Site icon Vistara News

Freebies politics : ಆಂಧ್ರ ಚುನಾವಣೆ ಗೆಲ್ಲಲು ಕಾಂಗ್ರೆಸ್‌ನ ಗ್ಯಾರಂಟಿ ಮಾರ್ಗ ಹಿಡಿದ ಚಂದ್ರಬಾಬು ನಾಯ್ಡು, ಏನೇನು ಫ್ರೀ?

Chandrababu naidu

#image_title

ಅಮರಾವತಿ: ಆಂಧ್ರಪ್ರದೇಶದಲ್ಲಿ 2024ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗಾಗಿ ಟಿಡಿಪಿ ನಾಯಕ ಹಾಗೂ ಮಾಜಿ ಸಿಎಂ ಎನ್‌ ಚಂದ್ರಬಾಬು ನಾಯ್ಡು ಅವರು ಫ್ರೀಬೀಸ್‌ ಘೋಷಣೆಗಳಿಗೆ (Freebies politics) ಮೊರೆ ಹೋಗಿದ್ದಾರೆ. ರೈತರು, ಮಹಿಳೆಯರು, ನಿರುದ್ಯೋಗಿ ಯುವ ಜನತೆಗೆ ಹಲವಾರು ಉಚಿತ ಭಾಗ್ಯಗಳನ್ನು ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದಾರೆ. ಸಾಮಾನ್ಯವಾಗಿ ಅಭಿವೃದ್ಧಿ ರಾಜಕಾರಣದ ಜಪ ಮಾಡುತ್ತಿದ್ದ ಚಂದ್ರ ಬಾಬು ನಾಯ್ಡು ಇದೀಗ ಯೂ ಟರ್ನ್‌ ತೆಗೆದುಕೊಂಡಿದ್ದಾರೆ.

ಮಹಿಳೆಯರಿಗೆ ಏನು ಗ್ಯಾರಂಟಿ?

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಗೆದ್ದರೆ ಆಂಧ್ರಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ಭವಿಷ್ಯಕ್ತು ಗ್ಯಾರಂಟಿ ಯೋಜನೆಯ ಅಡಿಯಲ್ಲಿ (Bhavishyathu Gurantee scheme) (ಭವಿಷ್ಯಕ್ಕಾಗಿ ಗ್ಯಾರಂಟಿ) ಯೋಜನೆಯ ಅಡಿಯಲ್ಲಿ ಮಾಸಿಕ 1,500 ರೂ. ನೀಡಲಾಗುವುದು ಎಂದು ಘೋಷಿಸಿದ್ದಾರೆ. ಎಲ್ಲ ತಾಯಂದಿರಿಗೆ ವಾರ್ಷಿಕ 15,000 ರೂ. ವಿತರಿಸಲಾಗುವುದು. ಆಂಧ್ರಪ್ರದೇಶ ಸಾರಿಗೆ ಬಸ್‌ಗಳಲ್ಲಿ (ASRTC Buses) ಎಲ್ಲ ಮಹಿಳೆಯರಿಗೆ ಉಚಿತವಾಗಿ ಬಸ್‌ ಪ್ರಯಾಣ ಕಲ್ಪಿಸಲಾಗುವುದು ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಘೋಷಿಸಿದ್ದಾರೆ.

20 ಲಕ್ಷ ಉದ್ಯೋಗ ಸೃಷ್ಟಿ, ರೈತರಿಗೆ ವಾರ್ಷಿಕ 20,000 ರೂ.:

ಪಕ್ಷ ಅಧಿಕಾರಕ್ಕೆ ಬಂದರೆ ಯುವ ಗಾಳಮ್‌ ಯೋಜನೆಯಡಿಯಲ್ಲಿ ನಾನಾ ಸರ್ಕಾರಿ ಇಲಾಖೆಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು. ನಿರುದ್ಯೋಗಿ ಯುವಜನತೆಗೆ ಮಾಸಿಕ 3,000 ರೂ. ಭತ್ಯೆ ನೀಡಲಾಗುವುದು, ರೈತರಿಗೆ ವಾರ್ಷಿಕ 20,000 ರೂ, ಕೃಷಿ ವೆಚ್ಚ ನೆರವು ನೀಡಲಾಗುವುದು ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಇದಲ್ಲದೆ ಸುರಕ್ಷಿತ ಕುಡಿಯುವ ನೀರನ್ನು ಪ್ರತಿ ಮನೆಗೂ ತಲುಪಿಸಲಾಗುವುದು ಎಂದು ಘೋಷಿಸಿದ್ದಾರೆ. ಟಿಡಿಪಿಯ ವಾರ್ಷಿಕ ಸಮಾವೇಶ ಮಹಾನಾಡು ಕಾರ್ಯಕ್ರಮವು ಪೂರ್ವ ಗೋದಾವರಿ ಜಿಲೆಲ ರಾಜಮಹೇಂದ್ರಾವರಮ್‌ನಲ್ಲಿ ಭಾನುವಾರ ನಡೆಯಿತು. ಅಲ್ಲಿ ಇವುಗಳನ್ನು ಘೋಷಿಸಲಾಯಿತು.

ಆಂಧ್ರಪ್ರದೇಶದಲ್ಲಿ ಹಾಲಿ ಆಡಳಿತಾರೂಢ ವೈಎಸ್‌ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಪಕ್ಷವನ್ನು ಮಣಿಸಲು ಚಂದ್ರಬಾಬು ನಾಯ್ಡು ಇದೀಗ ಫ್ರೀಬೀಸ್‌ ಮಾರ್ಗ ತುಳಿದಿದ್ದಾರೆ. ಜಗನ್‌ ಅವರೂ ಈ ಹಿಂದೆ ಹಲವಾರು ಉಚಿತ ಯೋಜನೆಗಳನ್ನು ಘೋಷಿಸಿ ಅಧಿಕಾರಕ್ಕೇರಿದ್ದರು.

2024ರಲ್ಲಿ ಆಂಧ್ರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಾರ್ಟಿಯನ್ನೇನಾದರೂ ನೀವು ತಿರಸ್ಕಾರ ಮಾಡಿದರೆ, ಅದೇ ನನ್ನ ಕೊನೇ ಚುನಾವಣೆಯಾಗಲಿದೆ.’ ಎಂದು ಜನರ ಎದುರು ಮತ್ತೆ ತುಂಬ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ನಾನು ಮತ್ತೆ ಆಂಧ್ರಪ್ರದೇಶ ವಿಧಾನಸಭೆಗೆ ಕಾಲಿಡಬೇಕು, ನಾನು ರಾಜಕೀಯದಲ್ಲಿಯೇ ಉಳಿಯಬೇಕು, ಆಂಧ್ರಪ್ರದೇಶಕ್ಕೆ ನ್ಯಾಯ ಸಿಗಬೇಕು ಎಂದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ನೀವು ಗೆಲ್ಲಿಸಬೇಕು. ಹಾಗೊಮ್ಮೆ ನಾನು ಗೆಲ್ಲದೇ ಇದ್ದರೆ, ಅದೇ ನನ್ನ ಕೊನೇ ಚುನಾವಣೆ ಆಗಲಿದೆ. ನೀವು ನನ್ನನ್ನು ಆಶೀರ್ವಾದ ಮಾಡುತ್ತೀರಲ್ಲ?, ನೀವು ನನ್ನ ಮೇಲೆ ನಂಬಿಕೆ ಇಡುತ್ತೀರಲ್ಲ?’ ಎಂದು ಚಂದ್ರಬಾಬು ನಾಯ್ಡು ನೆರೆದಿದ್ದ ಜನರ ಎದುರು ಕೇಳಿದ್ದಾರೆ. ಆಗ ಅಲ್ಲಿ ಇದ್ದ ಜನರು ಅತ್ಯುತ್ಸಾಹದಿಂದ ‘ಖಂಡಿತ ನಿಮ್ಮನ್ನು ಗೆಲ್ಲಿಸುತ್ತೇವೆ’ ಎಂದು ಹೇಳಿದ್ದಾರೆ.

‘ರಾಜ್ಯದ ಭವಿಷ್ಯಕ್ಕಾಗಿ, ಮಕ್ಕಳ ಏಳ್ಗೆಗಾಗಿ ನಾನು ಹೋರಾಡುತ್ತೇನೆ. ನಾನು ಈ ಹಿಂದೆಯೂ ಆಂಧ್ರಪ್ರದೇಶದಲ್ಲಿ ಅತ್ಯುತ್ತಮ ಆಡಳಿತ ಕೊಟ್ಟಿದ್ದೆ. ಈಗ ಅನೇಕರು ನನ್ನ ವಯಸ್ಸಿನ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಸಿಎಂ ಹುದ್ದೆ ಬೇಕಾ? ಕೇಳುತ್ತಿದ್ದಾರೆ. ಆದರೆ ನಾನು ಮತ್ತು ಪ್ರಧಾನಿ ಮೋದಿ ಒಂದೇ ವಯಸ್ಸಿನವರು. ಬೈಡೆನ್​ ಅವರು ಅಮೆರಿಕ ಅಧ್ಯಕ್ಷರಾಗಿದ್ದು, ಅವರ 79ನೇ ವಯಸ್ಸಿನಲ್ಲಿ’ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಇದನ್ನೂ ಓದಿ: Andhra Pradesh Stampede | ಚಂದ್ರಬಾಬು ನಾಯ್ಡು ರ‍್ಯಾಲಿ ವೇಳೆ ಮತ್ತೆ ಕಾಲ್ತುಳಿತ, ಮೂವರ ಸಾವು, ಹಲವರಿಗೆ ಗಾಯ

Exit mobile version