Site icon Vistara News

Chandrayaan 3: ಚಂದ್ರಯಾನ ನೌಕೆಯ 4ನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಸಕ್ಸೆಸ್, ಚಂದಿರನ ಅಂಗಳಕ್ಕೆ ಮತ್ತಷ್ಟು ಹತ್ತಿರ!

Chandrayaan 3

ನವದೆಹಲಿ: ಯಶಸ್ವಿಯಾಗಿ ಉಡಾವಣೆ ಕಂಡಿರುವ ಚಂದ್ರಯಾನ-3 (Chandrayaan 3) ನೌಕೆಯ ನಾಲ್ಕನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆಯನ್ನು (orbit-raising manoeuvre) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಗುರುವಾರ ಯಶಸ್ವಿಯಾಗಿ ಪೂರೈಸಿದೆ. ಬೆಂಗಳೂರಿನಲ್ಲಿರುವ ಇಸ್ರೋದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಸೆಂಟರ್ ಮೂಲಕ ಈ ಪ್ರಕ್ರಿಯೆ ಕೈಗೊಳ್ಳಲಾಗಿದೆ.

ಚಂದ್ರಯಾನ-3 ನೌಕೆಯ ಐದನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆಯು ಜುಲೈ 25ಕ್ಕೆ ಮಧ್ಯಾಹ್ನ 2ರಿಂದ 3 ಗಂಟೆ ನಡುವೆ ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತಿಳಿಸಿದೆ.

ಚಂದ್ರಯಾನ ನೌಕೆಯ ಮೂರನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆಯನ್ನು ಇಸ್ರೋ ಜುಲೈ 18ರಂದು ಪೂರೈಸಿತ್ತು. ಮುಂದಿನ ಕಕ್ಷೆ ಏರಿಸುವ ಪ್ರಕ್ರಿಯೆಯು ಜುಲೈ 20ರಂದು ಮಧ್ಯಾಹ್ನಹ 2ರಿಂದ 3 ಗಂಟೆಯವರೆಗೆ ನಿಗದಿ ಮಾಡಿತ್ತು. ಅದರಂತೆ ಯಶಸ್ವಿಯಾಗಿ ನಾಲ್ಕನೇ ಕಕ್ಷೆ ಏರಿಸುವ ಪ್ರಕ್ರಿಯೆನ್ನೂ ಪೂರೈಸಲಾಗಿದೆ. 5 ಬಾರಿ ಭೂಮಿಯನ್ನು ಸುತ್ತ ಹಾಕಲಿರುವ ಚಂದ್ರಯಾನ ನೌಕೆ ಬಳಿಕ ಭೂಮಿಯ ಗುರುತ್ವಾಕರ್ಷಣೆಯಿಂದ ಬೇರ್ಪಡಲಿದೆ ಎಂದು ಇಸ್ರೋ ಹೇಳಿದೆ. ಚಂದ್ರಯಾನ 3 ಮಿಷನ್‌ಗೆ ಜುಲೈ 14ರಂದು ಚಾಲನೆ ನೀಡಲಾಗಿತ್ತು.

ಚಂದ್ರಯಾನ-3 ನೌಕೆಯನ್ನು ಹೊತ್ತ ಜಿಎಸ್ಎಲ್‌ವಿ ಮಾರ್ಕ್ 3 ರಾಕೆಟ್ ಕಳೆದ ವಾರ ಯಶಸ್ವಿಯಾಗಿ ಉಡಾವಣೆಯಾಗಿತ್ತು. ಭವಿಷ್ಯದ ಶೋಧನೆಗಳಿಗೆ ಚಂದ್ರಯಾನ-3 ನೌಕೆ ಲ್ಯಾಂಡಿಂಗ್ ಮಹತ್ವದ್ದಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ ಅವರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Koppala News: ಇಸ್ರೋದ ಚಂದ್ರಯಾನ ಕಣ್ತುಂಬಿಕೊಂಡ ನೂರಾರು ಮಕ್ಕಳು

ಚಂದ್ರಯಾನ-3 ತುಂಬಾ ಮಹತ್ವದ ಹೆಜ್ಜೆಯಾಗಿದೆ. ಅದು ಲ್ಯಾಂಡಿಂಗ್ ಸಮಯವೂ ಅಷ್ಟೇ ಮಹತ್ವದ್ದಾಗಿದೆ. ನೀವು ಸರಿಯಾಗಿ ಲ್ಯಾಂಡ್‌ ಆಗದಿದ್ದರೆ, ನೀವು ಯಾವುದೇ ಸ್ಯಾಂಪಲ್ ತೆಗೆದುಕೊಳ್ಳಲಾಗುವುದಿಲ್ಲ, ಮಾನವರನ್ನು ಅಲ್ಲಿಗೆ ಕಳುಹಿಸಲಾಗುವುದಿಲ್ಲ. ಅಲ್ಲದೇ, ಚಂದ್ರನಲ್ಲಿ ನೆಲೆ ಕೂಡ ಸ್ಥಾಪಿಸಲು ಆಗುವುದಿಲ್ಲ. ಹಾಗಾಗಿ ಚಂದ್ರಯಾನ-3 ನೌಕೆ ಲ್ಯಾಂಡ್ ಆಗುವುದು ಬಹಳ ಮಹತ್ವದ್ದಾಗಿದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version