ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಚುನಾವಣೆ ಫಲಿತಾಂಶದ (Assembly Elections 2023) ಸ್ಪಷ್ಟ ಚಿತ್ರಣ ಸಿಕ್ಕಿದೆ. ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆ ಆರಂಭವಾಗಿದ್ದು, ಝೆಡ್‌ಪಿಎಂ ಪಕ್ಷವು ಮುನ್ನಡೆ ಸಾಧಿಸಿದೆ. ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.
ಕಾಂಗ್ರೆಸ್‌ಗೆ ಸೋಲು; ಇಂಡಿಯಾ ಕೂಟದಲ್ಲಿ ಶುರುವಾಯ್ತು ಒಳಜಗಳದ ಡೋಲು!
ನವದೆಹಲಿ: ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕೇವಲ ಒಂದು ರಾಜ್ಯವನ್ನು ಗೆದ್ದುಕೊಳ್ಳುವ ಮೂಲಕ ಸೋತು ಸುಣ್ಣವಾಗಿದೆ. ವಿಶೇಷವಾಗಿ ಹಿಂದಿ ಹಾರ್ಟ್ ಲ್ಯಾಂಡ್ ಎನಿಸಿಕೊಂಡಿರುವ ಮಧ್ಯ ಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನಗಳ ಪೈಕಿ, ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಢ ಸೋಲು ಅನಿರೀಕ್ಷಿತವಾಗಿದೆ. ಚುನಾವಣಾಪೂರ್ವ ಮತ್ತು ಕೆಲವು ಎಕ್ಸಿಟ್ ಪೋಲ್‌ಗಳು ಛತ್ತೀಸ್‌ಗಢ ಗೆಲ್ಲುವ ಕಾಂಗ್ರೆಸ್, ಮಧ್ಯ ಪ್ರದೇಶದಲ್ಲಿ ಫುಲ್ ಫೈಟ್ ನೀಡಲಿದೆ ಎಂದು ಹೇಳಿದ್ದವು. ಆದರೆ, ರಿಸಲ್ಟ್ ಮಾತ್ರ ಸಂಪೂರ್ಣ ಉಲ್ಟಾ ಆಗಿದ್ದು, ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಹಾಗಾಗಿ, ಸಹಜವಾಗಿಯೇ 2024ರ ಲೋಕಸಭೆ ಚುನಾವಣೆಗಾಗಿ ಒಂದಾಗಿರುವ ಇಂಡಿಯಾ ಕೂಟದ ಮೇಲೆ ಈ ಸೋಲು ಪರಿಣಾಮ ಬೀರುವ ಸಾಧ್ಯತೆಗಳಿವೆ. ಈಗಾಗಲೇ ಹಲವು ಮಮತಾ ಬ್ಯಾನರ್ಜಿ, ಅಖಿಲೇಶ್ ಸಿಂಗ್ ಯಾದವ್, ಒಮರ್ ಅಬ್ದುಲ್ಲಾ ಸೇರಿ ಹಲವರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸೋಲು, ಇಂಡಿಯಾ ಕೂಟದ ನಾಯಕತ್ವಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹಟ್ಟು ಹಾಕಿದೆ. ಲೋಕಸಭೆ ಚುನಾವಣೆಯವರೂಗ ಈ ಕೂಟ ಬದುಕುಳಿಯಲಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಈ ಮಧ್ಯೆ, ಮಲ್ಲಿಕಾರ್ಜುನ ಖರ್ಗೆ ಅವರು ಡಿಸೆಂಬರ್ 6ರಂದು ಇಂಡಿಯಾ ಕೂಟದ ಸಭೆ ಕರೆದಿದ್ದಾರೆ. ಮೂರು ತಿಂಗಳ ಬಳಿಕ ಇಂಡಿಯಾ ಕೂಟದ ಸಭೆ ನಡೆಯುತ್ತಿದೆ. ಆದರೆ, ಈ ಸಭೆಗೆ ತಾನು ಭಾಗವಹಿಸುತ್ತಿಲ್ಲ ಎಂದು ಹೇಳುವ ಮೂಲಕ ತೃಣಮೂಲ ಕಾಂಗ್ರೆಸ್ ಅಪಸ್ವರ ಎತ್ತಿದೆ. ಅಲ್ಲದೇ, ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಸೀಟ್ ಷೇರಿಂಗ್ ಮೂಲಕ ಚುನಾವಣೆ ಎದುರಿಸಿದ್ದರೆ ಖಂಡಿತವಾಗಿಯೂ ಬಿಜೆಪಿ ಸೋಲುತ್ತಿತ್ತು. ಮತಗಳ ವಿಭಜನೆಯಿಂದಾಗಿ ಬಿಜೆಪಿ ಗೆದ್ದಿದೆ ಎಂದು ತೃಣಮೂಲ ನಾಯಕಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.
ಇಂದಿರಾ ಗಾಂಧಿಗೆ ಭದ್ರತಾ ಅಧಿಕಾರಿಯಾಗಿದ್ದ ಲಾಲದುಹೋಮಾ ಈಗ ಮಿಜೋರಾಂ ಸಿಎಂ!
ಎಲ್ಲರ ನಿರೀಕ್ಷೆಯನ್ನು ಮೀರಿದ ಹಾಗೂ ಎಕ್ಸಿಟ್ ಪೋಲ್‌ಗಳ ಸಮೀಕ್ಷೆಯನ್ನು (Exit Polls) ಸುಳ್ಳಾಗಿಸಿದ ಫಲಿತಾಂಶವನ್ನು ಮಿಜೋರಾಂ ಜನರು ನೀಡಿದ್ದಾರೆ(Mizoram Election Results). ಆಡಳಿತಾರೂಢ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್(MNF)ಗೆ ಭಾರೀ ಸೋಲುಂಟಾಗಿದ್ದು, ಪ್ರತಿಪಕ್ಷ ಝೋರಾಂ ಪೀಪಲ್ಸ್ ಮೂವ್‌ಮೆಂಟ್(ZPM) ಅಧಿಕಾರದ ಗದ್ದುಗೆಗೆ ಏರಿದೆ. ಇಂದಿರಾ ಗಾಂಧಿ ಅವರ ಭದ್ರತೆಯ ಉಸ್ತುವಾರಿ ಹೊತ್ತಿದ್ದ, ಮಾಜಿ ಐಪಿಎಸ್ ಅಧಿಕಾರಿ ಲಾಲದುಹೋಮಾ (Lalduhoma) ಅವರು ಮಿಜೋರಾಂ ಮುಖ್ಯಮಂತ್ರಿಯಾಗಲಿದ್ದಾರೆ(Mizoram CM). ಸೋಮವಾರ ಪ್ರಕಟವಾದ ಎಲೆಕ್ಷನ್ ಫಲಿತಾಂಶದಲ್ಲಿ ಜೆಡ್‌ಪಿಎಂ 27, ಎಂಎನ್‌ಎಫ್ 10 ಮತ್ತು ಬಿಜೆಪಿ 2(BJP Party), ಕಾಂಗ್ರೆಸ್ 1 (Congress Party) ಸ್ಥಾನಗಳನ್ನು ಗೆದ್ದುಕೊಂಡಿವೆ. ಮಿಜೋರಾಂನಲ್ಲಿ ಒಟ್ಟು 40 ಕ್ಷೇತ್ರಗಳಿವೆ. ಈ ಮಧ್ಯೆ, ಚುನಾವಣೆಯಲ್ಲಿ ಸೋತಿರುವ ಮಿಜೋರಾಂ ಸಿಎಂ ಝೋರಮ್‌ತಂಗಾ(Zoramthanga) ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲಾಲದುಹೋಮಾ ಅವರು ಗೋವಾದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದರು. ಬಳಿಕ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಭದ್ರತೆಯ ಉಸ್ತುವಾರಿ ಜವಾಬ್ದಾರಿಗಾಗಿ ದಿಲ್ಲಿಗೆ ಆಗಮಿಸಿದರು. ಸೇವೆಯ ಬಳಿಕ ಅವರು ಝೋರಮ್ ಪೀಪಲ್ಸ್ ಮೂವ್ಮೆಂಟ್(ZPM) ರಾಜಕೀಯ ಪಕ್ಷವನ್ನು ಆರಂಭಿದರು.
1984ರಲ್ಲಿ ಲಾಲದುಹೋಮಾ ಅವರು ಲೋಕಸಭೆಗೆ ಆಯ್ಕೆಯಾಗುವ ರಾಜಕಾರಣ ಆರಂಭಿಸಿದರು. ಆದರೆ, ಅವರ ರಾಜಕಾರಣದ ಆರಂಭ ಚೆನ್ನಾಗಿರಲಿಲ್ಲ. ಯಾಕೆಂದರೆ, ಪಕ್ಷಾಂತರ ಕಾಯ್ದೆ ಅನ್ವಯ ಅವರ ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ವಿಶೇಷ ಎಂದರೆ, ಪಕ್ಷಾಂತರ ಕಾಯ್ದೆ ಜಾರಿಯ ಬಳಿಕ ಸದಸ್ಯತ್ವ ಕಳೆದುಕೊಂಡ ಮೊದಲ ವ್ಯಕ್ತಿ ಇವರು.
ಅದೇ ರೀತಿ, 2020ರಲ್ಲಿ ವಿಧಾನಸಭೆ ಸದಸ್ಯರಾಗಿದ್ದಾಗಲೂ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ತಮ್ಮ ಅನರ್ಹವಾಗಿದ್ದರು. ಹಾಗಿದ್ದೂ, 2021ರಲ್ಲಿ ನಡೆದ ಬೈಎಲೆಕ್ಷನ್‌ಲ್ಲಿ ಭರ್ಜರಿ ಜಯ ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಈಗ ಅದೇ ವ್ಯಕ್ತಿ ಮಿಜೋರಾಂನ ಸಿಎಂ ಆಗುತ್ತಿದ್ದಾರೆ.
ಎಂಎನ್‌ಎಫ್‌ಗೆ ಭಾರೀ ಸೋಲು, ಮಿಜೋರಾಂನಲ್ಲಿ ಇನ್ನು ಜೆಡ್‌ಪಿಎಂ ಆಡಳಿತ
ಎಲ್ಲರ ನಿರೀಕ್ಷೆಯನ್ನು ಮೀರಿದ ಹಾಗೂ ಎಕ್ಸಿಟ್ ಪೋಲ್‌ಗಳ ಸಮೀಕ್ಷೆಯನ್ನು (Exit Polls) ಸುಳ್ಳಾಗಿಸಿದ ಫಲಿತಾಂಶವನ್ನು ಮಿಜೋರಾಂ ಜನರು ನೀಡಿದ್ದಾರೆ(Mizoram Election Results). ಆಡಳಿತಾರೂಢ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್(MNP)ಗೆ ಭಾರೀ ಸೋಲುಂಟಾಗಿದ್ದು, ಪ್ರತಿಪಕ್ಷ ಝೋರಾಂ ಪೀಪಲ್ಸ್ ಮೂವ್‌ಮೆಂಟ್(ZPM) ಅಧಿಕಾರದ ಗದ್ದುಗೆಗೆ ಏರಿದೆ. ಸೋಮವಾರ ಪ್ರಕಟವಾದ ಎಲೆಕ್ಷನ್ ಫಲಿತಾಂಶದಲ್ಲಿ ಜೆಡ್‌ಪಿಎಂ 27, ಎಂಎನ್‌ಎಫ್ 10 ಮತ್ತು ಬಿಜೆಪಿ 2, ಕಾಂಗ್ರೆಸ್ 1 ಸ್ಥಾನಗಳನ್ನು ಗೆದ್ದುಕೊಂಡಿವೆ. ಮಿಜೋರಾಂನಲ್ಲಿ ಒಟ್ಟು 40 ಕ್ಷೇತ್ರಗಳಿವೆ. ಈ ಮಧ್ಯೆ, ಚುನಾವಣೆಯಲ್ಲಿ ಸೋತಿರುವ ಮಿಜೋರಾಂ ಸಿಎಂ ಝೋರಮ್‌ತಂಗಾ(Zoramthanga) ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. .
ಮಿಜೋರಾಂನಲ್ಲಿ ಮತ ಎಣಿಕೆ ಆರಂಭದಿಂದಲೇ ಝೋರಾಂ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ) ಪಕ್ಷವು (Mizoram Election Result) ಸ್ಪಷ್ಟ ಬಹುಮತದತ್ತ ಸಾಗಲಾರಂಭಿಸಿತು. ಒಟ್ಟು 40 ವಿಧಾನಸಭೆ ಕ್ಷೇತ್ರಗಳ ಪೈಕಿ ಪ್ರತಿಪಕ್ಷ ಝೆಡ್‌ಪಿಎಂ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಇನ್ನು ಆಡಳಿತಾರೂಢ ಎಂಎನ್‌ಎಫ್ 9, ಕಾಂಗ್ರೆಸ್ 2 ಹಾಗೂ ಬಿಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದವು. ಅಂತಿಮವಾಗಿ ಜೆಡ್‌ಪಿಎಂ ಅತಿದೊಡ್ಡ ಗೆಲುವು ಸಾಧಿಸಿತು.
ಮಿಜೋರಾಂ ಉಪ ಮುಖ್ಯಮಂತ್ರಿ ತೌನ್ಲುಯಾಗೆ ಸೋಲು
ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಲಭ್ಯವಾಗಿದೆ. ಉಪ ಮುಖ್ಯಮಂತ್ರಿ, ಎಂಎನ್‌ಎಫ್ ಪಕ್ಷದ ತೌನ್ಲುಯಾ ಅವರು ಝೆಡ್‌ಪಿಎಂ ಪಕ್ಷ ಡಬ್ಲ್ಯೂ. ಚುನಾವ್ಮಾ ಅವರ ವಿರುದ್ಧ 909 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಎಂಎನ್‌ಎಫ್‌ಗೆ ಭಾರಿ ಹಿನ್ನಡೆಯಾದಂತಾಗಿದೆ.
ಬಹುಮತದತ್ತ ಲಾಲ್ದುಹೋಮ ಅವರ ಝೆಡ್‌ಪಿಎಂ ಪಕ್ಷ
ಝೆಡ್‌ಪಿಎಂ- 26
ಎಂಎನ್‌ಎಫ್ – 10
ಬಿಜೆಪಿ – 3
ಕಾಂಗ್ರೆಸ್- 1