Site icon Vistara News

Fraud Case: ಮೆಡಿಕಲ್‌ ಸೀಟು ಪಡೆಯಲು ನಕಲಿ ಅಂಕಪಟ್ಟಿ; ವೈದ್ಯನಿಗೆ 44 ವರ್ಷಗಳ ಬಳಿಕ ಶಿಕ್ಷೆ!

arrest

arrest

ಅಹ್ಮದಾಬಾದ್: ಮೆಡಿಕಲ್ ಸೀಟು ಪಡೆಯುವುದಕ್ಕಾಗಿ ಪಿಯುಸಿ ಅಂಕಪಟ್ಟಿಯನ್ನು ತಿದ್ದುಪಡಿ ಮಾಡಿದ ಆರೋಪದಡಿ 44 ವರ್ಷಗಳ ಬಳಿಕ 60 ವರ್ಷದ ʼವೈದ್ಯʼರೊಬ್ಬರಿಗೆ ನ್ಯಾಯಾಲಯವೊಂದು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಗುಜರಾತ್‌ನ ಅಹ್ಮದಾಬಾದ್‌ನ ಪಲ್ಡಿ ನಿವಾಸಿ ಉತ್ಪಲ್ ಪಟೇಲ್ ಶಿಕ್ಷೆಗೊಳಗಾದ ವ್ಯಕ್ತಿ (Fraud Case).

ಏನಿದು ಪ್ರಕರಣ?

1980ರಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ್ದ ಉತ್ಪಲ್ ಪಟೇಲ್ 800ರಲ್ಲಿ 398 ಅಂಕ ಗಳಿಸಿದ್ದರು. ಈ 49% ಅಂಕದಿಂದ ಅವರಿಗೆ ವೈದ್ಯಕೀಯ ಕೋರ್ಸ್‌ಗೆ ಪ್ರವೇಶಾತಿ ಸಿಗಲು ಸಾಧ್ಯವಿರಲಿಲ್ಲ. ಇದರಿಂದ ಅವರು ತಮ್ಮ ಅಂಕಗಳ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸಿ ಇನ್ನೊಂದು ಮಾರ್ಕ್‌ಶೀಟ್ ಪಡೆದಿದ್ದರು. ಬಳಿಕ ಅವರು ತಮ್ಮ ಅಂಕವನ್ನು 547 ಎಂದು ತಿದ್ದುಪಡಿ ಮಾಡಿದ್ದರು. ಆಗ ಅಂಕ ಗಳಿಕೆ 68% ಆಗಿತ್ತು. ನಂತರ ಎಂಬಿಬಿಎಸ್ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿದ್ದರು. ಜತೆಗೆ ಬಿಜೆ ಮೆಡಿಕಲ್ ಕಾಲೇಜಿನಲ್ಲಿ (BJ Medical College) ಪ್ರವೇಶ ಲಭಿಸಿತ್ತು.

ಅರ್ಜಿ ಸಲ್ಲಿಸಿದ್ದ ಗುಜರಾತ್ ಸೆಕೆಂಡರಿ ಎಜುಕೇಷನ್ ಬೋರ್ಡ್

ಉತ್ಪಲ್ ಪಟೇಲ್ ಫೋರ್ಜರಿ ಬಗ್ಗೆ ಅಂದೇ ಗುಜರಾತ್ ಸೆಕೆಂಡರಿ ಎಜುಕೇಷನ್ ಬೋರ್ಡ್ (Gujarat Secondary Education Board) ಅನುಮಾನ ವ್ಯಕ್ತಪಡಿಸಿತ್ತು. ಪಟೇಲ್‌ ಪ್ರವೇಶ ಪಡೆದ ಬಿಜೆ ಮೆಡಿಕಲ್ ಕಾಲೇಜಿಗೆ ಪತ್ರ ಬರೆದು ಈ ಬಗ್ಗೆ ಎಚ್ಚರಿಕೆ ನೀಡಿತ್ತು. ಪುನರ್ ಮೌಲ್ಯಮಾಪನದ ನಂತರವೂ ಪಟೇಲ್ ಅವರ ಮಾರ್ಕ್‌ನಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಅವರು ಫೋರ್ಜರಿ ಮಾಡಿ ಮೆಡಿಕಲ್ ಸೀಟು ಗಿಟ್ಟಿಸಿದ್ದಾರೆ. ಬೋರ್ಡ್‌ ಆಫೀಸಿನಿಂದ ಖಾಲಿ ಲೆಟರ್ ಹೆಡ್ ಹಾಗೂ ಮಾರ್ಕ್‌ಶೀಟ್ ಪಡೆದು ಈ ಪೋರ್ಜರಿ ಮಾಡಿದ್ದಾರೆ. ಹೀಗಾಗಿ ಪರಿಶೀಲನೆ ನಡೆಸಿ ಅವರ ಪ್ರವೇಶಾತಿಯನ್ನು ರದ್ದುಪಡಿಸಬೇಕು ಎಂದು ಸೂಚಿಸಿತ್ತು.

ಇದನ್ನೂ ಓದಿ: Fraud Case: ಆಕೆಯ ಬಳಿ ಇದ್ದುದು ಕೇವಲ 41 ರೂ. ಆದರೂ ಐಷಾರಾಮಿ ಹೋಟೆಲ್‌ನಲ್ಲಿ ವಾಸ, 6 ಲಕ್ಷ ರೂ. ಬಿಲ್‌!

ಪ್ರಕರಣ ದಾಖಲಿಸಿದ್ದ ಕಾಲೇಜು

ಈ ಬಗ್ಗೆ ಎಚ್ಚೆತ್ತುಕೊಂಡ ಕಾಲೇಜು 1991ರಲ್ಲಿ ಶಹಿಭಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಜತೆಗೆ ಸ್ವಲ್ಪ ದಿನದಲ್ಲೇ ಪಟೇಲ್ ಮಾರ್ಕ್‌ ಶೀಟ್ ನಕಲಿ ಎಂಬುದನ್ನು ಸಾಬೀತಾಗಿತ್ತು. ಇದಾದ ನಂತರ 23 ವರ್ಷಗಳ ಬಳಿಕ ಅಂದರೆ 2014ರಲ್ಲಿ ಮೆಟ್ರೋಪಾಲಿಟನ್ ಕೋರ್ಟ್ ಪಟೇಲ್ ವಿರುದ್ಧ ವಂಚನೆ, ಪೋರ್ಜರಿ ಮತ್ತು ಕಳವಿನ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಿತ್ತು. ಈ ಪ್ರಕರಣದ ವಿಚಾರಣೆ ಬರೋಬ್ಬರಿ 44 ವರ್ಷಗಳ ನಂತರ ಇದೀಗ ಪೂರ್ಣಗೊಂಡಿದೆ. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಿ.ಎನ್.ನವೀನ್ ಅವರು ಪಟೇಲ್‌ಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 30,000 ರೂ. ದಂಡ ವಿಧಿಸಿದ್ದಾರೆ. ಬೇರೊಬ್ಬರ ಎಂಬಿಬಿಎಸ್ ಸೀಟ್ ಅನ್ನು ಪಟೇಲ್‌ ಕಸಿದುಕೊಂಡಿದ್ದಾರೆ ಎಂದು ಕೋರ್ಟ್‌ ಹೇಳಿದೆ. ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವವರು ಈ ರೀತಿ ನಡೆದುಕೊಂಡರೆ ಅದು ಇತರರನ್ನು ಇದೇ ರೀತಿಯ ಅಪರಾಧಗಳನ್ನು ಮಾಡಲು ಪ್ರೇರೇಪಿಸುತ್ತದೆ ಎಂದು ಹೇಳಿ ಪಟೇಲ್ ಅವರ ಜಾಮೀನು ಬಾಂಡ್‌ಗಳನ್ನೂ ಕೋರ್ಟ್‌ ರದ್ದು ಪಡಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version