Site icon Vistara News

Lakshadweep: ಮಾಲ್ಡೀವ್ಸ್‌ ಬಿಡಿ, ಲಕ್ಷದ್ವೀಪದಲ್ಲಿ ನೋಡಲೇಬೇಕಾದ ತಾಣಗಳ ಪರಿಚಯ ಇಲ್ಲಿದೆ

Minicoy Island

India drops to 5th position on Maldives' top 10 tourism markets amid diplomatic row

ಲಕ್ಷದ್ವೀಪ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ, ಕಡಲ ತೀರದಲ್ಲಿ ತೆಗೆಸಿಕೊಂಡ ಚೆಂದದ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ ಬಳಿಕ ಲಕ್ಷದ್ವೀಪದ ಪ್ರವಾಸಿ ತಾಣಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ. ಅದರಲ್ಲೂ, ಲಕ್ಷದ್ವೀಪ, ಮೋದಿ, ಭಾರತದ ವಿಷಯದಲ್ಲಿ ಮಾಲ್ಡೀವ್ಸ್‌ ಉದ್ಧಟತನದ ವರ್ತನೆ ತೋರಿದ ಬಳಿಕ ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿದೆ. ಅಷ್ಟೇ ಅಲ್ಲ, ಲಕ್ಷದ್ವೀಪಕ್ಕೆ (Lakshadweep) ತೆರಳುವವರಿಗೆ ಈಸ್‌ ಮೈ ಟ್ರಿಪ್‌ (EaseMyTrip) ಆಫರ್‌ ನೀಡುವುದಾಗಿ ಘೋಷಿಸಿದೆ. ಹಾಗಾದರೆ, ಲಕ್ಷದ್ವೀಪದಲ್ಲಿ ನೋಡಲೇಬೇಕಾದ ತಾಣಗಳು ಯಾವವು? ಅವುಗಳ ವಿಶೇಷವೇನು ಎಂಬುದರ ಕಿರು ಮಾಹಿತಿ ಹೀಗಿದೆ…

ಮಿನಿಕಾಯ್‌ ದ್ವೀಪ ತಿಳಿ ನೀಲಿ ಆಕಾಶ ನೋಡುತ್ತ, ತಿಳಿ ನೀಲಿಯಂತೆ ಕಾಣುವ ಸಮುದ್ರದಲ್ಲಿ ಬೋಟಿಂಗ್‌ ಹೋಗಲು ಈ ದ್ವೀಪವು ಹೇಳಿ ಮಾಡಿಸಿದಂತಿದೆ.

ಪಿಟ್ಟಿ ಪಕ್ಷಿಧಾಮ ಲಕ್ಷದ್ವೀಪ ಎಂದರೆ ದ್ವೀಪಗಳು ಮಾತ್ರ ಎಂಬ ನಂಬಿಕೆ ಇದೆ. ಆದರೆ, ಪಿಟ್ಟಿ ಪಕ್ಷಿಧಾಮವು ದೇಶ-ವಿದೇಶಗಳ ಸಾವಿರಾರು ಪಕ್ಷಿಗಳಿಗೆ ಗೂಡಾಗಿದೆ.

ಅಮಿನಿ ಬೀಚ್ ಸ್ಕೂಬಾ ಡೈವಿಂಗ್‌ ಮಾಡುವವರು ಈ ಬೀಚ್‌ಗೆ ತಪ್ಪದೆ ಹೋಗುತ್ತಾರೆ. ಸ್ಕೂಬಾ ಡೈವಿಂಗ್‌ ವೇಳೆ ಜಲಚರ ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದು.

ಅಗಟ್ಟಿ ದ್ವೀಪ ಸಮುದ್ರದ ತೀರದಲ್ಲಿ ವಿಹಾರ ಕೈಗೊಳ್ಳುವ ಜತೆಗೆ ರುಚಿಕರವಾದ ಮೀನೂಟವೂ ಇಲ್ಲಿ ಸಿಗುತ್ತದೆ. ಪ್ರವಾಸಿಪ್ರಿಯರ ಜತೆಗೆ ಆಹಾರ ಪ್ರಿಯರಿಗೆ ಇದು ಅತ್ಯುತ್ತಮ ತಾಣ.

ಕವರಟ್ಟಿ ದ್ವೀಪ ಸಮುದ್ರದ ತೀರದಲ್ಲಿ ನಿಂತು ಸೂರ್ಯಾಸ್ತ ನೋಡುತ್ತಿದ್ದರೆ ಕವರಟ್ಟಿ ದ್ವೀಪದಲ್ಲಿ ಸ್ವರ್ಗವೇ ಕಂಡಷ್ಟು ಖುಷಿಯಾಗುತ್ತದೆ.

ಮರೀನ್‌ ಮ್ಯೂಸಿಯಂ ಸಮುದ್ರದ ಒಡಲಾಳದಲ್ಲಿರುವ ಪ್ರಾಣಿಗಳ ಜತೆಗೆ ಮರೀನ್‌ ಮ್ಯೂಸಿಯಂನಲ್ಲಿ ಜಲಚರಗಳ ಆಕೃತಿಗಳು, ಅವುಗಳ ಮಹತ್ವವನ್ನು ಅರಿಯಬಹುದಾಗಿದೆ.

ಇದನ್ನೂ ಓದಿ: ಮೋದಿ ವಿರುದ್ಧ ಆರೋಪ ಮಾಡಿದ ಮಾಲ್ಡೀವ್ಸ್‌ಗೆ ಮತ್ತೊಂದು ಪೆಟ್ಟು; ಈಸ್ ಮೈ ಟ್ರಿಪ್‌ ಬುಕ್ಕಿಂಗ್ ರದ್ದು

Exit mobile version