ನವದೆಹಲಿ: ಯುಎಇನಲ್ಲಿ (UAE) ವಾಸಿಸುತ್ತಿರುವ ಭಾರತೀಯ (Indian Origin) ಮೂಲದ, ವಲಸಿಗ ರಾಜೀವ್ ಅರಿಕ್ಕಟ್ಟ (Rajeev Arikkatt) ಎಂಬುವವರಿಗೆ 1.5 ಕೋಟಿ ದಿರ್ಹಾಮ್‌ಗಳು ಜಾಕ್‌ಪಾಟ್ ಲಾಟರಿ (Jackpot) ಹೊಡೆದಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅದು 33 ಕೋಟಿ ರೂಪಾಯಿಯಾಗುತ್ತದೆ! ಬಿಗ್ ಟಿಕೆಟ್ ಅಬುಧಾಬಿ ಸಾಪ್ತಾಹಿಕ ಡ್ರಾದಲ್ಲಿ ರಾಜೀವ್ ಅರಿಕ್ಕಟ್ಟ ಅವರು ಜಾಕ್‌ಪಾಟ್ ಹೊಡೆದಿದ್ದಾರೆ. ಖಲೀಜ್ ಟೈಮ್ಸ್ ಪ್ರಕಾರ, ರಾಫೆಲ್ ಡ್ರಾ ಸಂಖ್ಯೆ 260 ರ ಸಮಯದಲ್ಲಿ ರಾಜೀವ್ ಅವರಿಗೆ 037130 ನಂಬರಿನ ಟಿಕೆಟ್ ಉಚಿತವಾಗಿ ಬಂದಿತ್ತು(Lottery Ticket). ಅದೇ ಸಂಖ್ಯೆ ಅವರ ಅದೃಷ್ಟವನ್ನು ಬದಲಾಯಿಸಿದೆ. ಈ ನಂಬರ್‌ಗಳಲ್ಲಿ ಅವರ ಇಬ್ಬರ ಮಕ್ಕಳ ಬರ್ತ್‌ಡೇಟ್ಸ್ ಕೂಡ ಇದೆ!
ಕಳೆದ ಮೂರು ವರ್ಷಗಳಿಂದ ಬಿಗ್ ಟಿಕೆಟ್ ಡ್ರಾಗಳಲ್ಲಿ ಭಾಗವಹಿಸುತ್ತಿರುವ ರಾಜೀವ್, ಪ್ರಸ್ತುತ ಅಲ್ ಐನ್‌ನಲ್ಲಿರುವ ಆರ್ಕಿಟೆಕ್ಚರಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಹೆಂಡತಿ ಮತ್ತು ಐದು ಮತ್ತು ಎಂಟು ವರ್ಷದ ಇಬ್ಬರು ಚಿಕ್ಕ ಮಕ್ಕಳೊಂದಿಗೆ ವಾಸವಾಗಿದ್ದಾರೆ. ಗೆಲ್ಲುವ ಟಿಕೆಟ್ ತಮ್ಮ ಪ್ರೀತಿಯ ಮಕ್ಕಳ ಜನ್ಮದಿನವನ್ನು ಒಳಗೊಂಡಿದ್ದವು ಎಂಬುದು ಅವರು ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಜಾಕ್‌ಪಾಟ್ ಹೊಡೆದಿದ್ದರ ಬಗ್ಗೆ ಈಗಲೂ ಅವರು ನಂಬಲು ತಯಾರಿಲ್ಲ. ಇಷ್ಟು ದೊಡ್ಡ ಮೊತ್ತದ ಕುರಿತಾದ ತಮ್ಮ ಯೋಜನೆಗಳನ್ನು ಅವರು ಇನ್ನೂ ಅಂತಿಮಗೊಳಿಸಿಲ್ಲ. ಹಾಗಿದ್ದೂ, ತಮಗೆ ದೊರೆತ ಬೃಹತ್ ಮೊತ್ತವನ್ನು ರಾಜೀವ್ ಅವರು ಇಥರ 19 ಜನರೊಂದಿಗೆ ಹಂಚಿಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಉದಾರ ನಿರ್ಧಾರವು ಅವರ ಗೆಲುವಿನ ಸಂತೋಷವನ್ನು ಹೆಚ್ಚಿಸಿದೆ.
ನಾನು 10 ವರ್ಷಗಳಿಂದ ಅಲ್ ಐನ್‌ನಲ್ಲಿ ವಾಸಿಸುತ್ತಿದ್ದೇನೆ, ಕಳೆದ 3 ವರ್ಷಗಳಿಂದ ಟಿಕೆಟ್‌ಗಳನ್ನು ಖರೀದಿಸುತ್ತಿದ್ದೇನೆ. ನಾನು ಲಾಟರಿ ಗೆದ್ದಿರುವುದು ಇದೇ ಮೊದಲ ಬಾರಿಗೆ. ಈ ಬಾರಿ ನಾನು ಮತ್ತು ನನ್ನ ಹೆಂಡತಿ 7 ಮತ್ತು 13 ಸಂಖ್ಯೆಗಳ ಟಿಕೆಟ್‌ಗಳನ್ನು ಆಯ್ಕೆ ಮಾಡಿದ್ದೇವೆ. ಇದು ನಮ್ಮ ಮಕ್ಕಳ ಜನ್ಮ ದಿನಾಂಕಗಳಾಗಿವೆ. ಎರಡು ತಿಂಗಳ ಹಿಂದೆ, ಅದೇ ಸಂಯೋಜನೆಯೊಂದಿಗೆ ನಾನು 1 ಮಿಲಿಯನ್ ದಿರ್ಹಂ ಅನ್ನು ಕಳೆದುಕೊಂಡೆ, ಆದರೆ ಈ ಬಾರಿ ನಾನು ಅದೃಷ್ಟಶಾಲಿಯಾಗಿದ್ದೆ ಎಂದು ರಾಜೀವ್ ಜನವರಿ 11 ರಂದು ಖರೀದಿಸಿದ ಟಿಕೆಟ್ ಬಗ್ಗೆ ಖಲೀಜ್ ಟೈಮ್ಸ್‌ಗೆ ತಿಳಿಸಿದ್ದಾರೆ.
ಕೇರಳದ 40 ವರ್ಷದ ವ್ಯಕ್ತಿ ಗೆಲ್ಲುವ ಭರವಸೆಯನ್ನು ಹೊಂದಿದ್ದರು, ಅವರು ಡ್ರಾಗಾಗಿ ಒಟ್ಟು ಆರು ಟಿಕೆಟ್‌ಗಳನ್ನು ಹೊಂದಿದ್ದರು. ಅಚ್ಚರಿ ಎಂದರೆ ಕಾಂಪ್ಲಿಮೆಂಟರಿ ಟಿಕೆಟ್ ಅವರ ಗೆಲುವನ್ನು ಖಾತ್ರಿಪಡಿಸಿದೆ. “ನಾನು ಬಿಗ್ ಟಿಕೆಟ್‌ನಿಂದ ವಿಶೇಷ ಕೊಡುಗೆಯನ್ನು ಪಡೆದುಕೊಂಡಿದ್ದೇನೆ, ಆದರೆ ನಾನು ಎರಡನ್ನು ಖರೀದಿಸಿದಾಗ ನಾನು ನಾಲ್ಕು ಟಿಕೆಟು ಉಚಿತವಾಗಿ ಸಿಕ್ಕಿದ್ದವು. ನಾನು ಯಾವಾಗಲೂ ಗೆಲ್ಲುವ ಭರವಸೆ ಹೊಂದಿದ್ದರೂ, ಈ ಬಾರಿ ಡ್ರಾದಲ್ಲಿ ಆರು ಟಿಕೆಟ್‌ಗಳೊಂದಿಗೆ ನಿರೀಕ್ಷೆಗಳು ಹೆಚ್ಚಾಗಿತ್ತು ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Lottery: ಅಬ್ಬಬ್ಬಾ ಲಾಟರಿ; ಕೇರಳದ ಯುವಕನಿಗೆ ಯುಎಇಯಲ್ಲಿ ಒಲಿಯಿತು 45 ಕೋಟಿ ರೂ.