಿಸಲು ಮೋದಿಗೆ ಆಹ್ವಾನ ನೀಡಿದಕ್ಕೆ ಕಾಂಗ್ರೆಸ್ ಆಕ್ರೋಶ
ನವದೆಹಲಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ (Ram Mandir) ಉದ್ಘಾಟನೆಯನ್ನು 2024ರ ಜನವರಿ 22ರಂದು ನೆರವೇರಿಸಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತೀರ್ಮಾನಿಸಿದೆ. ಅಲ್ಲದೆ, ರಾಮಮಂದಿರ ಉದ್ಘಾಟನೆಗೆ ಟ್ರಸ್ಟ್‌ನಿಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ, ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿರುವುದಕ್ಕೆ ಕಾಂಗ್ರೆಸ್ (Congress) ಆಕ್ರೋಶ ವ್ಯಕ್ತಪಡಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. 13 ಮಂದಿಯ ಬಲಿ ಪಡೆದ ದಟ್ಟ ಮಂಜು; ಚಿಕ್ಕಬಳ್ಳಾಪುರ ಬಳಿ ಭೀಕರ ಅಪಘಾತ
ಚಿಕ್ಕಬಳ್ಳಾಪುರ: ಬೆಳ್ಳಂಬೆಳ್ಳಗ್ಗೆ ದಟ್ಟ ಮಂಜು ಆವರಿಸಿದ್ದ ಹಿನ್ನೆಲೆಯಲ್ಲಿ ಭೀಕರ ಅಪಘಾತ (road accident) ಸಂಭವಿಸಿದ್ದು, 13 ಮಂದಿ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರ (chikkaballapur accident, chikkaballapur news) ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರಲ್ಲಿರುವ ಚಿತ್ರಾವತಿ ಬಳಿ ಘಟನೆ ನಡೆದಿದೆ. ರಸ್ತೆಯಲ್ಲಿ ನಿಂತಿದ್ದ ಸಿಮೆಂಟ್ ಕ್ಯಾಂಟರ್‌ಗೆ ವೇಗವಾಗಿ ಬಂದ ಟಾಟಾ ಸುಮೋ ಡಿಕ್ಕಿ ಹೊಡೆದಿದೆ. ಮುಂಜಾನೆ ಒಂದಡಿ ದೂರದ ರಸ್ತೆ ಕೂಡ ಕಾಣದಂತೆ ಮಂಜು ಹಬ್ಬಿದ್ದು, ಈ ಕಾರಣದಿಂದಲೇ ಸುಮೋ ಚಾಲಕನಿಗೆ ಕ್ಯಾಂಟರ್ ಕಾಣಿಸಿಲ್ಲ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. 8 ಮಾಜಿ ಭಾರತೀಯ ನೌಕಾ ಪಡೆ ಅಧಿಕಾರಿಗಳಿಗೆ ಕತಾರ್‌ನಲ್ಲಿ ಗಲ್ಲು ಶಿಕ್ಷೆ! ಕಾರಣ ಏನು?
ನವದೆಹಲಿ: ಇಸ್ರೇಲ್ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದಾರೆಂದು (spying for Israel) ಆರೋಪಿಸಿ, ಎಂಟು ಮಾಜಿ ಭಾರತೀಯ ನೌಕಾ ಪಡೆ ಅಧಿಕಾರಿಗಳಿಗೆ (ex-Indian Navy veterans) ಕತಾರ್‌ನಲ್ಲಿ (Qatar) ಗಲ್ಲು ಶಿಕ್ಷೆ ವಿಧಿಸಲಾಗಿದೆ(Death Sentence). ಈ ಎಂಟೂ ಮಂದಿ ಕತಾರಿ ಸಶಸ್ತ್ರ ಪಡೆಗಳಿಗೆ ಸಹಾಯ ಮಾಡುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಭಾರತದ ನೌಕಾ ಪಡೆಯಲ್ಲಿ ಯುದ್ಧ ಹಡುಗುಗಳ ಕಮಾಂಡರ್ ಆಗಿದ್ದರು(commanded Indian warships). ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
6. ಮಗನ ಆಸ್ತಿಯಲ್ಲಿ ಹೆಂಡತಿ, ಮಕ್ಕಳಿಗಷ್ಟೇ ಅಲ್ಲ, ತಾಯಿಗೂ ಪಾಲಿದೆ ಎಂದ ಹೈಕೋರ್ಟ್
ಬೆಂಗಳೂರು: ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ (Asset earned by father) ಮಕ್ಕಳಿಗೆ ಪಾಲಿದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಒಂದು ವೇಳೆ ಮಗ ಮೃತಪಟ್ಟರೆ ಅವನ ಆಸ್ತಿಯಲ್ಲಿ ತಾಯಿಗೂ ಪಾಲಿದೆ ಎಂದು ರಾಜ್ಯ ಹೈಕೋರ್ಟ್ (Karnataka High court) ಹೇಳಿದೆ. ಆದರೆ, ಅದು ಮಗನಿಗೆ ಸಿಕ್ಕಿದ ಪಿತ್ರಾರ್ಜಿತ ಆಸ್ತಿಯಾಗಿರಬೇಕು ಮತ್ತು ತಾಯಿ ಮೊದಲನೇ ವರ್ಗದ ವಾರೀಸುದಾರರಾಗಿಬೇಕು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
7. 3,523 ಅರ್ಜಿಯಲ್ಲಿ 68 ಮಂದಿ ಆಯ್ಕೆ; 2 ದಿನದಲ್ಲಿ ಪಟ್ಟಿ ಪ್ರಕಟವೆಂದ ತಂಗಡಗಿ
ಬೆಂಗಳೂರು: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ (Karnataka Rajyotsava Award) ಕನಿಷ್ಠ 68 ಮಂದಿಯನ್ನು ಆಯ್ಕೆ ಮಾಡಲು ನಿರ್ಧಾರ ಮಾಡಲಾಗಿದೆ. ಇದಲ್ಲದೆ, ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿ ಕೊಡಲು ನಿರ್ಧರಿಸಲಾಗಿದೆ. ಯಾವ ಯಾವ ವಿಭಾಗಕ್ಕೆ ಎಷ್ಟು ಪ್ರಶಸ್ತಿ ಎಂಬುದನ್ನು ಇನ್ನೆರಡು ದಿನದಲ್ಲಿ ಅಂತಿಮ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
8. ಒಳ ನುಸುಳುತ್ತಿದ್ದ ಐವರು ಲಷ್ಕರೆ ಉಗ್ರರನ್ನು ಹೊಡೆದುರುಳಿಸಿದ ಕಾಶ್ಮೀರ ಪೊಲೀಸ್, ಸೇನೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ(LOC)ಯಲ್ಲಿ ಪೊಲೀಸರು ಮತ್ತು ಸೇನೆ ನಡೆಸಿದ ಒಳನುಸುಳುವಿಕೆ ತಡೆ ಕಾರ್ಯಾಚರಣೆಯ ವೇಳೆ ಐವರು ಲಷ್ಕರ್ ಭಯೋತ್ಪಾದಕರು(Terrorists Killed) ಗುರುವಾರ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನಲ್ಲಿ ಈ ಗುಂಡಿನ ಚಕಮಕಿ ನಡೆದಿದೆ(Encounter). ಆರಂಭಿಕ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ನಂತರದ ಕಾರ್ಯಾಚರಣೆಯಲ್ಲಿ ಇನ್ನೂ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತರಾದ ಎಲ್ಲ ಉಗ್ರರು ಲಷ್ಕರೆ ತಯ್ಬಾ (Lashkar-e-Toiba – LeT) ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ(counter infiltration operation). ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9 .ಲಂಕಾ ವಿರುದ್ಧ ಸೋತ ಇಂಗ್ಲೆಂಡ್ ಸೆಮೀಸ್ ರೇಸ್ನಿಂದ ಬಹುತೇಕ ಔಟ್
ಬೆಂಗಳೂರು: ಹಾಲಿ ವಿಶ್ವ ಕಪ್ ಟೂರ್ನಿಯಲ್ಲಿ ಮತ್ತೊಂದು ಹೀನಾಯ ಪ್ರದರ್ಶನ ನೀಡಿದ ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡ ದುರ್ಬಲ ಶ್ರೀಲಂಕಾ ವಿರುದ್ಧ 8 ವಿಕೆಟ್ಗಳಿಂದ ಹೀನಾಯವಾಗಿ ಸೋತಿದೆ. ಈ ಮೂಲಕ ವಿಶ್ವ ಕಪ್ನಲ್ಲಿ (ICC World Cup 2023) ಸೆಮಿಫೈನಲ್ಗೇರುವ ಅವಕಾಶ ಬಹುತೇಕ ಕಳೆದುಕೊಂಡಿದೆ. ಈ ಸೋಲಿನೊಂದಿಗೆ ಆಂಗ್ಲರ ಪಡೆ ಹಾಲಿ ಆವೃತ್ತಿಯಲ್ಲಿ ಒಟ್ಟು 4 ಪಂದ್ಯಗಳ ಸೋಲನ್ನು ಎದುರಿಸಿದಂತಾಗಿದೆ. ಕೇವಲ ಒಂದು ವಿಜಯದ ಮೂಲಕ 2 ಅಂಕಗಳನ್ನು ಸಂಪಾದಿಸಿದೆ. ಇದು ವಿಶ್ವ ಕಪ್ ಆವೃತ್ತಿಯಲ್ಲಿ ಚಾಂಪಿಯನ್ ತಂಡವೊಂದರ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
10. ತೆಲಂಗಾಣದಲ್ಲಿ ಟಿವಿ ಲೈವ್‌ನಲ್ಲೇ ಬಿಜೆಪಿ ನಾಯಕನ ಕತ್ತು ಹಿಸುಕಿದ ಬಿಆರ್‌ಎಸ್ ಶಾಸಕ
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ (Telangana Assembly Election) ದಿನಾಂಕ ಘೋಷಣೆಯಾಗಿದೆ. ಭಾರತ್ ರಾಷ್ಟ್ರ ಸಮಿತಿ (BRS), ಕಾಂಗ್ರೆಸ್ ಹಾಗೂ ಬಿಜೆಪಿಯು ರಣತಂತ್ರ ರೂಪಿಸುತ್ತಿವೆ. ಶತಾಯ ಗತಾಯ ಚುನಾವಣೆಯಲ್ಲಿ ಗೆಲ್ಲಲು ಯೋಜನೆ, ತಂತ್ರ, ಅಸ್ತ್ರಗಳನ್ನು ಬಳಸುತ್ತಿವೆ. ರಾಜಕೀಯ ನಾಯಕರ ಮಧ್ಯೆ ತೀವ್ರ ವಾದ, ವಾಗ್ವಾದ, ಆರೋಪ, ಪ್ರತ್ಯಾರೋಪಗಳು ಕೂಡ ಆರಂಭವಾಗಿವೆ. ಇದರ ಬೆನ್ನಲ್ಲೇ, ನ್ಯೂಸ್ ಚಾನೆಲ್ ಲೈವ್‌ನಲ್ಲಿಯೇ ಬಿಆರ್‌ಎಸ್ ಶಾಸಕರೊಬ್ಬರು (BRS MLA) ಬಿಜೆಪಿ ಅಭ್ಯರ್ಥಿಯೊಬ್ಬರ ಮೇಲೆ ದಾಳಿ ನಡೆಸಿ, ಅವರ ಕತ್ತು ಹಿಸುಕಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗುವ ಜತೆಗೆ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ